Viral Video : ವಿಮಾನ ಅಪಘಾತದಿಂದಾಗಿ 33,333 ಅಡಿ ಎತ್ತರದಿಂದ ಬಿದ್ದರೂ ವೆಸ್ನಾ ವುಲೋವಿಕ್ಸ್ ಎಂಬ ಮಹಿಳೆಯು ಬದುಕುಳಿದಿದ್ದಳು. ಈ ಹಳೆಯ ದುರ್ಘಟನೆ ಕುರಿತ ವಿಡಿಯೋ ಅನ್ನು ಗಿನ್ನೀಸ್ ವಿಶ್ವ ದಾಖಲೆಯ ಟ್ವಿಟರ್ ಪುಟದಲ್ಲಿ ಟ್ವೀಟ್ ಮಾಡಲಾಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ. ಏಕೆಂದರೆ ಈತನಕ ಅಷ್ಟು ಎತ್ತರದಿಂದ ಬಿದ್ದ ಅಥವಾ ಧುಮುಕಿದ ಯಾವ ಮನುಷ್ಯನೂ ಬದುಕುಳಿದ ಉದಾಹರಣೆಗಳಿಲ್ಲ.
This is the incredible story of the woman who fell 33,333 feet and survived… pic.twitter.com/1Bpdi2SVi0
— Guinness World Records (@GWR) November 6, 2022
ಈ ವಿಡಿಯೋ ನೋಡುತ್ತಿದ್ದಂತೆ ಆ ದಿನ ಏನು ನಡೆಯಿತೆಂದು ನಿಮಗರ್ಥವಾಗಿರುತ್ತದೆ. 1972ರಲ್ಲಿ DC-9 ವಿಮಾನವು ಸ್ವೀಡನ್ನ ಸ್ಟಾಕ್ಹೋಮ್ ಮತ್ತು ಸರ್ಬಿಯಾದ ಬೆಲ್ಗ್ರೇಡ್ ಮಧ್ಯೆ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಬ್ರೀಫ್ಕೇಸ್ನಲ್ಲಿ ಇರಿಸಿದ್ದ ಬಾಂಬ್ ಸ್ಫೋಟಗೊಂಡು ಅನಾಹುತ ಸಂಭವಿಸಿತು. ಪರಿಣಾಮವಾಗಿ ಎಲ್ಲರೂ ಸಾವಿಗೀಡಾಗಿದ್ದರು. ಆದರೆ ಬದುಕುಳಿದಿದ್ದು ಗಗನಸಖಿ ವೆಸ್ನಾ ವುಲೋವಿಕ್ಸ್ ಮಾತ್ರ.
3,333 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದರೂ ಹೇಗೆ ಬದುಕುಳಿದಳು ಎಂಬುದು ಅಂದಿಗೂ ಇಂದಿಗೂ ಅಚ್ಚರಿ ಮತ್ತು ದಾಖಲೆಯೇ. ವಿಮಾನವು ಸ್ಫೋಟಗೊಂಡು ಛಿದ್ರವಾಗಿ ಬೀಳುವಾಗ ಫುಡ್ ಕಾರ್ಟ್ನ ಭಾಗ ಹಿಮಪ್ರದೇಶದಲ್ಲಿ ಹೋಗಿ ಬಿದ್ದಿತ್ತು. ಆ ಕಾರ್ಟ್ನಲ್ಲಿಯೇ ವೆಸ್ನಾ ಇದ್ದಿದ್ದು. ಅಪಘಾತ ಸ್ಥಳದಿಂದ ಆಕೆ ಕಿರುಚುತ್ತಿರುವಾಗ ಡಾ. ಬ್ರೂನೋ ಹೊನ್ಕೆ ಎನ್ನುವವರು ಆಕೆಗೆ ಪ್ರಥಮ ಚಿಕಿತ್ಸೆ ನೀಡಿದರು. ಆರಂಭದಲ್ಲಿ ಕೆಲ ದಿನಗಳ ಕಾಲ ಆಕೆ ಕೋಮಾ ಅವಸ್ಥೆಯಲ್ಲಿದ್ದರು. ಮೆದುಳು, ಕಾಲುಗಳು, ಪಕ್ಕೆಲುಬು ಸೇರಿದಂತೆ ಆಕೆ ತೀವ್ರವಾಗಿ ಗಾಯಗೊಂಡಿದ್ದಳು.
ನಿನ್ನೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 2,600 ಜನರು ನೋಡಿದ್ದಾರೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಓಹ್ ಈಕೆ ಸರ್ಬಿಯಾ ಮೂಲದವರು, ಎಂಥ ಅದ್ಭುತ ದಾಖಲೆ ಇದು ಎಂದು ಒಬ್ಬರು ಹೇಳಿದ್ದಾರೆ.
23.12.2016ರಲ್ಲಿ ಈಕೆ ತೀರಿಕೊಂಡರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:32 pm, Mon, 7 November 22