ಮೊದಲೆಲ್ಲಾ ಮದುವೆ ಅಂದ್ರೆ ಗುರುಹಿರಿಯರು ತಮ್ಮ ಮಗಳನ್ನು ಧಾರೆಯೆರೆದು ಕೊಡುವ ಸಂಪ್ರದಾಯ. ಬಹಳ ಶಿಸ್ತು ಬದ್ಧವಾಗಿ ನಡೆಯುವ ಆಚರಣೆ. ಗುರುಹಿರಿಯರು ಹೇಳಿದಂತೆ ಗೌರವಯುತವಾಗಿ ನಡೆಸಿಕೊಂಡು ಬರುವ ಆಚಣೆಯೂ ಹೌದು. ಆದರೆ ಈಗೆಲ್ಲಾ ಕಾಲಮಾನ ಬದಲಾಗಿದೆ. ವರ-ವಧು ಮೊದಲೇ ಒಬ್ಬರನ್ನೊಬ್ಬರು ನೋಡಿರುತ್ತಾರೆ. ಸಲುಗೆಯೂ ಬೆಳೆದಿರುತ್ತದೆ. ಹೀಗಿರುವಾಗ ವಿವಾಹದ ಸಮಯದಲ್ಲಿ ನಗುತ್ತಾ ವರನು ವಧುವಿನ ಹೆಗಲ ಮೇಲೆ ಕೈ ಹಾಕುತ್ತಾನೆ. ಈ ಸಂದರ್ಭದಲ್ಲಿ ಪುರೋಹಿತರು ಬೈದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿವಾಹ, ಸಾಂಪ್ರದಾಯ ಬದ್ಧ ಕಾರ್ಯ. ಬಹಳ ಶಿಸ್ತಿನಿಂದ ನಡೆಯುವ ಆಚರಣೆ. ನಮ್ಮ ಅಜ್ಜ-ಅಜ್ಜಿಯರ ಕಾಲದಲ್ಲಿ ವಧು ಮೊದಲ ಬಾರಿಗೆ ಮಂಟಪದಲ್ಲೇ ವರನ್ನು ನೋಡಿದ ಕಥೆಗಳನ್ನೆಲ್ಲಾ ಕೇಳಿ ಆಶ್ಚರ್ಯಪಟ್ಟ ಕ್ಷಣಗಳೂ ಇವೆ. ಆದರೆ ಈಗಿನ ಕಾಲದ ಯುವಕ ಹಸೆಮಣೆಯಲ್ಲಿ ತಮಾಷೆಯಾಗಿ ವರ್ತಿಸಿದ್ದನ್ನು ಕಂಡ ಪುರೋಹಿತರು ಆತನಿಗೆ ಗದರಿದ್ದಾರೆ. ಪಕ್ಕದಲ್ಲಿ ಕೂತ ವಧುವಿನ ಹೆಗಲ ಮೇಲೆ ಕೈ ಹಾಕಿ ಹಾಸ್ಯ ಮಾಡುತ್ತಿದ್ದುದನ್ನು ನೋಡಿದ ಪುರೋಹಿತರು ಕೈ ಕೆಳಗಿಳಿಸುವಂತೆ ಹೇಳಿದ್ದಾರೆ.
ಮಧುಮಗಳ ಕಡೆಯ ನೆಂಟರೆಲ್ಲ ನವಜೋಡಿಗಳಾಗಲಿರುವ ವಧು ಮತ್ತು ವರನ ಪಕ್ಕದಲ್ಲಿ ಕುಳಿತಿದ್ದಾರೆ. ಭಾರತೀಯ ಸಂಪ್ರದಾಯದ ಪ್ರಕಾರ ಮಂಟಪದಲ್ಲಿ ಹುಡುಗಾಟದ ಸಂಗತಿಗಳಿಗೆಲ್ಲಾ ಆಸ್ಪದವಿಲ್ಲ. ಹೀಗಿರುವಾಗ ಪುರೋಹಿತರು ವರನಿಗೆ ಬೈದಿರುವುದು ಸುತ್ತಲು ಕುಳಿತಿರುವವರಿಗೆ ತಮಾಷೆ ಅನಿಸಿದೆ.
ವಿಡಿಯೋದಲ್ಲಿ ನೀವು ಗಮನಿಸುವಂತೆ, ಮದುವೆ ಸಮಾರಂಭ ನಡೆಯುತ್ತಿರುತ್ತದೆ. ಮದುವೆ ಮಂಟಪದಲ್ಲಿ ವಧು ಮತ್ತು ವರ ಕುಳಿತಿದ್ದಾರೆ. ವರ ನಗುತ್ತಾ ವಧುವಿನ ಹೆಗಲ ಮೇಲೆ ಕೈ ಹಾಕಿದ್ದಾನೆ. ಇದ್ನು ನೋಡಿದ ಪುರೀಹಿತರು ಆತನಿಗೆ ಕೈ ಕೆಳಗಿಳಿಸುವಂತೆ ಗದರಿದ್ದಾರೆ. ವರನು ತನ್ನ ಕೈಗಳನ್ನು ಹಿಂದಕ್ಕೆ ತೆಗೆದುಕೊಂಡು ಮದುವೆ ಸಮಾರಂಭ ಮುಂದುವರೆಯುವಂತೆ ನಗುತ್ತಾನೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ 14 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿಕೊಂಡಿದೆ. ಹಲವಾರು ಕಾಮೆಂಟ್ಸ್ಗಳು ಕೂಡಾ ಲಭಿಸಿವೆ. ಓರ್ವರು ‘ಅದ್ಭುತ ಪುರೋಹಿತರೇ..’ ಎಂದು ಪ್ರತಿಕ್ರಿಯೆ ನೀಡಿದರೆ ಇನ್ನು ಕೆಲವರು ನಗುಮುಖದ ಇಮೊಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
ವರದಕ್ಷಿಣೆ ಕಿರುಕುಳ; ಮದುವೆಯಾದ ಮೂರೇ ತಿಂಗಳಿಗೆ ಯುವತಿ ಕೊಲೆ, ಪರಾರಿಯಾದ ಕುಟುಂಬ
Published On - 4:14 pm, Wed, 23 June 21