Viral Video: ಹಳ್ಳಿ ಹುಡುಗಿಯ ಕೋಲುವರಸೆ ಹೇಗಿದೆ ನೋಡಿ?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 09, 2023 | 6:10 PM

ಸಿಲಂಬಮ್ (ಕೋಲುವರಸೆ) ದಕ್ಷಿಣ ಭಾರತದ ಆಯುಧ ಆಧಾರಿತ ಪ್ರಾಚೀನ ಸಮರ ಕಲೆಯಾಗಿದ್ದು, ಕರಾಟೆ ಸೇರಿದಂತೆ ಇತರೆ ಮಾರ್ಷಿಯಲ್ ಆರ್ಟ್ ಕಲೆಗಳನ್ನು ಅಭ್ಯಾಸ ಮಾಡುವಂತೆ, ಇಂದಿಗೂ ಸಿಲಂಬಮ್ ಸಮರ ಕಲೆಯ ತರಬೇತಿಯನ್ನು ಪಡೆಯುವ ಹಲವರಿದ್ದಾರೆ. ಇದೇ ರೀತಿ ಕೋಲುವರಸೆ ಸಮರ ಕಲೆಯ ತರಬೇತಿಯನ್ನು ಪಡೆಯುವಂತಹ ವಿದ್ಯಾರ್ಥಿನಿಯೊಬ್ಬಳು, ಆತ್ಮವಿಶ್ವಾಸದಿಂದ ಕೋಲುವರಸೆ ಕಸರತ್ತಿನ ಅದ್ಭುತ ಪ್ರದರ್ಶನವನ್ನು ನೀಡಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Viral Video: ಹಳ್ಳಿ ಹುಡುಗಿಯ ಕೋಲುವರಸೆ ಹೇಗಿದೆ ನೋಡಿ?
ವೈರಲ್ ವಿಡಿಯೋ
Follow us on

ಕೋಲು ವರಸೆ ಅಥವಾ ಸಿಲಂಬಮ್ ಎಂಬುದು ದಕ್ಷಿಣ ಭಾರತದಲ್ಲಿನ ಆಯುಧ ಆಧಾರಿತ ಪ್ರಾಚೀನ ಸಮರ ಕಲೆಯಾಗಿದೆ. ಇದು ಬಿದಿರು ಕೋಲನ್ನು ಕೈಯಲ್ಲಿ ಹಿಡಿದು ಆಡುವ ಸಾಂಪ್ರದಾಯಿಕ ಸಮರ ಕಲೆಯಾಗಿದೆ. ಕರಾಟೆ ಸೇರಿದಂತೆ ಇತರ ಮಾರ್ಷಿಯಲ್ ಆರ್ಟ್ಸ್ ತರಬೇತಿಯನ್ನು ನೀಡುವಂತೆ, ಇಂದಿಗೂ ಕೋಲುವರಸೆ ಸಮರ ಕಲೆಯ ತರಬೇತಿಯನ್ನೂ ನೀಡಲಾಗುತ್ತದೆ. ಹಲವಾರು ಸಿಲಂಬಮ್ ಕ್ಲಾಸಸ್ ಕೂಡಾ ಇವೆ. ಈ ಸಮರ ಕಲೆಯನ್ನು ಅಭ್ಯಾಸ ಮಾಡುವುದರಿಂದ ನಮ್ಮ ದೇಹ ಸದೃಢವಾಗಿರುವುದು ಮಾತ್ರವಲ್ಲದೆ, ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಮತ್ತು ಈ ಸಮರ ಕಲೆ ವ್ಯಕ್ತಿತ್ವ ವಿಕಸನಕ್ಕೂ ಬಹಳ ಸಹಕಾರಿಯಾಗಿದೆ. ಈ ಎಲ್ಲಾ ಪ್ರಯೋಜನಗಳ ಕಾರಣ, ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೋಲುವರಸೆ ತರಬೇತಿ ನೀಡಲು ಬಯಸುತ್ತಾರೆ. ಇದೇ ರೀತಿ ಕೋಲುವರಸೆ ಸಮರ ಕಲೆಯ ತರಬೇತಿಯನ್ನು ಪಡೆಯುತ್ತಿರುವಂತಹ ವಿದ್ಯಾರ್ಥಿನಿಯೊಬ್ಬಳು ಅದ್ಭುತವಾಗಿ ಕೋಲುವರಸೆ ಕಸರತ್ತಿನ ಪ್ರದರ್ಶನವನ್ನು ಮಾಡಿದ್ದು, ಈಕೆಯ ಪ್ರತಿಭೆಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ಲಭಿಸಿದೆ.

ಸಿಲಂಬಮ್ ತರಬೇತುದಾರ ಶರತ್ (@sarathsilambam) ಎಂಬವರು ತಮ್ಮ ವಿಧ್ಯಾರ್ಥಿನಿಯ ಕೋಲುವರಸೆ ಪ್ರದರ್ಶನದ ವಿಡಿಯೋವನ್ನು ಹೆಮ್ಮೆಯಿಂದ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿನಿ ಬಿದಿರು ಕೋಲನ್ನು ಹಿಡಿದುಕೊಂದು ಮಿಂಚಿನ ವೇಗದಲ್ಲಿ ಕೋಲುವರಸೆ ಕಲೆಯನ್ನು ಪ್ರದರ್ಶಿಸುವ ದೃಶ್ಯಾವಳಿಯನ್ನು ವಿಡಿಯೋದಲ್ಲಿ ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ವಿದ್ಯಾರ್ಥಿನಿ ಅಂಗಳದಲ್ಲಿ ನಿಂತು, ಕೈಯಲ್ಲಿ ಒಂದು ಬಿದಿರು ಕೋಲನ್ನು ಹಿಡಿದುಕೊಂಡು, ಬಹಳ ಆತ್ಮವಿಶ್ವಾಸದಿಂದ ಸಿಲಂಬಮ್ ಕಸರತ್ತನ್ನು ಮಾಡುವ ಅದ್ಭುತ ದೃಶ್ಯಾವಳಿಯನ್ನು ಕಾಣಬಹುದು.

ಇದನ್ನೂ ಓದಿ:  ಶ್ರೀ ಕೃಷ್ಣದೇವರಾಯರ ಆಸ್ಥಾನದ ಮಹಾಮಂತ್ರಿ ತಿಮ್ಮರಸರ ವಾಡೆ ಮತ್ತು ಕುಟುಂಬ ಈಗ ಹೇಗಿದೆ ಗೊತ್ತಾ? 

ಡಿಸೆಂಬರ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 517K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಈ ಬಾಲಕಿ ತುಂಬಾ ಪ್ರತಿಭಾವಂತೆʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಇನೊಬ್ಬ ಬಳಕೆದಾರರು ʼಈಕೆ ಎಲ್ಲಾ ಹುಡುಗಿಯರಿಗೂ ಮಾದರಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈಕೆಯ ಪ್ರತಿಭೆಗೆ ಮೆಚ್ಚುಗೆಯನ್ನು ಸೂಚಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ