Viral Video: ಮನೆಯ ಬಾಗಿಲ ಬಳಿ ಕುಳಿತಿದ್ದ ದೈತ್ಯಾಕಾರದ ನಾಗರಹಾವು ನೋಡಿ ಮನೆಯವರು ಕಂಗಾಲು; ದೃಶ್ಯ ಕ್ಯಾಮೆರಾದಲ್ಲಿ ಸೆರೆ​

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ದೃಶ್ಯಗಳಲ್ಲಿ ಕೆಲವು ತಮಾಷೆಯಾಗಿರುತ್ತದೆ. ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತವೆ. ಇದೀಗ ವೈರಲ್ ಆದ ವಿಡಿಯೋ ನೋಡಿ ತುಂಬಾ ಭಯಾನಕ ದೃಶ್ಯ ಎಂಬ ಅಭಿಪ್ರಾಯ ಕೇಳಿ ಬಂದಿದೆ.

Viral Video: ಮನೆಯ ಬಾಗಿಲ ಬಳಿ ಕುಳಿತಿದ್ದ ದೈತ್ಯಾಕಾರದ ನಾಗರಹಾವು ನೋಡಿ ಮನೆಯವರು ಕಂಗಾಲು; ದೃಶ್ಯ ಕ್ಯಾಮೆರಾದಲ್ಲಿ ಸೆರೆ​
ಮನೆಯ ಬಾಗಿಲ ಬಳಿ ಕುಳಿತಿದ್ದ ದೈತ್ಯಾಕಾರದ ನಾಗರಹಾವು ನೋಡಿ ಮನೆಯವರು ಕಂಗಾಲು

ದೈತ್ಯಾಕಾರದ ನಾಗರಹಾವು ಬಾಗಿಲಲ್ಲಿ ಕುಳಿತಿದ್ದ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಈ ದೈತ್ಯಾಕಾರದ ಹಾವು ಬಾಗಿಲಲ್ಲಿ ಹೊರಬಿದ್ದಂತೆಯೇ ಓರ್ವ ದೃಶ್ಯವನ್ನು ವಿಡಿಯೋ ಮಾಡುತ್ತಿದ್ದಾನೆ. ಅವನನ್ನು ನೋಡಿದಾಕ್ಷಣ ವ್ಯಕ್ತಿಯ ಮೇಲೆ ಆಕ್ರಮಣ ಮಾಡುತ್ತಿರುವ ಹಾವಿನ ದೃಶ್ಯವನ್ನು ವಿಡಿಯೋದಲ್ಲಿ ಗಮನಿಸಬಹುದು. ಈ ಆಘಾತಕಾರಿ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ದೃಶ್ಯಗಳಲ್ಲಿ ಕೆಲವು ತಮಾಷೆಯಾಗಿರುತ್ತದೆ. ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತವೆ. ಇದೀಗ ವೈರಲ್ ಆದ ವಿಡಿಯೋ ನೋಡಿ ತುಂಬಾ ಭಯಾನಕ ದೃಶ್ಯ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಕೆಲವರು ನಾಗರ ಹಾವನ್ನು ನೋಡಿ ಭಯಗೊಂಡಿದ್ದಾರೆ. ಹಾವಿನ ಎದುರು ಹೋಗುವುದು ಅಪಾಯಕಾರಿ ಎಂದು ಕೆಲವರು ಎಚ್ಚರಿಸಿದ್ದಾರೆ.

24 ಸೆಕೆಂಡುಗಳಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 15 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋಕ್ಕೆ ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿದೆ. ಜತೆಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕೆಲವರು ತಮಾಷೆಯ ಕಾಮೆಂಟ್​ಗಳ ಮೂಲಕ ಅನಿಸಿಕೆ ಹಂಚಿಕೊಂಡಿದ್ದಾರೆ. ಒಳ್ಳೆಯ ಮಾರ್ಗ ನಾಗರಹಾವಿಗೆ ಸ್ವಾಗತ ಎಂದು ಬರೆಯುವ ಮೂಲಕ ತಮಾಷೆ ಮಾಡಿದ್ದಾರೆ. ಮನೆಯೊಳಗೆ ಹಾವು ಇದೆ ಎಂಬುದನ್ನು ನೆನೆಸಿಕೊಂಡರೇ ಭಯವಾಗುತ್ತೆ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ನದಿಯಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್

Viral Video: ಮನೆ ಎದುರು ಲಾಲೂಪ್ರಸಾದ್ ಯಾದವ್ ಪಾದ ತೊಳೆದ ಮಗ ತೇಜ್ ಪ್ರತಾಪ್

Click on your DTH Provider to Add TV9 Kannada