ಸಾಮಾನ್ಯವಾಗಿ ಮದುವೆ ಅಂದಾಕ್ಷಣ ಸಂಭ್ರಮ, ಸಡಗರ ಜೊತೆಗೆ ಡಾನ್ಸ್ ಕಾರ್ಯಕ್ರಮ ಹಮ್ಮಿಕೊಂಡು ದಿನವನ್ನು ಖುಷಿಯಿಂದ ಆಚರಿಸುತ್ತಾರೆ. ಮದುವೆಯ ಆರತಕ್ಷತೆಯ ದಿನದಂದು ವರನು ತನ್ನ ಅಮ್ಮ ಮತ್ತು ಅತ್ತೆಯೊಂದಿಗೆ ಡಾನ್ಸ್ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 1998ರಲ್ಲಿ ತೆರೆಕಂಡ ಕುಚ್ ಕುಚ್ ಹೋತಾ ಹೈ ಚಿತ್ರದ ಜನಪ್ರಿಯ ಹಾಡಿಗೆ ವರನು ತನ್ನ ಅತ್ತೆ, ಅಮ್ಮನ ಜೊತೆಗೂಡಿ ಹೆಜ್ಜೆ ಹಾಕಿದ್ದಾನೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಅಟ್ಲಾಂಟಾ ಮೂಲದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಜಲ್ಲಿ ಪಟೇಲ್ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ತನ್ನ ಪತಿ ಶಾಹಿಲ್ ನೃತ್ಯ ಮಾಡುತ್ತಿರುವ ವಿಡಿಯೊವಿದು ಎಂದು ವಿಡಿಯೋ ಪೋಸ್ಟ್ನಲ್ಲಿ ಶೀರ್ಷಿಕೆ ಹಂಚಿಕೊಂಡಿದ್ದಾರೆ. ಇಬ್ಬರು ತಾಯಿಯರೊಂದಿಗೆ ನೃತ್ಯ ಮಾಡಬೇಕು ಎಂಬುದು ಶಾಹಿಲ್ ಅವರ ಆಸೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಅವರು ಕುಚ್ ಕುಚ್ ಹೋತಾ ಹೈ ಚಿತ್ರದ ಹಾಡಿಗೆ ನೃತ್ಯ ಮಾಡಿದರು, ಇದನ್ನು ನೋಡಿ ನನ್ನ ಹೃದಯ ಕರಗಿತು, ಸಂಪೂರ್ಣ ನೃತ್ಯದ ಹಾಡನ್ನು ಪೋಸ್ಟ್ ಮಾಡಲು ಸಾಧ್ಯವಾಗಿಲ್ಲ ಎಂದು ಬರೆಯುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ.
ವಿಡಿಯೋ ಕ್ಲಿಪ್ಅನ್ನು ಕೆಲವು ದಿನಗಳ ಹಿಂದಷ್ಟೇ ಪೋಸ್ಟ್ ಮಾಡಲಾಗಿದ್ದು, 3 ಲಕ್ಷಕ್ಕೂ ಹೆಚ್ಚಿನ ಲೈಕ್ಸ್ಗಳನ್ನು ಗಳಿಸಿಕೊಂಡಿದೆ. ಜತೆಗೆ 5 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ತುಂಬಾ ಸುಂದರವಾಗಿದೆ ಎಂಬ ಪ್ರತಿಕ್ರಿಯೆಗಳನ್ನು ನೆಟ್ಟಿಗರು ತಿಳಿಸಿದ್ದಾರೆ. ನನ್ನ ಮಗನ ಮದುವೆ ಸಮಾರಂಭದಲ್ಲಿಯೂ ಸಹ ಇದೇ ರೀತಿಯ ನೃತ್ಯ ಮಾಡಬೇಕೆಂಬುದು ನನ್ನ ಆಸೆ ಎಂದು ಓರ್ವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: