West Bengal : ‘ತಮ್ಮ ಅಪ್ಪಂದಿರ ದುಡ್ಡಿನಲ್ಲಿ ಕೆಟ್ಟ ವಿನ್ಯಾಸದ ತಮ್ಮದೇ ‘ಬ್ರ್ಯಾಂಡ್’ನಡಿ (Brand) ಅಸಹ್ಯ ಟೀಶರ್ಟುಗಳನ್ನು ತಯಾರಿಸಿ ಮಾರುವ ಶ್ರೀಮಂತರ ಮಕ್ಕಳಿಗೆ ಸಾವಿರಾರು ರೂಪಾಯಿಗಳನ್ನು ಬಡಿಯುವ ಬದಲು ಇಂಥ ಕಲಾವಿದರನ್ನು ನಾವು ಪೋಷಿಸಬೇಕು. ಏಕೆಂದರೆ ಇವರ ಉತ್ಪನ್ನದ ಮೇಲೆ ನಾವು ಸಂಪೂರ್ಣ ಭರವಸೆಯನ್ನು ಇಡಬಹುದು.’ ಕುಸುರಿಕಲೆಯ ಬೆಡ್‌ಶೀಟ್ ಹಾಗೂ ಇನ್ನಿತರೇ ವಸ್ತುಗಳನ್ನು ಖರೀದಿಸಿದ ನೂರಾರು ಜನರು ಇವುಗಳ ಅಂದ, ಉಪಯುಕ್ತತೆ, ಬಾಳಿಕೆ, ಹಾಗೂ ಬೆಲೆಯ ಬಗ್ಗೆ ವಿಶ್ವಾಸ ತೋರಿ ಪ್ರತಿಕ್ರಿಯಿಸಿದ್ದಾರೆ. ನೋಡಿ ಈ ಟ್ವೀಟ್
This is Shamsuddin Sekh from Hooghly district of West Bengal.
He goes from home to home, in Delhi, selling beautifully embroidered bed sheets, dining table covers, suits etc. The embroidery is mostly done by his family members back home. pic.twitter.com/QGkfsr81la ಇದನ್ನೂ ಓದಿ— seemi pasha (@seemi_pasha) June 3, 2023
ಇವರು ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆಯ ಶಮ್ಸುದ್ದಿನ್ ಶೇಖ್. ದೆಹಲಿಯಲ್ಲಿ ಸೈಕಲ್ ಮೇಲೆ ಮನೆಮನೆಗೆ ತಿರುಗಿ ಸುಂದರ ಕುಸುರಿಯುಳ್ಳ ಬೆಡ್‌ಶೀಟ್‌ಗಳು, ಊಟದ ಮೇಜಿನ ಕವರುಗಳು ಹಾಗೂ ಇತರೇ ನಿತ್ಯುಪಯುಕ್ತ ವಸ್ತುಗಳನ್ನು ಮಾರುತ್ತಾರೆ. ಇವುಗಳ ಮೇಲೆ ಕಾಣುವ ಮನಮೋಹಕ ಕುಸುರಿಯನ್ನು ಅವರೂರಿನಲ್ಲಿ ಅವರ ಮನೆಮಂದಿಯೆಲ್ಲ ಕುಳಿತು ಮಾಡುತ್ತಾರೆ. ಇವುಗಳ ದರವೂ ಕೈಗೆಟಕುವಂತಿವೆ.
ಇದನ್ನೂ ಓದಿ : Viral Video: ಕಾಮ್ ಡೌನ್; ಬೆಲ್ಲಿ ಡ್ಯಾನ್ಸ್ ನೋಡಿ ”ಮಂಡೇ” ಬಿಸಿ ಓಡಿಸಿ
‘ಎಷ್ಟು ಸುಂದರವಾಗಿವೆ! ಇವುಗಳಿಗಾಗಿ ನಾನು ದೆಹಲಿ ಅಥವಾ ಕೊಲ್ಕತ್ತೆಯಲ್ಲಿ ಇರಬೇಕಿತ್ತು ಎನ್ನಿಸುತ್ತಿದೆ’ ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಪ್ರತಿಯೊಂದು ಬಂಗಾಲಿ ಮನೆಯಲ್ಲೂ ಇಂಥ ಹತ್ತಾರು ಚಾದರಗಳಾದರೂ ಇರುತ್ತವೆ’ ಎಂದು ಇವುಗಳ ಸಾರ್ವತ್ರಿಕತೆಯನ್ನು ಒಬ್ಬರು ಒತ್ತಿ ಹೇಳಿದ್ದಾರೆ. ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆಗಳಿರುವ ಈ ಟ್ವೀಟ್‌ಗೆ ಕೆಲವು ಬುದ್ಧಿಗೇಡಿಗಳು ಮತೀಯ ಬಣ್ಣ ಬಳಿದಿರುವುದೂ ಇಲ್ಲಿ ಕಾಣುತ್ತಿದೆ.
ಇದನ್ನೂ ಓದಿ : Viral: ಲೈಕ್ಸ್ ಗಳಿಸುವುದಕ್ಕೋಸ್ಕರ ವಿಮಾನವನ್ನೇ ನೆಲಕ್ಕಪ್ಪಳಿಸಿದ ಭೂಪನಿಗೆ 20 ವರ್ಷ ಜೈಲು?
ಇವನ್ನು ಹೈದರಾಬಾದ್, ಮುಂಬೈ, ಬೆಂಗಳೂರಿಗೆ ಅವರು ಕಳಿಸಲು ಸಾಧ್ಯವೇ? ಎಂದು ಅನೇಕರು ಕೇಳಿದ್ದಾರೆ. ಇವರಂಥ ಸ್ಥಳೀಯ ಕಲಾವಿದರು ಹಾಗೂ ಕುಶಲಕರ್ಮಿಗಳು ಪ್ರಾಮಾಣಿಕ ಜೀವನವನ್ನು ನಡೆಸಬಯಸುವ ಶ್ರಮಜೀವಿಗಳು. ದಯವಿಟ್ಟು ಅಂಥವರಿಗೆ ಪ್ರೋತ್ಸಾಹ ಕೊಡಿ ಎಂದು ನೆಟ್ಟಿಗರೊಬ್ಬರು ಕಾಳಜಿ ವ್ಯಕ್ತಪಡಿಸಿದ್ಧಾರೆ.
ಇದನ್ನೂ ಓದಿ : Viral Video: ಅವನ ಅಂಗಾಲ ಮೇಲೆ ಆಕೆ, ಆಕೆಯ ಅಂಗಾಲ ಮೇಲೆ ನಾಯಿ; ಪರಮ ಕ್ರೌರ್ಯ ಎಂದ ನೆಟ್ಟಿಗರು
ಈ ಟ್ವೀಟ್ ಗಮನಿಸಿದ ನಿಮಗೀಗ ನಿಮ್ಮ ಊರಿನ ಕುಶಲಕರ್ಮಿಗಳು ನೆನಪಾಗುತ್ತಿದ್ಧಾರಾ? ಅವರ ಪರಿಸ್ಥಿತಿ ಹೇಗಿದೆ, ಅವರ ಉತ್ಪನ್ನಗಳ ವೈಶಿಷ್ಟ್ಯಗಳನ್ನೊಮ್ಮೆ ನೋಡಿಕೊಂಡು ಬನ್ನಿ. ಅವರ ಉತ್ಪನ್ನಗಳು ಮತ್ತು ಸಂಪರ್ಕ ವಿವರವನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:51 pm, Mon, 5 June 23