
ಕೆಲವೊಂದು ಬಾರಿ ವಿದ್ಯಾರ್ಥಿಗಳಿಗೆ ಪಾಠ, ಸಂಸ್ಕಾರ ಹೇಳಿಕೊಡಬೇಕಾದ ಶಿಕ್ಷಕರೇ ಅತಿರೇಕದ ವರ್ತನೆಯನ್ನು ತೋರುತ್ತಿರುತ್ತಾರೆ. ಹೀಗೆ ವಿದ್ಯಾರ್ಥಿಗಳ ಕೈಯಲ್ಲಿ ಕೆಲಸ ಮಾಡಿಸಿ, ಪಾಠ ಮಾಡದೆ ಕ್ಲಾಸ್ ರೂಮ್‌ನಲ್ಲಿ ಮಲಗಿ, ಕುಡಿದು ಶಾಲೆಗೆ ಬಂದು ರಂಪಾಟ ಮಾಡಿದ ಶಿಕ್ಷಕರಿಗೆ ಸಂಬಂಧಪಟ್ಟ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ದೃಶ್ಯವೊಂದು ಹರಿದಾಡುತ್ತಿದ್ದು, ತರಗತಿಯಲ್ಲಿ ಅನುಚಿತ ವರ್ತನೆ ತೋರಿದರೆಂದು ಗಣಿತ ಶಿಕ್ಷಕನಿಗೆ ಸ್ಕೂಲ್ ಪ್ರಿನ್ಸಿಪಾಲ್ 25 ಸೆಕೆಂಡುಗಳಲ್ಲಿ 18 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ಗುಜರಾತ್‌ನ ಭರೂಚ್ ಜಿಲ್ಲೆಯ ನವಯುಗ್ ಶಾಲೆಯಲ್ಲಿ ನಡೆದಿದ್ದು, ತರಗತಿಯಲ್ಲಿ ಅನುಚಿತ ವರ್ತನೆ, ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಮೇರೆಗೆ ಸ್ಕೂಲ್ ಪ್ರಿನ್ಸಿಪಾಲ್ ಗಣಿತ ಶಿಕ್ಷಕನ ಕೆನ್ನೆಗೆ ಬಾರಿಸಿದ್ದಾರೆ. ಪ್ರಾಂಶುಪಾಲ ಹಿತೇಂದ್ರ ಠಾಕೂರ್ ಗಣಿತ ಶಿಕ್ಷಕರಾದ ರಾಜೇಂದ್ರ ಪಾರ್ಮರ್ ಎಂಬವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆಫೀಸ್ ರೂಮ್‌ನಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಯಲ್ಲಿ ಪ್ರಿನ್ಸಿಪಾಲ್ ಕೋಪದಲ್ಲಿ 25 ಸೆಕೆಂಡುಗಳಲ್ಲಿ ಗಣಿತ ಶಿಕ್ಷಕನಿಗೆ 18 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲಿದ್ದ ಸಹ ಶಿಕ್ಷಕರು ಮಧ್ಯಪ್ರವೇಶಿಸಿ ಇವರಿಬ್ಬರ ಜಗಳವನ್ನು ಶಮನಗೊಳಿಸಿದ್ದು, ಈ ಕುರಿತ ಸಿಸಿ ದೃಶ್ಯ ಇದೀಗ ವೈರಲ್ ಆಗಿದೆ.
A school principal in #Gujarat’s #Bharuch district was caught on CCTV slapping a teacher 18 times, triggering an investigation by education authorities.
The incident took place at #NavyugSchool, where Principal #HitendraSinghThakor was seen striking teacher #RajendraParmar. The… pic.twitter.com/c3iVuoyUxt
— Hate Detector 🔍 (@HateDetectors) February 10, 2025
ಗಣಿತ ಶಿಕ್ಷಕ ಸರಿಯಾಗಿ ಪಾಠ ಮಾಡುತ್ತಿಲ್ಲ, ಜೊತೆಗೆ ತರಗತಿಯಲ್ಲಿ ಅನುಚಿತ ವರ್ತನೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ ಎಂದು ಪ್ರಿನ್ಸಿಪಾಲ್ ಗಂಭೀರ ಆರೋಪ ಮಾಡಿದ್ದು, ಜಿಲ್ಲಾ ಶಿಕ್ಷಣಾಧಿಕಾರಿ ಈ ವಿಷಯದ ಬಗ್ಗೆ ಇದೀಗ ತನಿಖೆಯನ್ನು ಆರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಹೆಂಡ್ತಿ ಸಹಾಯದಿಂದ ಬೆಂಚ್ ಪ್ರೆಸ್ ವ್ಯಾಯಾಮ ಮಾಡಲು ಹೋಗಿ ಫಜೀತಿಗೆ ಸಿಲುಕಿದ ವ್ಯಕ್ತಿ; ವಿಡಿಯೋ ವೈರಲ್
Hate Detector ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕುರ್ಚಿಯಿಂದ ಎದ್ದು ಹೋಗಿ ಪ್ರಿನ್ಸಿಪಾಲ್ ಗಣಿತ ಶಿಕ್ಷಕನ ಕೆನ್ನೆಗೆ ಬಾರಿಸಿ ದೈಹಿಕ ಹಲ್ಲೆ ನಡೆಸಿದಂತಹ ಆಘಾತಕಾರಿ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ನೋಡುಗರು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ