YS Sharmila: ಪ್ರತಿಭಟನೆ ವೇಳೆ ಪೊಲೀಸರಿಗೆ ವೈಎಸ್ ಶರ್ಮಿಳಾ ಕಪಾಳಮೋಕ್ಷ, ವೀಡಿಯೊ ವೈರಲ್
ವೈಎಸ್‌ಆರ್ ತೆಲಂಗಾಣ ಪಕ್ಷದ ನಾಯಕಿ ವೈಎಸ್ ಶರ್ಮಿಳಾ ಅವರು ಪ್ರತಿಭಟನೆಯ ವೇಳೆ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ಈ ವೀಡಿಯೊ ವೈರಲ್ ಆಗಿದೆ.
ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ಮೋಹನ್ ರೆಡ್ಡಿ (Y. S. Jaganmohan Reddy) ಹಾಗೂ ವೈಎಸ್‌ಆರ್ ತೆಲಂಗಾಣ ಪಕ್ಷದ ನಾಯಕಿ ವೈಎಸ್ ಶರ್ಮಿಳಾ (YS Sharmila) ಅವರು ಪ್ರತಿಭಟನೆಯ ವೇಳೆ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕಾರಣಕ್ಕೆ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಗಳಿಗೆ ಪ್ರಶ್ನೆಪ್ರತಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಗೆ ತೆರಳುತ್ತಿದ್ದಾಗ ಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದಾರೆ. ಇದಕ್ಕೆ ಕೋಪಗೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಸುದ್ದಿ ಸಂಸ್ಥೆ ANI ಹಂಚಿಕೊಂಡ ವೀಡಿಯೊದ ಪ್ರಕಾರ ಶರ್ಮಿಳಾ ಅವರ ಕಾರು ಎಸ್‌ಐಟಿ ಕಚೇರಿಗೆ ಬರುತ್ತಿದ್ದಂತೆ ಪೊಲೀಸರು ತೆಡೆದಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ. ಶರ್ಮಿಳಾ ಅವರ ವಾಹನವನ್ನು ಪೊಲೀಸರು ನಿಲ್ಲಿಸಿದ ತಕ್ಷಣ ಕಾರಿನಿಂದ ಇಳಿದು, ಕಾರು ತಡೆದ ಪೋಲೀಸ್ ಬಳಿಗೆ ಹೋಗುತ್ತಾರೆ. ಅವರ ಜತೆಗೆ ಮಾತಿನ ಮಾತಿಗೆ ಇಳಿದು, ಪೊಲೀಸ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ, ತಳ್ಳುತ್ತಾರೆ. ಇದರಿಂದ ಪೊಲೀಸ್ ಅಧಿಕಾರಿ ಮತ್ತು ಶರ್ಮಿಳಾ ನಡುವೆ ವಾಗ್ವಾದವು ಪ್ರಾರಂಭವಾಗುತ್ತದೆ. ಇತರ ಪೊಲೀಸ್ ಸಿಬ್ಬಂದಿ ಶರ್ಮಿಳಾ ಅವರನ್ನು ಅಲ್ಲಿಂದ ಕರೆದೊಯ್ಯಲು ಪ್ರಯತ್ನ ಮಾಡಿದ್ದಾರೆ. ಮತ್ತೊಂದು ವೀಡಿಯೊದಲ್ಲಿ, ಶರ್ಮಿಳಾ ಮಹಿಳಾ ಪೊಲೀಸ್ಗೂ ಕಪಾಳಮೋಕ್ಷ ಮಾಡಿದ್ದಾರೆ.
#WATCH | YSRTP Chief YS Sharmila manhandles police personnel as she is being detained to prevent her from visiting SIT office over the TSPSC question paper leak case, in Hyderabad pic.twitter.com/StkI7AXkUJ
— ANI (@ANI) April 24, 2023
ಇದರ ಜತೆಗೆ ಶರ್ಮಿಳಾ ಅವರ ತಾಯಿ ವೈಎಸ್ ವಿಜಯಮ್ಮ ಅವರು ಕೂಡ ಪೊಲೀಸ್ ಸಿಬ್ಬಂದಿಯ ಜತೆಗೆ ಮಾತಿಗೆ ನಿಂತು ಪೊಲೀಸರನ್ನು ತಳ್ಳುತ್ತಿರುವ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿದೆ. ಬಂಧನವಾದ ಶರ್ಮಿಳಾ ಅವರನ್ನು ಭೇಟಿ ಮಾಡಲು ವಿಜಯಮ್ಮ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಬಂದಿರುವಾಗ ಈ ಘಟನೆ ನಡೆದಿದೆ.
#WATCH | YSRTP Chief YS Sharmila’s mother YS Vijayamma shoves police personnel as she visits her daughter at Jubilee Hills Police Station after her detention#Hyderabad pic.twitter.com/jdchj1LnTU
— ANI (@ANI) April 24, 2023
ಇದನ್ನೂ ಓದಿ;YS Sharmila: ತೆಲಂಗಾಣದತ್ತ ಛಲಗಾತಿ ವೈ.ಎಸ್.ಶರ್ಮಿಳಾ ಚಿತ್ತ; ಘಟಾನುಘಟಿ ನಾಯಕರಿಗೆ ಏಕಿಷ್ಟು ಹೆದರಿಕೆ?
ತೆಲಂಗಾಣ ರಾಜ್ಯ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಆರೋಪದ ಮೇಲೆ ತೆಲಂಗಾಣದಲ್ಲಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆಯುತ್ತಿದೆ. ಆರೋಪಗಳು ಮುನ್ನೆಲೆಗೆ ಬಂದಾಗಿನಿಂದ 11 ಜನರನ್ನು ಬಂಧಿಸಲಾಗಿದೆ ಮತ್ತು ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ವಿರೋಧ ಪಕ್ಷಗಳು ಕೆ ಚಂದ್ರಶೇಖರ ರಾವ್ ಸರ್ಕಾರವನ್ನು ಈ ಆರೋಪಕ್ಕೆ ಹೊಣೆ ಮಾಡಿದೆ.
ತೆಲಂಗಾಣದಲ್ಲಿ ಸ್ವತಂತ್ರ ರಾಜಕೀಯ ಪಕ್ಷವನ್ನು ಕಟ್ಟಲು ಶ್ರಮಿಸುತ್ತಿರುವ ಶರ್ಮಿಳಾ ಈ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ಬಗ್ಗೆ ದೊಡ್ಡ ಹೋರಾಟವನ್ನು ನಡೆಸುತ್ತಿದ್ದಾರೆ. ಕಳೆದ ತಿಂಗಳು, ಈ ವಿಷಯದ ಬಗ್ಗೆ ಹೈದರಾಬಾದ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಅವರನ್ನು ಬಂಧಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Mon, 24 April 23