Gulab Jamun : ದೋಸೆ (Dosa) ಎನ್ನುವ ದಕ್ಷಿಣ ಭಾರತೀಯರ ಆತ್ಮಗತ ಖಾದ್ಯವನ್ನು ಅದೆಷ್ಟು ಜನ ಬಗೆಬಗೆಯಿಂದ ಹತ್ಯೆ ಮಾಡುತ್ತಾರೆನ್ನುವುದನ್ನು ಈಗಾಗಲೇ ನೋಡಿದ್ದೀರಿ. ಇನ್ನು ಭಾರತೀಯರ ಪಂಚಪ್ರಾಣ ಅಡಗಿರುವ ಚಹಾದ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಭಜ್ಜಿ ಬೋಂಡಾಗಳನ್ನಂತೂ ಮನಸ್ಸು ಬಂದಂತೆ ಅರೆದು ಕರಿದು ಅವುಗಳ ಅಸ್ತಿತ್ವವನ್ನೇ ನಿರ್ನಾಮ ಮಾಡುವ ಮಟ್ಟಕ್ಕೂ ಇಳಿಯಲಾಗಿದೆ. ಇದೀಗ ಇಂಥ ವಿಲಕ್ಷಣ ವಿಚಿತ್ರ ಕಾಂಬಿನೇಷನ್ ಪಾಕಪ್ರಯೋಗಗಳ ಪಟ್ಟಿಗೆ ಗುಲಾಬ್ಜಾಮೂನು ವಿಥ್ ಮೊಸರು ಸೇರಿದೆ. ನೆಟ್ಟಿಗರ ಬಾಯಿಗೆ ಶಬ್ದಗಳೇ ಸಿಗುತ್ತಿಲ್ಲ!
ಗುಲಾಬ್ ಜಾಮೂನ್ ಎಂದರೆ ಸಕ್ಕರೆ ಪಾಕದೊಳಗೆ ಮುಳುಗೇಳುವ ಚಿತ್ರಣ ನಮ್ಮ ಕಣ್ಣಮುಂದೆ ಬರುತ್ತದೆ. ಪಾಕದಲ್ಲಿ ಮಿಂದು, ಕೊಬ್ಬರಿಯೊಳಗೆ ಉರುಳಾಡಿರುವ ಡ್ರೈ ಜಾಮೂನಿನ ರುಚಿ ನೆನಪಾಗುತ್ತದೆ. ಕಾಲಾ ಜಾಮೂನ್, ಖೋವಾ ಜಾಮೂನ್ ಹೆಸರು ಕೇಳಿದರೆ ಆಹಾ ಈಗಲೇ ಸಿಗಬಾರದೆ ಎನ್ನಿಸುತ್ತದೆ. ಆದರೆ ಇದೀಗ ವೈರಲ್ ಆಗಿರುವ ಮತ್ತು ಒಂದು ಪ್ಲೇಟಿಗೆ ರೂ. 50 ಎಂದು ನಿಗದಿಯಾಗಿರುವ ಈ ಮೊಸರು ವಿಥ್ ಗುಲಾಬ್ ಜಾಮೂನು ಫ್ರೀಯಾಗಿ ಕೊಟ್ಟರೂ ಬೇಡ ಎಂದು ನೆಟ್ಟಿಗರು ಓಡಿಹೋಗುತ್ತಿದ್ದಾರೆ.
ಇದನ್ನೂ ಓದಿ : Viral Video: ಬ್ಯಾಲೆನ್ಸಡ್ ಡಯೆಟ್ ಎಂದರೆ ಇದೇ ನೋಡಿ! ಇನ್ನು ನಿಶ್ಚಿಂತೆಯಿಂದಿದ್ದುಬಿಡಿ
ಆದರೆ ಈ ವಿಡಿಯೋದಲ್ಲಿ ಅಂಗಡಿಯ ಮಾಲಿಕ ಇದು ಅತ್ಯಂತ ಪ್ರಸಿದ್ಧ ಖಾದ್ಯವಾಗಿದೆ ಎಂದು ಹೇಳಿದ್ದಾನೆ! ಎಂಟು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ಧಾರೆ. ಈಶಾನ್ಯ, ಪಶ್ಚಿಮ ಬಂಗಾಳದಲ್ಲಿ ಇದು ಸಾಮಾನ್ಯವಾದ ಸಿಹಿ ತಿಂಡಿ. ಮದುವೆ ಅಥವಾ ಇತರೇ ಶುಭಸಮಾರಂಭಗಳಲ್ಲಿ ಇದನ್ನು ಬಡಿಸುತ್ತಾರೆ. ಆದರೂ ಈ ಕಾಂಬಿನೇಷನ್ ಸರಿ ಅಲ್ಲ ಎಂದು ಕೆಲವರು ಹೇಳಿದ್ದಾರೆ.
ಇದನ್ನೂಓದಿ : Viral:ಹಿಟ್ಲರನಿಗೆ ಜಯವಾಗಲಿ! ಎಂದು ಕೆಲಸಗೇಡಿ ಕೆಲಸ ಕಳೆದುಕೊಂಡ ಕತೆ
ಪ್ರೋಬಯೋಟಿಕ್ಸ್ ಜೊತೆ ಕರಿದ ಮತ್ತು ಸಿಹಿ ಪದಾರ್ಥಗಳನ್ನು ಒಟ್ಟುಮಾಡಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಸರಿ ಅಲ್ಲ ಎಂದಿದ್ದಾರೆ ಕೆಲವರು. ಗುಲಾಬುಜಾಮೂನು ಪ್ರೇಮಿಗಳ ಹೃದಯವನ್ನು ಗಾಯಗೊಳಿಸಲಾಗಿದೆ, ನಾವು ಸತ್ತಂತೆ ಭಾಸವಾಗುತ್ತಿದೆ ಎಂದು ಎಂದು ಅನೇಕರು ದುಃಖಿಸಿದ್ದಾರೆ.
ಇದನ್ನೂ ಓದಿ : Viral: ತನ್ನ ಮೊಬೈಲ್ ಹುಡುಕಲು 21 ಲಕ್ಷ ಲೀಟರ್ ನೀರುಪೋಲು ಮಾಡಿದ ಛತ್ತೀಸ್ಗಢ ಅಧಿಕಾರಿ ಅಮಾನತು
ಈ ಫುಡ್ ವ್ಲಾಗರ್ (Food Vloggers) ಗಳಿಂದ ನಮ್ಮ ಆಹಾರ ಉದ್ಯಮವೇ ನಾಶವಾಗುತ್ತಿದೆ. ಈ ಮೂಲಕ ಜನಪ್ರಿಯರಾಗಲು ಹೋಟೆಲ್ ಮಾಲೀಕರು ಇಂಥ ಖಾದ್ಯಗಳನ್ನು ಸಂಯೋಜಿಸುತ್ತಿದ್ದಾರೆ ಎಂದು ಒಬ್ಬರು ತಕರಾರೆತ್ತಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ