ವರ್ಷಕ್ಕೆ ರೂ. 8.27 ಕೋಟಿ ಗಳಿಸುತ್ತಿರುವ ಇನ್ಫ್ಲೂಯೆನ್ಸ್ರ್ ನಾಯಿ; ಎಷ್ಟು ಮುದ್ದಾಗಿದ್ದಾನೆ ನೋಡಿ ಟಕರ್ ಬಡ್ಜಿನ್!
ಪೋರ್ಟ್ರೇಟ್ ಕಂಪನಿ ಪ್ರಿಂಟೆಡ್ ಪೆಟ್ ಮೆಮೊರೀಸ್‌ನ ಸಂಶೋಧನೆಯ ಪ್ರಕಾರ ಟಕರ್ ನಂ 1 ನಾಯಿ ಇನ್ಫ್ಲೂಯೆನ್ಸ್ರ್
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ (Social Media) ನಾವು ದಿನನಿತ್ಯ ನೋಡುವ ಇನ್ಫ್ಲೂಯೆನ್ಸ್ರ್ಗಳು (Influencers) ಸಾಕಷ್ಟು ಹಣ ಮಾಡುತ್ತಾರೆ ಎಂಬ ಊಹೆ ಸಾಮಾನ್ಯ ಜನರಲ್ಲಿ ಇರುವುದು ಸಹಜ. ಆದ್ರೆ ಇಲ್ಲಿ ಮುದ್ದಾದ ಗೋಲ್ಡನ್ ರಿಟ್ರೀವರ್ (Golden Retriever, Tucker) ಒಂದು ನೀವು ಊಹಿಸಲಾಗದಷ್ಟು ಹಣ ಸಾಮಾಜಿಕ ಜಾಲತಾಣಗಳ ಮೂಲಕ ಗಳಿಸುತ್ತಿದೆ. ಈ ಐದು ವರ್ಷ ವಯಸ್ಸಿನ ಗೋಲ್ಡನ್ ರಿಟ್ರೈವರ್ ಹೆಸರು ಟಕರ್ ಬಡ್ಜಿನ್, ವರ್ಷಕ್ಕೆ $1 ಮಿಲಿಯನ್ (ರೂ. 8.27 ಕೋಟಿ) ಗಳಿಸುವ ಸಾಮಾಜಿಕ ಮಾಧ್ಯಮದ ಸ್ಟಾರ್ ಆಗಿದೆ. ಪೋರ್ಟ್ರೇಟ್ ಕಂಪನಿ ಪ್ರಿಂಟೆಡ್ ಪೆಟ್ ಮೆಮೊರೀಸ್‌ನ ಸಂಶೋಧನೆಯ ಪ್ರಕಾರ ಟಕರ್ ನಂ 1 ನಾಯಿ ಇನ್ಫ್ಲೂಯೆನ್ಸ್ರ್. ಟಕರ್ ಎರಡು ವರ್ಷ ವಯಸ್ಸಿನಿಂದಲೂ ಪ್ರಾಯೋಜಿತ ಜಾಹೀರಾತುಗಳಿಂದ ಸಾಕಷ್ಟು ಹಣ ಗಳಿಸುತ್ತಿದೆ.
“ಯೂಟ್ಯೂಬ್-ಪಾವತಿಸಿದ ಪೋಸ್ಟ್ 30-ನಿಮಿಷದ ಪ್ರಿ-ರೋಲ್‌ಗೆ $40,000 ರಿಂದ $60,000 ವರೆಗೆ ಟಕರ್ ಗಾಳಿಸುತ್ತಿದ್ದಾನೆ. ಇನ್ಸ್ಟಾಗ್ರಾಮ್ನಲ್ಲಿ ಮೂರರಿಂದ ಎಂಟು ಪೊಸ್ಟ್ಗಳಿಗೆ $20,000 ಗಳಿಸುತ್ತೇವೆ”, ಎಂದು ಟಕ್ಕರ್‌ನ ಮಾಲೀಕ ಕರ್ಟ್ನಿ ಬಡ್ಜಿನ್ ಅವರು ನ್ಯೂಯಾರ್ಕ್ ಪೋಸ್ಟ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ ಟಕ್ಕರ್ ಹಂಚಿಕೊಂಡ ಪೋಸ್ಟ್
View this post on Instagram
31 ವರ್ಷದ ಕೋರ್ಟ್ನಿ, ಮತ್ತು ಸಿವಿಲ್ ಇಂಜಿನಿಯರ್ ಆಗಿರುವ ಆಕೆಯ ಪತಿ ಮೈಕ್, ಟಕರ್ ಮತ್ತು ಅವನ ನಾಯಿಮರಿ ಟಾಡ್ನ ಪೂರ್ಣ ಸಮಯದ ನಿರ್ವಹಣೆಗಾಗಿ ತಮ್ಮ ಕೆಲಸವನ್ನು ತೊರೆದರು. ಕೋರ್ಟ್ನಿ ಇವರಿಬ್ಬರಿಗಾಗಿ ಇನ್ಸ್ಟಾಗ್ರಾಮ್ನಲ್ಲಿ ಅಕೌಂಟ್ ಒಂದನ್ನು ತೆರೆದಿದ್ದಾರೆ. 2018 ರ ಜೂನ್‌ನಲ್ಲಿ ಎಂಟು ವಾರಗಳ ವಯಸ್ಸಿನ ನಾಯಿಯನ್ನು ದತ್ತು ಪಡೆಡಿದ್ದಾರೆ. ಒಂದು ತಿಂಗಳ ನಂತರ, ಈ ಮುದ್ದಾದ ನಾಯಿಮರಿ ಐಸ್ ಕ್ಯೂಬ್‌ನಲ್ಲಿ ಪಾವಿಂಗ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ.
View this post on Instagram
ಇದನ್ನೂ ಓದಿ: ‘ಹಿಟ್ಲರನಿಗೆ ಜಯವಾಗಲಿ!’ ಎಂದು ಕೆಲಸಗೇಡಿ ಕೆಲಸ ಕಳೆದುಕೊಂಡ ಕತೆ
ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಅನ್ನು ವೈರಲ್ ಆಗಿದ್ದನ್ನು ಕಂಡು “ನನ್ನಂತೆ ಅನೇಕ ಜನರು ನನ್ನ ನಾಯಿಯ ಬಗ್ಗೆ ಆಸಕ್ತಿ ಹೊಂದಿದ್ದರು ಎಂದು ನಾನು ಭಾವಿಸಿದೆ. ಟಕರ್ 6 ತಿಂಗಳ ವಯಸ್ಸಿನವನಾಗಿದ್ದಾಗ, ಅವನು 60,000 ಅನುಯಾಯಿಗಳನ್ನು ಹೊಂದಿದ್ದನು… ಇದು ಹುಚ್ಚುತಾನೇ ಹೋಯಿತು,” ಎಂದು ಕರ್ಟ್ನಿ ಹೇಳಿದರು. ಟಕ್ಕರ್ ಈಗ ಸಾಮಾಜಿಕ ಮಾಧ್ಯಮದಾದ್ಯಂತ ಸುಮಾರು 25 ಮಿಲಿಯನ್ ಅಭಿಮಾನಿಗಳನ್ನು ಹೊಂದಿದೆ. ಟಿಕ್‌ಟಾಕ್‌ನಲ್ಲಿ 11.1 ಮಿಲಿಯನ್, ಯೂಟ್ಯೂಬ್‌ನಲ್ಲಿ 5.1 ಮಿಲಿಯನ್, ಫೇಸ್‌ಬುಕ್‌ನಲ್ಲಿ 4.3 ಮಿಲಿಯನ್. ಇನ್ಸ್ಟಾಗ್ರಾಮ್ನಲ್ಲಿ 3.4 ಮಿಲಿಯನ್ ಮತ್ತು ಟ್ವಿಟರ್ನಲ್ಲಿ 62,400 ಅನುಯಾಯಿಗಳನ್ನು ಹೊಂದಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ