Viral video: ವಿವಾಹವಾಗುವ ಉತ್ಸಾಹದಲ್ಲಿ ಮದುಮಗ! ಬರಿಗಾಲಿನಲ್ಲಿಯೇ ರಸ್ತೆಯಲ್ಲಿ ಸಕತ್​ ಡಾನ್ಸ್

| Updated By: shruti hegde

Updated on: Jun 16, 2021 | 2:28 PM

ವರ ಗೋಲ್ಡ್​ನ್​ ಬಣ್ಣದ ಉಡುಪು ಧರಸಿ ಸಕತ್​ ರೆಡಿಯಾಗಿದ್ದಾನೆ. ಹೊಸ ಹೊಸ ಸ್ಟೆಪ್​ ಹಾಕುವ ಮೂಲಕ ಭರ್ಜರಿ ಡಾನ್ಸ್​ನಲ್ಲಿ ಮುಳುಗಿದ್ದಾನೆ.

Viral video: ವಿವಾಹವಾಗುವ ಉತ್ಸಾಹದಲ್ಲಿ ಮದುಮಗ! ಬರಿಗಾಲಿನಲ್ಲಿಯೇ ರಸ್ತೆಯಲ್ಲಿ ಸಕತ್​ ಡಾನ್ಸ್
ವಿವಾಹದ ಉತ್ಸಾಹದಲ್ಲಿ ವರನ ಸಕತ್​ ಡಾನ್ಸ್​
Follow us on

ಸ್ಮಾರ್ಟ್​ಫೋನ್​ಗಳ ಯುಗದಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅದೆಷ್ಟೋ ತಮಾಷೆಯ ವಿಡಿಯೋಗಳು ವೈರಲ್​ ಆಗಿ ಬಿಡುತ್ತವೆ. ಪ್ರಪಂಚದ ಯಾವುದೋ ಮೂಲೆಯಲ್ಲಿ ನಡೆದ ಘಟನೆ ಜಗತ್ತಿನ ಮೂಲೆ ಮೂಲೆಗೂ ತಲುಪಿಬಿಟ್ಟಿರುತ್ತದೆ. ಇದೀಗ ಮದುವೆ ಆಗಲು ಸಕತ್​ ಆಗಿ ಸಿದ್ಧನಾಗಿರುವ ವರನ ಡಾನ್ಸ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮದುವೆ ಮನೆಯಲ್ಲಿ ಸಂಭ್ರಮ, ಸಡಗರ. ಚಿಕ್ಕ- ಮಕ್ಕಳಿಂದ ಹಿಡಿದು ವಯಸ್ಕರವೆರೆಗೆ ಎಲ್ಲರೂ ಕೂಡಾ ನಗುಮೊಗದಿಂದ ಆಚರಣೆ ನಡೆಸಿಕೊಡುತ್ತಾರೆ. ಈಗೆಲ್ಲಾ ವಧು-ವರರು ವೇದಿಕೆಯಲ್ಲಿ ನೃತ್ಯ ಮಾಡುವುದು ಟ್ರೆಂಡ್​ ಅಗಿಬಿಟ್ಟಿದೆ. ಹೀಗಿರುವಾಗ ತನ್ನ ವಿವಾಹದ ಕ್ಷಣ ನೆನೆದು ವರ ಬಹಳ ಉತ್ಸುಕನಾಗಿದ್ದಾನೆ. ಕಾಲಿಗೆ ಚಪ್ಪಲಿಯನ್ನೂ ಹಾಕಿಕೊಳ್ಳದೇ ರಸ್ತೆಯಲ್ಲಿ ಬರಿಗಾಲಿನಲ್ಲಿಯೇ ಸಕತ್​ ಸ್ಪೆಪ್​ ಹಾಕುತ್ತಿದ್ದಾನೆ.

ವಧು-ವರರಿಗೆ ವಿವಾಹವು ಜೀವನದ ಒಂದು ಘಟ್ಟ. ವಿವಾಹ ಆಗುತ್ತಿರುವ ಸಂಭ್ರಮದಲ್ಲಿ ವರ ಸಕತ್​ ಡಾನ್ಸ್​ ಮಾಡುತ್ತಿದ್ದಾನೆ. ಸೂಪರ್​ಹಿಟ್​ ಭೋಜ್​ಪುರಿ ಹಾಡಿಗೆ ವರ ನೃತ್ಯ ಮಾಡುತ್ತಿದ್ದಾನೆ.

ವರ ಗೋಲ್ಡ್​ನ್​ ಬಣ್ಣದ ಉಡುಪು ಧರಸಿ ಸಕತ್​ ರೆಡಿಯಾಗಿದ್ದಾನೆ. ಹೊಸ ಹೊಸ ಸ್ಟೆಪ್​ ಹಾಕುವ ಮೂಲಕ ಭರ್ಜರಿ ಡಾನ್ಸ್​ನಲ್ಲಿ ಮುಳುಗಿದ್ದಾನೆ. ವಿವಾಹದ ಉತ್ಸಾಹದಲ್ಲಿ ಕಾಲಿಗೆ ಶೂ ಕೂಡಾ ಧರಿಸದೇ ಬರಿಗಾಲಿನಲ್ಲಿಯೇ ರಸ್ತೆಯಲ್ಲಿ ಸ್ಟೆಪ್​ ಹಾಕುತ್ತಿದ್ದಾನೆ. ಈತನ ಜತೆ ಮನೆಯ ಸಂಬಂಧಿಕರು ಕೂಡಾ ಸಾಥ್​ ನೀಡಿದ್ದಾರೆ. ವರನ ಉತ್ಸಾಹವನ್ನು ನೋಡಿದ ನೆಟ್ಟಿಗರು ಖುಷಿ ಪಟ್ಟಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ವರನ ಉತ್ಸಾಹವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ಶೂ ಧರಿಸಬಹುದಿತ್ತು ಎಂದು ಕಾಮೆಂಟ್​ ಮಾಡಿದ್ದಾರೆ. ಈಗಾಗಲೇ ವಿವಾಹರಾದವರು ಮದುವೆ ಆದ ಮೇಲೆ ಇಷ್ಟು ಸಂತೋಷವಾಗಿರುವುದಿಲ್ಲ ಬಿಡು! ಎಂದು ಹುಬ್ಬೇರಿಸುತ್ತಾ ತಮ್ಮ ಜೀವನದ ಸ್ಥಿತಿಯನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:

ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್

Viral video: ಭರವಸೆಯೇ ಬೆಳಕು; ಸೋಂಕಿನ ನಡುವೆಯೂ 95ರ ವೃದ್ಧೆಯ ಗರ್ಬಾ ಡಾನ್ಸ್