Viral Video : ವಿಮಾನ ನಿಲ್ದಾಣದಲ್ಲಿ, ರೈಲಿನಲ್ಲಿ, ಬ್ಯಾಂಕಿನಲ್ಲಿ, ಪೋಸ್ಟ್ ಆಫೀಸಿನಲ್ಲಿ, ಆಸ್ಪತ್ರೆಯಲ್ಲಿ, ಶಾಲೆಕಾಲೇಜುಗಳಲ್ಲಿ, ಆಫೀಸುಗಳಲ್ಲಿ ಹೀಗೆ ಎಲ್ಲೆಲ್ಲಿ ಆಧಾರ ಕಾರ್ಡ್ ಕೇಳುತ್ತಾರೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮದುವೆಯಲ್ಲಿ? ಹೌದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಮದುವೆ ನಡೆಯುತ್ತಿದ್ದ ವೇಳೆ ಆಹ್ವಾನಿಸಿದ ಅತಿಥಿಗಳಿಗೆ ಆಧಾರ ಕಾರ್ಡ್ ತೋರಿಸಲು ಕೇಳಲಾಗಿದೆ. ನಮ್ಮ ಭಾರತೀಯ ಮದುವೆಗಳಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಇನ್ನೂ ಮುಗಿಯುತ್ತಲೇ ಇಲ್ಲ!
In a seemingly bizarre incident, guests at a #wedding in Uttar Pradesh’s #Amroha district were asked to show their #Aadhaar cards before they were allowed to pick up dinner plates.
The incident took place in Hasanpur where two sisters were getting married at the same venue. pic.twitter.com/9IfenucXUH
— IANS (@ians_india) September 25, 2022
ಹಸನ್‌ಪುರದಲ್ಲಿ ಇಬ್ಬರು ಸಹೋದರಿಯರ ಮದುವೆ ಒಂದೇ ಸ್ಥಳದಲ್ಲಿ ಏರ್ಪಾಡಾಗಿತ್ತು. ಮದುವೆಯ ಔತಣ ಏರ್ಪಡಿಸಿದ್ದ ಜಾಗಕ್ಕೆ ಪ್ರವೇಶಿಸುವ ಮೊದಲು ಅತಿಥಿಗಳಿಗೆ ಆಧಾರ ಕಾರ್ಡ್ ತೋರಿಸುವಂತೆ ಕೇಳಲಾಯಿತು. ಭೂರಿಭೋಜನ ಇದ್ದಾಗ ಪೈಪೋಟಿ ಇದ್ದದ್ದೇ. ಈ ಗದ್ದಲ ತಪ್ಪಿಸಲು ಆಧಾರ್ ಕಾರ್ಡ್ನ ಉಪಾಯವನ್ನು ಹೂಡಲಾಗಿತ್ತು ಎಂದು ವರದಿಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೂರಾರು ಜನರು ಈ ವಿಷಯವನ್ನು ತಮಾಷೆಯಾಗಿ ರೀಟ್ವೀಟ್ ಮಾಡಿದ್ದಾರೆ. ‘ಬದುಕಿಗೆ ಆಧಾರ ಕಾರ್ಡ್ ಬಹಳ ಅಮೂಲ್ಯ. ಮದುವೆ, ಸ್ಮಶಾನ ಇನ್ನೂ ಏನೆಲ್ಲಕ್ಕೂ’ ಎಂದು ಟೀಕಿಸಿದ್ದಾರೆ ಒಬ್ಬ ಟ್ವಿಟರ್ ಖಾತೆದಾರರು.
ಎಂಥಾ ಅದ್ಭುತ ಆಲೋಚನೆಯಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:24 pm, Tue, 27 September 22