ಅತ್ತೆ ಜೊತೆಗೆ ಮಾರ್ವಾಡಿ ಭಾಷೆ ಮಾತನಾಡುವ ರೋಬೋಟ್ ಸೊಸೆ, ಇವಳು ಸೂರ್ಯಪ್ರಕಾಶನ ಪತ್ನಿ
ಸೂರ್ಯಪ್ರಕಾಶ್ ಅಜ್ಮೀರ್‌ನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ರೊಬೊಟಿಕ್ಸ್ ಜಗತ್ತು ಇವರನ್ನು ತುಂಬಾ ಸೆಳೆಯುತ್ತಿತ್ತು. ಈ ಕಾರಣಕ್ಕೆ ರೊಬೊಟಿಕ್ಸ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆರಂಭದಲ್ಲಿ, ಸೂರ್ಯಪ್ರಕಾಶ್ ಅವರ ಕುಟುಂಬವು ತನ್ನ ಮಗ ರೋಬೋಟ್ ಅನ್ನು ಮದುವೆಯಾಗುವ ನಿರ್ಧಾರಕ್ಕೆ ಮನೆಯವರು ಒಪ್ಪಿಲ್ಲ. ಕೊನೆಗೆ ಕುಟುಂಬವು ರೋಬೋಟ್ ಅನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಭಾರೀ ಸುದ್ದಿಯಾಗಿದ್ದ ಮದುವೆ, ಇದೀಗ ಎಲ್ಲ ಕಡೆ ಮತ್ತೆ ವೈರಲ್ ಆಗುತ್ತಿದೆ. ಈ ಮದುವೆ ಸಾಮಾನ್ಯವಾಗಿಲ್ಲ, ಇದು ಮನುಷ್ಯ ಮತ್ತು ಯಂತ್ರದ ನಡುವೆ. ಇದು ವಿಚಿತ್ರವಾಗಿರಬಹುದು, ಆದರೆ ಇದು ಸತ್ಯ. ಈ ಯಂತ್ರದ ಹೆಸರು ಇದರ ಹೆಸರು NMS 5.0 GHz. ಮಾರ್ಚ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಾಜಸ್ಥಾನದ ಸೂರ್ಯಪ್ರಕಾಶ್ ಈಗ ರೋಬೋಟ್ನ್ನು ಮದುವೆಯಾಗಿ ಮನೆ ಕರೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಸೂರ್ಯಪ್ರಕಾಶ್ ಉತ್ಸುಕರಾಗಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಾಲಿವುಡ್‌ನಲ್ಲಿ ಚಿತ್ರವೊಂದು ಬಿಡುಗಡೆಯಾಗಿತ್ತು. ಈ ಸಿನಿಮಾದ ಶಾಹಿದ್ ಕಪೂರ್ ರೋಬೋಟ್ ಅನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇದೀಗ ಇಂತಹದೇ ಒಂದು ಘಟನೆ ನಿಜವಾಗಿ ನಡೆದಿದೆ. ಬಾಲ್ಯದಿಂದಲೂ ಬಾಹ್ಯಾಕಾಶ ಮತ್ತು ರೋಬೋಟ್ ಪ್ರಪಂಚದ ಬಗ್ಗೆ ಕುತೂಹಲ ಹೊಂದಿರುವ ಸೂರ್ಯಪ್ರಕಾಶ್, ಒಬ್ಬ ಸಾಫ್ಟ್‌ವೇರ್ ಡೆವಲಪರ್.
ರೋಬೋಟ್ ಸೊಸೆ ಅತ್ತೆಯೊಂದಿಗೆ ಮಾತನಾಡುತ್ತದೆ;
ರೋಬೋಟ್ NMS 5.0 GHz ಬೆಲೆ 19 ಲಕ್ಷ ರೂ., ಇದನ್ನು ತಮಿಳುನಾಡಿನಲ್ಲಿ ತಯಾರಿಸಲಾಗಿದೆ. ಸೂರ್ಯಪ್ರಕಾಶ್ ಅವರ ರೋಬೋಟ್ ವಧುವನ್ನು ಕಚೇರಿ ಮತ್ತು ಮನೆಯ ಕೆಲಸ ಮಾಡಲು, ಅತಿಥಿಗಳನ್ನು ಸ್ವಾಗತಿಸಲು ಮತ್ತು ಸೂರ್ಯಪ್ರಕಾಶ್ ಅವರ ತಾಯಿಯೊಂದಿಗೆ ಮಾರ್ವಾಡಿ ಭಾಷೆಯಲ್ಲಿ ಮಾತನಾಡಲು ತಯಾರಿ ಮಾಡುತ್ತಿದ್ದಾರೆ.
ಈ ಮದುವೆ ಕುಟುಂಬಸ್ಥರ ಒಪ್ಪಿಗೆ ಇತ್ತು:
ಸೂರ್ಯಪ್ರಕಾಶ್ ಅಜ್ಮೀರ್‌ನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ರೊಬೊಟಿಕ್ಸ್ ಜಗತ್ತು ಇವರನ್ನು ತುಂಬಾ ಸೆಳೆಯುತ್ತಿತ್ತು. ಈ ಕಾರಣಕ್ಕೆ ರೊಬೊಟಿಕ್ಸ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆರಂಭದಲ್ಲಿ, ಸೂರ್ಯಪ್ರಕಾಶ್ ಅವರ ಕುಟುಂಬವು ತನ್ನ ಮಗ ರೋಬೋಟ್ ಅನ್ನು ಮದುವೆಯಾಗುವ ನಿರ್ಧಾರಕ್ಕೆ ಮನೆಯವರು ಒಪ್ಪಿಲ್ಲ. ಕೊನೆಗೆ ಕುಟುಂಬವು ರೋಬೋಟ್ ಅನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಬಾ ತಂಗಿ ಹೋಗೋಣ ಹೂವಿಗೆ ವೋಟು ಹಾಕೋಣ; ಜಾನಪದ ಹಾಡಿನ ಮೂಲಕ ಮತಯಾಚಿಸಿದ ಮಹಿಳೆಯರು
ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ:
ಮನೆಯ ಕೆಲಸವಾಗಲಿ ಅಥವಾ ಕಚೇರಿ ಕೆಲಸವಾಗಲಿ ನಾನು ಮತ್ತು ತನ್ನ ರೋಬೋಟ್ ಪತ್ನಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕೆಂದು ಬಯಸುತ್ತೇವೆ. ಮದುವೆಯ ನಂತರ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ