Japan : ಸುಶಿ (Sushi) ಜಪಾನಿನಲ್ಲಿ ತಯಾರಿಸಲಾಗುವ ಪ್ರಸಿದ್ಧ ಖಾದ್ಯ. ಇದೀಗ ಇದು ಭಾರೀ ಸುದ್ದಿಯಲ್ಲಿದೆ. ಇಲ್ಲಿಯ ಒಸಾಕಾದ ರೆಸ್ಟೋರೆಂಟ್ನಲ್ಲಿ ವಿಶ್ವದ ಅತ್ಯಂತ ದುಬಾರಿ ಸುಶಿ ತಯಾರಿಸಲಾಗಿದೆ. ಇದನ್ನು ತಯಾರಿಸಲು ಬೇಕಾದಂಥ ಕೆಲ ಪದಾರ್ಥಗಳನ್ನು ಹೊರದೇಶಗಳಿಂದಲೂ ಆಮದು ಮಾಡಿಕೊಳ್ಳಲಾಗಿದೆ. ಹಾಗಿದ್ದರೆ ಇದರ ಬೆಲೆ ಎಷ್ಟಿರಬಹುದು ಊಹಿಸಿ. ಈ ಬೆಲೆಯಲ್ಲಿ ನೀವು ಎರಡು ದ್ವಿಚಕ್ರವಾಹನಗಳನ್ನು ಖರೀದಿಸಬಹುದು ಅಥವಾ ಚಿನ್ನವನ್ನೂ ಖರೀದಿಸಬಹುದು. ಈಗ ಕೇಳಿ, ಒಂದು ಪ್ಲೇಟ್ ಸುಶಿಯ ಬೆಲೆ ಬರೋಬ್ಬರಿ ರೂ. 2 ಲಕ್ಷ! ಅಬ್ಬಾ, ಅಚ್ಚರಿಯಾಗುತ್ತಿದೆಯಾ? ಹಾಗಿದ್ದರೆ ಇಷ್ಟು ಬೆಲೆ ಹೊಂದಿರುವ ಈ ಸುಶಿಯ ವೈಶಿಷ್ಟ್ಯ ಏನೆಂದು ತಿಳಿದುಕೊಳ್ಳಬೇಕೆಂಬ ಕುತೂಹಲ ಉಂಟಾಗುತ್ತಿದೆಯಾ?
ಇದನ್ನೂ ಓದಿ : Viral: ಹೈದರಾಬಾದ; ನನಗೆ ಹಸಿವಾಗಿದೆ ಎಂದು ಮೆಟ್ರೋನಲ್ಲಿ ಆಕೆ ಹೇಳಿದಳು, ಮುಂದೇನಾಯಿತು?
ಜಪಾನ್‌ನ ಒಸಾಕಾದಲ್ಲಿರುವ ಸುಶಿ ಕಿರಿಮೋನ್ ಎಂಬ ರೆಸ್ಟೊರೆಂಟ್ ‘ಕಿವಾಮಿ ಒಮಾಕಾಸೆ’ ಎಂಬ ಖಾದ್ಯವನ್ನು ತಯಾರಿಸಿದೆ. ಇದು ಸುಶಿಯ 20 ತುಣುಕುಗಳನ್ನು ಒಳಗೊಂಡಿದೆ. ಗಿನ್ನೀಸ್ ವಿಶ್ವದಾಖಲೆಯ ಪ್ರಕಾರ, ಸುಶಿಯನ್ನು ಸಾಂಪ್ರದಾಯಿಕ ಪಾಕಪದ್ಧತಿಯಲ್ಲಿ ತಯಾರಿಸಲಾಗಿದೆ. ಜಪಾನ್ ಒಳಗೊಂಡಂತೆ ಇತರೇ ದೇಶಗಳ ಪದಾರ್ಥಗಳನ್ನು ಇದಕ್ಕೆ ಬಳಸಲಾಗಿದೆ. ನಿಗಿರಿ, ಸಾಶಿಮಿ ಮತ್ತು ಮಕಿ ಎಂಬ ಖಾದ್ಯಗಳನ್ನು ಇದು ಒಳಗೊಂಡಿದ್ದು ಅಂತಿಮ ಹಂತದಲ್ಲಿ ಸುಶಿಯ ಮೇಲೆ ಚಿನ್ನದ ರೇಕುಗಳನ್ನು ಸಿಂಪಡಿಲಾಗುತ್ತದೆ.
ಸುಶಿಗಾಗಿ ಮ್ಯಾಟ್ಸುಟೇಕ್ ಅಣಬೆಗಳನ್ನು ಚೀನಾದಿಂದ ತರಿಸಲಾಗುತ್ತದೆ. ಇಟಲಿಯಿಂದ ಕಪ್ಪು ಟ್ರಫಲ್ಸ್ ಮತ್ತು ಉತ್ತರ ಅಟ್ಲಾಂಟಿಕ್ನಿಂದ ತಿಮಿಂಗಲ ಮಾಂಸವನ್ನು ತರಿಸಲಾಗುತ್ತದೆ. ಬಾಣಸಿಗ ಏಜೆಲಿಟೋ ಅರನೇಟಾ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ಸುಶಿಯನ್ನು ತಯಾರಿಸಿ ದಾಖಲೆ ಮಾಡಿದ್ದರು.ಇದರ ಬೆಲೆ ಅಂದಾಜು ರೂ. 1 ಲಕ್ಷ ಇತ್ತು. ಈ ಖಾದ್ಯವು ಐದು ವಜ್ರಗಳ ಹೊದಿಕೆಗಳನ್ನು ಮತ್ತು 24 ಕ್ಯಾರೆಟ್ನ ಚಿನ್ನದ ರೇಕುಗಳಿಂದ ಅಲಂಕರಿಸಲಾಗಿತ್ತು.
ಇದನ್ನೂ ಓದಿ : Viral: ವಿಶ್ವ ದಾಖಲೆ; ಈ ಚಹಾ ಕಿತ್ಲಿಯ ಬೆಲೆ ರೂ. 24 ಕೋಟಿ; ಇಲ್ಲಿದೆ ಇದರ ವೈಶಿಷ್ಟ್ಯ
ನಿಮಗೂ ಈಗ ಸುಶಿ ತಿನ್ನುವ ಹುಕಿ ಉಂಟಾಗುತ್ತಿದೆಯಾ? ಹತ್ತಿರದ ರೆಸ್ಟೋರೆಂಟ್ಗಳ ಹುಡುಕಾಟ ನಡೆಸಬೇಕೆನ್ನಿಸಿದೆಯಾ? ಅಥವಾ ರೂ. 2 ಲಕ್ಷ ಕೊಟ್ಟು ಜಪಾನಿಗೆ ಹೋಗಿ ಈ ಸುಶಿಯನ್ನು ತಿನ್ನಲು ತಯಾರಿದ್ದೀರಾ, ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ