ವರ್ಷ ವರ್ಷ ಎಂದರೆ ವಸಂತ ಋತುವಿನ ಆರಂಭ. ಎಲ್ಲೆಡೆ ಗಿಡ ಮರಗಳಲ್ಲಿ ಚಿಗುರೆಲೆಗಳು ಪ್ರಕೃತಿ ದೇವಿಗೆ ಹಸಿರು ಸೀರೆಯನ್ನು ಉಡಿಸಿದಂತೆ ಕಾಣುತ್ತದೆ. ಮಕರಂದಗಳನ್ನು ಬೀರುವ ಹೂವುಗಳು ಚಿಗುರೊಡೆಯುವ ಸಮಯ. ಇದೇ ಥೀಮ್ ಇಟ್ಟುಕೊಂಡು ಗೂಗಲ್ ವಿಶೇಷ ಡೂಡಲ್(Google doodle) ರಚಿಸಿದೆ. ಇದು ವಸಂತ ಕಾಲವನ್ನು ಸ್ವಾಗತಿಸಿ ಪರ್ಷಿಯನ್ನರ ಹೊಸ ವರ್ಷ(Nowruz ) ವನ್ನು ಸ್ವಾಗತಿಸಿದೆ. ಪ್ರತೀ ವರ್ಷ ಮಾರ್ಚ್ 21ರಂದು ಇರಾನ್ ಅಥವಾ ಪರ್ಷಿಯನ್ನಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ.
ಇರಾನಿನ ಧರ್ಮವಾದ ಝೋರಾಸ್ಟ್ರಿಯನ್ ಧರ್ಮದಲ್ಲಿ ಈ ಆಚರಣೆ ಹುಟ್ಟಿಕೊಂಡಿತು. ಆದರೆ ಇರಾನಿನಲ್ಲಿ ಮಾತ್ರವಲ್ಲದೇ ಮಧ್ಯ ಮತ್ತು ಪಶ್ಚಿಮ ಏಷ್ಯಾದ ಅನೇಕ ಸಮುದಾಯಗಳಿಂದ ಈ ಹೊಸ ವರ್ಷದ ಹಬ್ಬವನ್ನು ಆಚರಿಸಲಾಗುತ್ತದೆ. ನೌರುಜ್ ಹಬ್ಬವು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಆರಂಭವನ್ನು ಸೂಚಿಸುತ್ತದೆ. ಗೂಗಲ್ ವಿಶೇಷವಾಗಿ ವಿಶೇಷವಾಗಿ ಹೂವುಗಳಿಂದ ಕಲಾತ್ಮಕ ಡೂಡಲ್ ರಚಿಸುವ ಮೂಲಕ ಹೊಸ ವರ್ಷದ ಶುಭಾಶಯ ತಿಳಿಸಿದ ಪೋಸ್ಟ್ ಇಲ್ಲಿದೆ ನೋಡಿ.
New Google Doodle has been released: “Nowruz 2023” 🙂#google #doodle #designhttps://t.co/xifH7Yk4US pic.twitter.com/RBk49XUgmX
— Google Doodles EN (@Doodle123_EN) March 20, 2023
ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ ಬಾಡಿಗೆ ಬೇಕಂದ್ರೆ ಲಿಂಕ್ಡ್ಇನ್ ಪ್ರೊಫೈಲ್ ಕೊಡಬೇಕು, ಪೋಸ್ಟ್ ವೈರಲ್
ಟುಲಿಪ್ಸ್, ಹೈಸಿಂತ್, ಆರ್ಕಿಡ್ಗಳಂತಹ ಕಲರ್ ಫುಲ್ ಹೂವುಗಳನ್ನು ನೀವಿಲ್ಲಿ ಡೂಡಲ್ನಲ್ಲಿ ಕಾಣಬಹುದು. ಇಂದಿನ ಡೂಡಲ್ ವಸಂತಕಾಲದ ಆರಂಭವನ್ನು ಗುರುತಿಸುವ ಹಿಂದಿನ ಕಾಲದಿಂದಲೂ ಪರ್ಷಿಯನ್ ದೇಶಗಳಲ್ಲಿ ಆಚರಿಸಿಕೊಂಡು ಹಬ್ಬವಾಗಿದೆ. ಪ್ರತಿ ವರ್ಷ ಈ ದಿನದ ಪ್ರಪಂಚದಾದ್ಯಂತ 300 ದಶಲಕ್ಷಕ್ಕೂ ಹೆಚ್ಚು ಆಚರಿಸುತ್ತಾರೆ ಎಂದು ಗೂಗಲ್ ತನ್ನ ಟ್ವಟರ್ ಖಾತೆಯಲ್ಲಿ ಬರೆದು ಶುಭಾಶಯ ತಿಳಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:46 am, Tue, 21 March 23