Viral Video: ಬಾ ತಂಗಿ ಹೋಗೋಣ ಹೂವಿಗೆ ವೋಟು ಹಾಕೋಣ; ಜಾನಪದ ಹಾಡಿನ ಮೂಲಕ ಮತಯಾಚಿಸಿದ ಮಹಿಳೆಯರು
ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಮುಗಿದಿದ್ದೇ ತಡ ಎರಡನೇ ಹಂತದ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ರಾಜಕೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಯಕರ್ತರೂ ಕೂಡಾ ತಮ್ಮ ತಮ್ಮ ಊರುಗಳಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಆದರೆ ಇಲ್ಲೊಂದು ಉತ್ತರ ಕರ್ನಾಟಕದ ಬಿಜೆಪಿ ಕಾರ್ಯಕರ್ತೆಯರು ಜಾನಪದ ಪದ ಕಟ್ಟಿ ʼಬಾ ತಂಗಿ ಹೋಗೋಣ ಹೂವಿಗೆ ವೋಟು ಹಾಕೋಣʼ ಎಂದು ಹಾಡುತ್ತಾ ವಿಶಿಷ್ಟವಾಗಿ ಮತಯಾಚಿಸಿದ್ದಾರೆ. ಈ ಕುರಿತ ವಿಶೇಷ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಜ್ಯದಲ್ಲಿ ಮೇ 07 ರಂದು ಎರಡನೇ ಹಂತದ ಲೋಕಸಭೆ ಚುನಾವಣೆ 14 ಕ್ಷೇತ್ರಗಳಲ್ಲಿ ನಡೆಯಲಿದೆ. ಮೊದಲ ಹಂತದ ಚುನಾವಣೆ ಮುಗಿದಿದ್ದೇ ತಡ ಇದೀಗ ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ರಣಕಣ ಕಾವೇರಿದೆ. ರಾಜಕೀಯ ನಾಯಕರು, ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಕಾರ್ಯರ್ತರು ಬಿಸಿಲು, ಸೆಕೆಯೆನ್ನದೆ ತಮ್ಮ ತಮ್ಮ ಊರುಗಳಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿದ್ದಾರೆ. ಆದರೆ ಇಲ್ಲೊಂದು ಉತ್ತರ ಕರ್ನಾಟಕದ ಬಿಜೆಪಿ ಕಾರ್ಯಕರ್ತೆಯರು ಜಾನಪದ ಶೈಲಿಯಲ್ಲಿ ಪದ ಕಟ್ಟಿ ʼಬಾ ತಂಗಿ ಹೋಗೋಣ ಹೂವಿಗೆ ವೋಟು ಹಾಕೋಣʼ ಎಂದು ಹಾಡುತ್ತಾ ತಮ್ಮ ಪಕ್ಷದ ಪರ ವಿಶೇಷವಾಗಿ ಮತಯಾಚಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಯಾದಗಿರಿಯ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷರಾದ ಸಿ. ಮಲ್ಲು ಕೋಲಿವಾಡ (@cm_koliwad) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಾ ತಂಗಿ ಹೋಗೋಣ ಹೂವಿಗೆ ಓಟು ಹಾಕೋಣ ಎನ್ನುವ ಸುಂದರ ಜಾನಪದ ಶೈಲಿಯಲ್ಲಿ ಪದಕಟ್ಟಿ ಬಿಜೆಪಿ ಪರ ಮತಯಾಚಿಸುತ್ತಿರುವ ಮಾತೆಯರಿಗೆ ಅನಂತ ಕೋಟಿ ನಮನಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಊರಿನ ಮನೆ ಮನೆಗಳಿಗೆ ಪ್ರಚಾರಕ್ಕೆ ತೆರಳುವ ವೇಳೆ ಬಿಜೆಪಿ ಕಾರ್ಯಕರ್ತೆಯರು ಜಾನಪದ ಶೈಲಿಯಲ್ಲಿ ಪದಕಟ್ಟಿ “ಓಟು ಹಾಕೋಣ…. ಬಾ ತಂಗಿ ಹೋಗೋಣ ಹೂವಿಗೆ ವೋಟು ಹಾಕೋಣ… ವೋಟು ಹಾಕೋಣ ಹೂವ ಆರಿಸಿ ತರೋಣ…” ಎಂಬ ಸುಂದರ ಹಾಡನ್ನು ಹಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಎಣ್ಣೆ ಬೇಕಾದ್ರೂ ಕೊಡ್ತೀನಿ ಆದ್ರೆ ನೀರ್ ಮಾತ್ರ ಕೊಡಲ್ಲ, ಹಿಂಗನ್ನೋದಾ ಈ ಹುಡುಗಿ
ಏಪ್ರಿಲ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 92 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ತಾಯಂದಿರು ತುಂಬಾ ಚೆನ್ನಾಗಿ ಹಾಡಿದ್ದಾರೆ ಎಂದು ಜಾನಪದ ಶೈಲಿಯ ಈ ಹಾಡಿಗೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ