Hand Model: ಬರೀ ತನ್ನ ಕೈಗಳನ್ನು ತೋರಿಸಿ 25 ಲಕ್ಷ ರೂ. ಆದಾಯ ಗಳಿಸುತ್ತಾಳೆ ಈ ಮಹಿಳೆ
ವಾಸ್ತವವಾಗಿ ಈ ಮಹಿಳೆ ವೃತ್ತಿಯಲ್ಲಿ 'ಹ್ಯಾಂಡ್ ಮಾಡೆಲ್'. ಹೀಗಾಗಿ ಮುಖ, ದೇಹ ತೋರಿಸದೆ ಬರೀ ಕೈ ಗಳನ್ನು ತೋರಿಸಿ ಹಣ ಸಂಪಾದಿಸುತ್ತಿದ್ದಾಳೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್.
ಒಂದೊಳ್ಳೆ ಕೆಲಸ ಕೈ ತುಂಬ ಸಂಬಳ ಗಳಿಸಿ ಆರಾಮದಾಯಕ ಜೀವನ ನಡೆಸಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ ಅಂತಹ ಕೆಲಸ ಸಿಗುವುದು ಅಷ್ಟು ಸುಲಭವಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ಬರೀ ತನ್ನ ಕೈಗಳಿಂದಲೇ ವರ್ಷಕ್ಕೆ 25 ಲಕ್ಷ ರೂ. ಆದಾಯ ಗಳಿಸುತ್ತಾಳೆ. ಆದರೆ ಅದು ಹೇಗೆ ಅಂತಾ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೊಂದು ಸಂಬಳ ನೀಡುವ ಆಕೆಯ ಕೆಲಸ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವಾಸ್ತವವಾಗಿ ಈ ಮಹಿಳೆ ವೃತ್ತಿಯಲ್ಲಿ ‘ಹ್ಯಾಂಡ್ ಮಾಡೆಲ್’. ಹೀಗಾಗಿ ಮುಖ, ದೇಹ ತೋರಿಸದೆ ಕೈ ತೋರಿಸಿ ಹಣ ಸಂಪಾದಿಸುತ್ತಿದ್ದಾಳೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ ಪ್ರತಿಷ್ಟಿತ ಕಂಪೆನಿಗಳ ಜಾಹೀರಾತುಗಳಲ್ಲಿ ಉಗುರುಗಳ ಸೌಂದರ್ಯ ನೇಲ್ ಪಾಲಿಶ್ ಹಾಗೂ ಕಾಫಿಯನ್ನು ಕಪ್‌ಗೆ ಸುರಿಯುವುದು ಅಥವಾ ಕೈಯಿಂದ ಹಿಟ್ಟನ್ನು ಬೆರೆಸುವುದು ಮುಂತಾದ ಶೂಟ್ಗಳಲ್ಲಿ ಭಾಗವಹಿಸುತ್ತಾರೆ.
ಅಲೆಕ್ಸಾಂಡ್ರಾ, ಕೆಲವೊಮ್ಮೆ ತನ್ನ ಕೆಲಸದ ಬಗ್ಗೆ ತನ್ನ ಸ್ನೇಹಿತರಿಗೆ ಹೇಳಿದಾಗ, ಅವರು ಕೂಡ ಆಘಾತಕ್ಕೊಳಗಾಗುತ್ತಾರೆ ಎಂದು ಹೇಳುತ್ತಾರೆ. ಕೈ ತೋರಿಸಿದ್ದಕ್ಕೆ ಲಕ್ಷಗಟ್ಟಲೆ ಹಣ ಪಡೆಯುತ್ತಿದ್ದಾರೆ ಎಂದರೆ ನಂಬಲು ಆಗುತ್ತಿಲ್ಲ. ಅವರು 2019 ರಲ್ಲಿ ಮಾಡೆಲಿಂಗ್ ಪ್ರಾರಂಭಿಸಿದ ಅವರು YSL, ಮೈಕ್ರೋಸಾಫ್ಟ್, ಬ್ರಾಂಡನ್ ಬ್ಲಾಕ್‌ವುಡ್, ಕಿಸ್ ನೈಲ್ಸ್, ಸೆರೆನಾ ವಿಲಿಯಮ್ಸ್ ಜ್ಯುವೆಲರಿಯಂತಹ ಬ್ರಾಂಡ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಈ ಬ್ರಾಂಡ್‌ಗಳ ಉತ್ಪನ್ನಗಳಿಗೆ ಕೈ ಮಾಡೆಲಿಂಗ್ ಮಾಡುತ್ತಾರೆ. ಕಂಪನಿಗಳು ಆಕೆಗೆ ಪ್ರತಿಯಾಗಿ ಪಾವತಿಸುತ್ತವೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಅತ್ತೆ ಜೊತೆಗೆ ಮಾರ್ವಾಡಿ ಭಾಷೆ ಮಾತನಾಡುವ ರೋಬೋಟ್ ಸೊಸೆ, ಇವಳು ಸೂರ್ಯಪ್ರಕಾಶನ ಪತ್ನಿ
ವಾರ್ಷಿಕ ಆದಾಯ 25 ಲಕ್ಷ ರೂ:
ವರದಿಗಳ ಪ್ರಕಾರ, ಅಲೆಕ್ಸಾಂಡ್ರಾ ಈ ಕೆಲಸವನ್ನು ಅರೆಕಾಲಿಕವಾಗಿ ಮಾಡುತ್ತಾರೆ. ಆದರೆ ಹೀಗೆ ಕೈ ತೋರಿಸಿ ವರ್ಷಕ್ಕೆ 30 ಸಾವಿರ ಡಾಲರ್ ಅಂದರೆ ಸುಮಾರು 25 ಲಕ್ಷ ರೂಪಾಯಿ ಗಳಿಸುತ್ತಾಳೆ. ಅಂದರೆ ಮಾಸಿಕ 2 ಲಕ್ಷ ರೂ. ಈ ಹಣವನ್ನು ತನ್ನ ಕೈಗಳಿಂದ ಮಾತ್ರ ಸಂಪಾದಿಸುತ್ತೇನೆ ಎಂದು ಹೇಳುತ್ತಾರೆ. ಆದ್ದರಿಂದ ತನ್ನ ಕೈಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ತನ್ನ ಉಗುರುಗಳು ಮತ್ತು ಅವುಗಳ ಆಕಾರದ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಅವರು ಹೇಳುತ್ತಾರೆ. ಮೇಲಾಗಿ ಯಾವುದೇ ಮನೆಗೆಲಸ ಮಾಡಬೇಕಾದರೆ ಕೈ ಮತ್ತು ಉಗುರುಗಳಿಗೆ ಹಾನಿಯಾಗದಂತೆ ಗ್ಲೌಸ್ ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ