Video: ಕನ್ನಡ ಅಕ್ಷರ ಮಾಲೆಯಲ್ಲಿ ಅಡಗಿದೆ ನಗುವಿನ ಗುಟ್ಟು, ಅದೇಗೆ ಅಂತೀರಾ?
ಚಿಂತೆಯೆಲ್ಲಾ ಬಿಡಿ, ಸದಾ ನಗುತ್ತಿರಿ ಎಂಬ ಮಾತನ್ನು ಕೇಳಿರುತ್ತೀರಿ. ಈಗಿನ ಕಾಲದಲ್ಲಿ ನಗುವುದಕ್ಕೂ ಟೈಮ್ ಇಲ್ಲ. ಆದರೆ ನಗುವಿನ ಮೂಲಕ ಸ್ವರಗಳ ಉಚ್ಚಾರಣೆ ಮಾಡಬಹುದಂತೆ. ನಗುವುದಕ್ಕೆ ಮಾತ್ರವಲ್ಲ, ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಕಲಿಯಬಹುದು. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ನಗುವೆನ್ನೆವುದು (Laugh) ಅದ್ಭುತ ಶಕ್ತಿ. ಮನುಷ್ಯರಾಗಿರುವ ನಮಗೆ ಮಾತ್ರ ನಗುವುದಕ್ಕೆ ಸಾಧ್ಯ. ಸರ್ವ ರೋಗಕ್ಕೂ ನಗುವೊಂದೇ ಔಷಧಿ ಎಂಬ ಮಾತಿದೆ. ಒಬ್ಬ ವ್ಯಕ್ತಿಯು ಮನಸಾರೆ ನಗುವುದರಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುವಲ್ಲಿ ಹಾಗೂ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ. ಆದರೆ ಇದೀಗ ಕನ್ನಡ ಅಕ್ಷರಮಾಲೆಯಲ್ಲಿನ (Kannada alphabet) ಪದಗಳ ಮೂಲಕ ಸುಂದರವಾಗಿ ನಗಬಹುದೆಂದು ನಿಮಗೆ ತಿಳಿದಿದೆಯೇ. ಹೌದು, ಅ ಯಿಂದ ಅಃ ವರೆಗೆ ನಗುವ ರೀತಿಯೂ ಬಹಳ ಸೊಗಸಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡ ಅಕ್ಷರ ಮಾಲೆಯ ಪವರ್ ಇದು ಎಂದು ಬಳಕೆದಾರರು ಹೇಳಿದ್ದಾರೆ.
ಕನ್ನಡ ಅಕ್ಷರಮಾಲೆಯೊಂದಿಗೆ ನಗಲು ಪ್ರಯತ್ನಿಸಿ
ABC Chetana ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕನ್ನಡ ಕಿರುತೆರೆಯ ಹಿರಿಯ ನಟಿ ಶಾರದಾ ಜಿ.ಎಸ್ ಅವರು, ಅ ಯಿಂದ ಅಃ ವರೆಗೆ ನಗುವ ರೀತಿಯನ್ನು ಬಹಳ ಸೊಗಸಾಗಿ ತೋರಿಸಿಕೊಟ್ಟಿರುವುದನ್ನು ಕಾಣಬಹುದು. ಇಲ್ಲಿ ಅ ಯಿಂದ ಅಃ ವರೆಗಿನ ಅಕ್ಷರಗಳನ್ನು ಏರಿಳಿತದೊಂದಿಗೆ ನಗುವಿನಲ್ಲಿ ಬಳಸಲಾಗಿದೆ. ಈ ವಿಭಿನ್ನವಾಗಿ ಹಾಗೂ ವಿಧವಿಧವಾಗಿ ನಗುವುದನ್ನು ಇಲ್ಲಿ ತೋರಿಸುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಶಾಲೆಗೆ ಬರಲು ಒಲ್ಲೆ ಎಂದ ಹುಡುಗನನ್ನು ಎತ್ಕೊಂಡು ಹೋದ ಸಹಪಾಠಿಗಳು
ಕನ್ನಡ ಅಕ್ಷರ ಮಾಲೆಯೊಂದಿಗೆ ನಗುವಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಲ್ಕು ಲಕ್ಷ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಮ್ಮ ಕನ್ನಡ ಮಾತೃ ಭಾಷೆ. ಅದರಲ್ಲಿ ನಗುವಿನ ಮೂಲಕ ಸ್ವರ ಉಚ್ಚಾರಣೆ ಬಹಳ ಸೊಗಸಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ಕನ್ನಡ ಬರಿ ಭಾಷೆ ಅಲ್ಲ, ಅದು ಒಂದು ಭಾವನೆ. ಜೀವನದ ಮೌಲ್ಯ ಮಾಪನ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಕನ್ನಡ ಕಲಿಯದೇ ಇದ್ದವರು ಹೀಗೆ ಕಲಿಯಬಹುದು. ತುಂಬಾ ಸುಲಭವಾಗಿದೆ. ಎಲ್ಲಾ ಭಾಷೆಯವರು ಟ್ರೈ ಮಾಡಿ, ತುಂಬಾ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಗುವುದಕ್ಕೆ ಇಷ್ಟೇ ಸಾಕಲ್ಲವೇ ಎಂದರೆ ಮತ್ತೆ ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Thu, 20 November 25




