ಜನಕ ರಾಜನ ಪುತ್ರಿ ಸೀತೆಯ ಸ್ವಯಂವರದಲ್ಲಿ ಯಾರು ಶಿವ ಧನಸ್ಸನ್ನು ಎತ್ತುತ್ತಾರೋ ಅವರಿಗೆ ಸೀತೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ಜನಕ ರಾಜ ಶರತ್ತನ್ನು ವಿಧಿಸಿದ್ದರು. ಈ ಸ್ವಯಂವರದಲ್ಲಿ ಹಲವಾರು ರಾಜ್ಯದ ರಾಜರುಗಳು, ರಾಜ ಕುಮಾರರು, ಚಕ್ರವರ್ತಿಗಳು ಭಾಗವಹಿಸಿದ್ದರು. ಆದರೆ ಇವರ್ಯಾರಿಗೂ ಶಿವ ಧನಸ್ಸನ್ನು ಎತ್ತಲು ಬಿಡಿ ಅಲ್ಲಾಡಿಸಲು ಕೂಡಾ ಸಾಧ್ಯವಾಗಲಿಲ್ಲ. ಕೊನೆಗೆ ಶ್ರೀರಾಮನು ಶಿವ ಧನಸ್ಸನ್ನು ಎತ್ತಿ ಬಿಲ್ಲನ್ನು ಮುರಿದನು. ಹೀಗೆ ಷರತ್ತಿನಲ್ಲಿ ಗೆದ್ದ ಶ್ರೀರಾಮನಿಗೆ ಸೀತೆಯನ್ನು ಮದುವೆ ಮಾಡಿ ಕೊಟ್ಟ ʼಸೀತಾ ಸ್ವಯಂವರʼದ ಕಥೆಯನ್ನು ನೀವೆಲ್ಲರೂ ಕೇಳಿರುತ್ತೀರಿ ಅಲ್ವಾ. ಇಲ್ಲೊಂದು ಮದುವೆ ಕಾರ್ಯಕ್ರಮದಲ್ಲಿಯೂ ಸೀತಾ ಸ್ವಯಂವರದ ಈ ಕಥೆಯನ್ನು ಮರು ಸೃಷ್ಟಿ ಮಾಡಿದ್ದು, ಈ ಸುಂದರ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದೆ.
ವರ ಕುದುರೆ ಏರಿ ಮದುವೆ ಮನೆಗೆ ಆಗಮಿಸುವಂತಹ ಅಥವಾ ವಧು ಬುಲೆಟ್ ಏರಿ ಎಂಟ್ರಿ ಕೊಡುವಂತಹ ದೃಶ್ಯಗಳನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಶಿಷ್ಟ ಮದುವೆ ನಡೆದಿದ್ದು, ಸೀತಾ ಸ್ವಯಂವರ ಥೀಮ್‌ನಲ್ಲಿ ವಧುವನ್ನು ವೇದಿಕೆಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ಹೌದು ಈ ಮದುವೆಯಲ್ಲಿ ಸೀತಾ ಸ್ವಯಂವರದ ಕಥೆಯನ್ನು ಮರು ಸೃಷ್ಟಿ ಮಾಡಿದ್ದು, ಈ ದೃಶ್ಯ ಸಖತ್ ವೈರಲ್ ಆಗುತ್ತಿದೆ.
Commentsshalla ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೆಲ ಪುರುಷರು ಬಿಲ್ಲನ್ನು ಎತ್ತಲು ಪ್ರಯತ್ನಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಕೊನೆಗೆ ವರ ಶ್ರೀರಾಮನಂತೆ ಬಿಲ್ಲನ್ನು ಎತ್ತಿ ಬಾಣವನ್ನು ಬಿಟ್ಟು ವಧುವನ್ನು ವೇದಿಗೆಕೆ ಅದ್ದೂರಿಯಾಗಿ ಸ್ವಾಗತಿಸಿದ್ದಾನೆ.
ಇದನ್ನೂ ಓದಿ: ತಾಯಿ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದ ವೇಳೆ ರಸ್ತೆಯತ್ತ ಓಡಿ ಹೋದ ಕಂದಮ್ಮ; ಮುಂದೇನಾಯ್ತು ನೋಡಿ…
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಕಲಿಯುಗದಲ್ಲಿ ಸೀತಾರಾಮರಂತಹ ಪವಿತ್ರ ಪ್ರೇಮ ಎಲ್ಲೂ ಇಲ್ಲ, ಹಾಗಾಗಿ ಇದನ್ನೆಲ್ಲಾ ಮಾಡುವ ಅವಶ್ಯಕತೆ ಇಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಾವಾಗ ವನವಾಸಕ್ಕೆ ಹೋಗ್ತಿರಾ?ʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯ ತುಂಬಾನೆ ಮುದ್ದಾಗಿದೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Tue, 10 December 24