AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇದು ಅಪ್ಪಟ ಕನ್ನಡದ ಅಂಗಡಿ; ಇಲ್ಲಿ ಸಿಗೋ ವಸ್ತುಗಳೆಲ್ಲ ಹಳದಿ, ಕೆಂಪು ಬಣ್ಣದ್ದೇ

ನವೆಂಬರ್ ತಿಂಗಳು ಅಪ್ಪಟ ಕನ್ನಡಭಿಮಾನಿಗಳ ಪಾಲಿಗೆ ಸಂಭ್ರಮದ ತಿಂಗಳು. ನವೆಂಬರ್‌ನಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡಾಭಿಮಾನ ಮೆರೆಯುವುದನ್ನು ನೀವು ನೋಡಿರುತ್ತೀರಿ. ಆದರೆ ನವೆಂಬರ್ ತಿಂಗಳು ಬಂತೆಂದರೆ ಈ ಕನ್ನಡ ಅಭಿಮಾನಿಯೊಬ್ಬರ ಸ್ಟೋರ್‌ನಲ್ಲಿ ಕೆಂಪು ಹಾಗೂ ಹಳದಿ ಬಣ್ಣದ ಪ್ರಾಡಕ್ಟ್‌ಗಳೇ ರಾರಾಜಿಸುತ್ತವೆ. ಹೌದು, ಅಪ್ಪಟ ಕನ್ನಡದ ಅಂಗಡಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

Video: ಇದು ಅಪ್ಪಟ ಕನ್ನಡದ ಅಂಗಡಿ; ಇಲ್ಲಿ ಸಿಗೋ ವಸ್ತುಗಳೆಲ್ಲ ಹಳದಿ, ಕೆಂಪು ಬಣ್ಣದ್ದೇ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on:Nov 20, 2025 | 3:52 PM

Share

ಹಾಸನ, ನವೆಂಬರ್‌ 20: ಕನ್ನಡ ರಾಜ್ಯೋತ್ಸವದ (Kannada Rajyotsava) ಎಂದರೆ ಕನ್ನಡಿಗರಿಗೆ ಹಬ್ಬವೇ ಸರಿ. ಹೀಗಾಗಿ ಈ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ತಿಂಗಳ ಕಾಲ ಆಚರಣೆಗಳು ಜೋರಾಗಿಯೇ ನಡೆಯುತ್ತಿರುತ್ತದೆ. ಈ ತಿಂಗಳಲ್ಲಿ ಶಾಲೆಗಳು, ಕಾಲೇಜುಗಳು ಸೇರಿದಂತೆ ಸಂಘ ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಅಭಿಮಾನವನ್ನು ಪ್ರದರ್ಶಿಸುತ್ತಾರೆ. ಆದರೆ ಈ ಕನ್ನಡ (Kannada) ಅಭಿಮಾನಿಯ ಸಂಭ್ರಮಾಚರಣೆಯು ವಿಭಿನ್ನವಾಗಿದೆ. ಕನ್ನಡದ ಧ್ವಜದ ಬಣ್ಣವಾದ ಹಳದಿ ಹಾಗೂ ಕೆಂಪು ಬಣ್ಣದ ಪ್ರಾಡಕ್ಟ್‌ಗಳು ಮಾತ್ರ ಈ ಅಂಗಡಿಯಲ್ಲಿ ದೊರೆಯುತ್ತದೆ. ನವೆಂಬರ್ ತಿಂಗಳಲ್ಲಿ ಕನ್ನಡ ಭಾವುಟದ ಬಣ್ಣದ ಪ್ರಾಡಕ್ಟ್‌ಗಳನ್ನೇ  ಮಾರಾಟ ಮಾಡಿ ತಮ್ಮ ಕನ್ನಡ ಅಭಿಮಾನವನ್ನು ತೋರುತ್ತಾರೆ. ಬಾಸ್ಕೆಟ್, ಬಕೆಟ್ ಕುರ್ಚಿಯಿಂದ ಹಿಡಿದು ಪ್ರತಿಯೊಂದು ವಸ್ತುಗಳು ಕೆಂಪು ಹಾಗೂ ಹಳದಿ ಬಣ್ಣದಲ್ಲೇ ದೊರೆಯುವುದು ವಿಶೇಷ. ಕನ್ನಡಿಗರ ಅಂಗಡಿಯಾದ ಶ್ರೀ ಮಾರುತಿ ಸ್ಟೋರ್ ಶಕ್ತಿ ಟೂಲ್ಸ್ ಇರುವುದು ಹಾಸನ ಜಿಲ್ಲೆಯ ಬೇಲೂರಿನಲ್ಲಿ. ಈ ವಿಶೇಷ ಹಾಗೂ ಆಕರ್ಷಕ ಅಂಗಡಿಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಇದು ಅಪ್ಪಟ ಕನ್ನಡಿಗನ ಅಂಗಡಿ; ವಿಶೇಷತೆ ಇಲ್ಲಿದೆ ನೋಡಿ

ಮಸಾಲಾ ಚಾಯ್ ಮೀಡಿಯಾ (Masala Chai Media) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೇಟರ್ ಕನ್ನಡಿಗರ ಅಂಗಡಿಯ ಮಾಲೀಕರನ್ನು ಮಾತನಾಡಿಸಿದ್ದಾರೆ. ಈ ವೇಳೆ ಮಾಲೀಕ ನಾವು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕರ್ನಾಟಕದ ಭಾವುಟದ ಬಣ್ಣದ ಪ್ರಾಡಕ್ಟ್ ಗಳನ್ನೇ ಮಾರಾಟ ಮಾಡ್ತೇವೆ. ಈ ಪ್ರಾಡಕ್ಟ್ ಗಳಿಗೆ ಶೇಕಡಾ ಇಪ್ಪತ್ತರಷ್ಟು ರಿಯಾಯಿತಿ ನೀಡ್ತೇವೆ. ಇದರ ಮೂಲ ಉದ್ದೇಶವೇ ಕನ್ನಡ ಕಲಿಯಬೇಕು, ಕನ್ನಡ ಉಳಿಸಬೇಕು, ಕನ್ನಡ ತಾಯಿಗೆ ಗೌರವ ಕೊಡಬೇಕು ಎನ್ನುವುದಾಗಿದೆ. 2008 ರಲ್ಲಿ ಡಾ. ರಾಜ್ ಕುಮಾರ್ ಸಂಘದ ಅಧ್ಯಕ್ಷನಾಗಿದ್ದೆ. ಅಲ್ಲಿಂದ ಈ ವಿಭಿನ್ನ ರೀತಿ ಪ್ರಾಡಕ್ಟ್ ಗಳನ್ನು ಮಾರಾಟ ಮಾಡ್ತಾ ಇದ್ದೇನೆ ಎನ್ನುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಲಾದ ಮಾಲೀಕರ ಸ್ಕೂಟರ್ ಹಳದಿ ಹಾಗೂ ಕೆಂಪು ಬಣ್ಣದಲ್ಲಿ ಇರುವುದು ಮತ್ತೊಂದು ವಿಶೇಷ ಎನ್ನಬಹುದು. ಇನ್ನು ಈ ವ್ಯಕ್ತಿಯ ಹಣೆ ಮೇಲೆ ಕೆಂಪು ಹಳದಿ ಬಣ್ಣಗಳು ರಾರಾಜಿಸುತ್ತಿವೆ ಹಾಗೂ ಕೈ ಮೇಲೆ ಕನ್ನಡಿಗ ಎಂದು ಟ್ಯಾಟೂ ಹಾಕಿಸಿಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ:ಕನ್ನಡ ಅಕ್ಷರ ಮಾಲೆಯಲ್ಲಿ ಅಡಗಿದೆ ನಗುವಿನ ಗುಟ್ಟು, ಅದೇಗೆ ಅಂತೀರಾ?

ಈ ವಿಡಿಯೋ ಇದುವರೆಗೆ ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಓ ನಮ್ಮ ಬೇಲೂರ್, ಚಿಕ್ಕಮಂಗಳೂರು ರೋಡ್ ನಮ್ದು ಬೇಲೂರ್. ಶಿಲ್ಪಾ ಕಲೆಗಳ ತವರೂರು ನಮ್ಮ ಬೇಲೂರ್ ಎಂದಿದ್ದಾರೆ. ಇನ್ನೊಬ್ಬರು, ಮಾದರಿ ಕನ್ನಡ ಅಭಿಮಾನಿ ಉದ್ಯೋಗದಲ್ಲಿಯೇ ಕನ್ನಡ ಅಭಿಮಾನವನ್ನು ಕಂಡುಕೊಂಡಿರುವ ಇವರಿಗೆ ಅನಂತ ಅಭಿನಂದನೆಗಳು ಹೃದಯಪೂರ್ವಕ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರಲ್ಲೂ ದೇವರನ್ನು ನೋಡೋಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ನಿಮ್ಮ ಕನ್ನಡದ ಅಭಿಮಾನಕ್ಕೆ ನಮ್ಮ ಕಡೆಯಿಂದ ಒಂದು ದೊಡ್ಡ ನಮಸ್ಕಾರ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Thu, 20 November 25

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್