ಜನರು ಹೊಸದು ಮತ್ತು ಉಪಯುಕ್ತವಾದುದನ್ನು ಮಾಡಲು ಬಯಸುತ್ತಾರೆ. ಇಂಟರ್ನೆಟ್ನಲ್ಲಿ ನೋಡಿಯೋ ಅಥವಾ ಇನ್ನಾವುದಾದರೂ ವಸ್ತುಗಳನ್ನು ಸ್ಪೂರ್ತಿ ತೆಗೆದುಕೊಂಡು ತನ್ನದೇ ಆದ ಹೊಸ ವಿನ್ಯಾಸದ ವಸ್ತುಗಳನ್ನು ಅನೇಕರು ರಚಿಸುತ್ತಾರೆ. ಅದರಲ್ಲೂ ಮೆಕ್ಯಾನಿಕ್ ಕೆಲಸ ಗೊತ್ತಿರುವವರಂತೂ ವಾಹನಗಳಿಗೆ ಹೊಸ ರೂಪವನ್ನು ನೀಡುವುದರಲ್ಲಿ ನಿಸ್ಸೀಮರು. ತಮ್ಮ ವಾಹನಗಳಲ್ಲಿ ತರಹೇವಾರಿ ವಿನ್ಯಾಸಗಳನ್ನು ರೂಪಿಸಿ ನೋಡುಗರ ಹುಬ್ಬೇರಿಸುವಂತೆ ಮಾಡುತ್ತಾರೆ. ಇದೇ ರೀತಿಯಲ್ಲಿ ಬೈಕ್ ಗೆ ಹೊಸ ವಿನ್ಯಾಸವನ್ನು ನೀಡಿ ರಸ್ತೆಯಲ್ಲಿ ಸವಾರಿ ಹೋಗುತ್ತಿರುವ ವ್ಯಕ್ತಿಯೊಬ್ಬರ ವೀಡಿಯೊ ಇನ್ಸ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದೆ.
ಭಾರತೀಯ ವ್ಯಕ್ತಿಯೊಬ್ಬರು ಟೆಂಡಮ್ ಬೈಕ್ ವಿನ್ಯಾಸವನ್ನು ರೂಪಿಸಿದ್ದು, ಇದರಲ್ಲಿ ಇಬ್ಬರಿಗಿಂತ ಹೆಚ್ಚು ಸವಾರರು ಕುಳಿತುಕೊಳ್ಳಬಹುದಾಗಿದೆ. ಬಹುಶಃ ಇದನ್ನು ಸಾರ್ವಜನಿಕ ಸಾರಿಗೆಯಾಗಿ ಬಳಸಬಹುದು. ಇದು ಅನುಕೂಲಕರವಾದ ವಾಹನವಾಗಿದ್ದು, 5 ರಿಂದ 8 ಜನ ಏಕಕಾಲಕ್ಕೆ ಈ ಬೈಕ್ನಲ್ಲಿ ಕುಲಿತು ಸವಾರಿ ಮಾಡಬಹುದು. ಈ ವಾಹನವೂ ಯಾವುದೇ ಪರಿಸರ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ. ಟೆಂಡೆಮ್ ಬೈಕ್ ಎನ್ನುವುದು ಎರಡಕ್ಕಿಂತ ಹೆಚ್ಚು ವ್ಯಕ್ತಿಗಳು ಸವಾರಿ ಮಾಡಲು ವಿನ್ಯಾಸಗೊಳಿಸಲಾದ ಬೈಸಿಕಲ್ ನ ಒಂದು ರೂಪವಾಗಿದೆ.
ಇದನ್ನೂ ಓದಿ: Samantha: ಇಂಗ್ಲೆಂಡ್ ಜನರ ರೀತಿ ಇಂಗ್ಲಿಷ್ ಮಾತನಾಡಲು ಹೋಗಿ ಟ್ರೋಲ್ ಆದ ಸಮಂತಾ; ವಿಡಿಯೋ ವೈರಲ್
ಈ ಟೆಂಡಮ್ ಬೈಕ್ ಸವಾರಿಯ ವಿಡಿಯೋವನ್ನು ಸಂದೀಪ್ ಪ್ರಜಾಪತಿ ಎನ್ನುವವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 730 ಸಾವಿರ ವೀಕ್ಷಣೆ ಮತ್ತು 39.1 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಮತ್ತು ಅನೇಕ ಜನರು ಧನಾತ್ಮಕವಾದ ಕಮೆಂಟ್ಗಳನ್ನು ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಮಾಡಿ
Published On - 6:35 pm, Tue, 25 April 23