Viral: ಮದುವೆಯಾದ ಗಂಡು ಜೋಡಿ; ಹೇಗಿತ್ತು ನೋಡಿ ಅದ್ದೂರಿ ಸಲಿಂಗ ವಿವಾಹ

ವಿದೇಶಗಳಲ್ಲಿ ಸಲಿಂಗ ಪ್ರೇಮ, ಸಲಿಂಗ ವಿವಾಹ ಇವೆಲ್ಲವೂ ಕಾಮನ್.‌ ಆದ್ರೆ ಭಾರತದಲ್ಲಿ ಇಂತವೆಲ್ಲಾ ಕಾಣ ಸಿಗುವುದು ತೀರಾ ಅಪರೂಪ. ಈಗ ಇಲ್ಲೊಂದು ಜೋಡಿ ಸಲಿಂಗ ವಿವಾಹವಾಗಿ ಸಖತ್‌ ಸುದ್ದಿಯಲ್ಲಿದ್ದಾರೆ. ಈ ಇಬ್ಬರೂ ವರರು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದು, ಈ ಅದ್ಧೂರಿ ಮದುವೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Viral: ಮದುವೆಯಾದ ಗಂಡು ಜೋಡಿ; ಹೇಗಿತ್ತು ನೋಡಿ ಅದ್ದೂರಿ ಸಲಿಂಗ ವಿವಾಹ
Gay Couple’s Wedding Video Goes Viral
Edited By:

Updated on: Mar 02, 2025 | 4:15 PM

ಕೆಲ ಪಾಶ್ಚಿಮಾತ್ಯ ದೇಶಗಳಲ್ಲಿ ಸಲಿಂಗ ಪ್ರೇಮ, ಮದುವೆ ಇವೆಲ್ಲವೂ ಸಾಮಾನ್ಯವಾಗಿದೆ. ಆದ್ರೆ ಭಾರತದಲ್ಲಿ ಇವೆಲ್ಲಾ ಕಾಣಸಿಗುವುದೇ ತೀರಾ ಅಪರೂಪವಾಗಿದ್ದರೂ ಇತ್ತೀಚಿಗೆ ನಮ್ಮ ದೇಶದಲ್ಲೂ ಸಲಿಂಗ ಪ್ರೇಮ, ಸಲಿಂಗ ವಿವಾಹ ಸಾಮಾನ್ಯವಾದಂತೆ ಕಾಣುತ್ತದೆ. ಗಂಡು-ಗಂಡು, ಹೆಣ್ಣು-ಹೆಣ್ಣು ಮದುವೆಯಾಗುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಗಂಡು-ಗಂಡು ಜೋಡಿಯೊಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಈ ಇಬ್ಬರೂ ಈ ಇಬ್ಬರೂ ವರರು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.

ಸಾಮಾನ್ಯವಾಗಿ ಭಾರತದಂತಹ ರಾಷ್ಟ್ರಗಳಲ್ಲಿ ಮರ್ಯಾದೆ ಪ್ರಶ್ನೆ, ಸಮಾಜ ಏನನ್ನುತ್ತೋ ಕಾರಣಕ್ಕೆ ಪೋಷಕರೇ ಮಕ್ಕಳ ಸಲಿಂಗ ವಿವಾಹಕ್ಕೆ ಹಿಂದೇಟು ಹಾಕ್ತಾರೆ. ಆದ್ರೆ ಇಲ್ಲೊಂದು ಜೋಡಿ ಹೆತ್ತವರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿಯೇ ಅದ್ದೂರಿಯಾಗಿ ಸಲಿಂಗ ವಿವಾಹವಾಗಿದ್ದಾರೆ.

ಡ್ಯಾನ್ಸ್‌ ಕೊರಿಯೋಗ್ರಾಫರ್‌ ಆಕಾಂಕ್ಷ (aks_naach) ಈ ಕುರಿತ ಸುಂದರ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, “ನಾನು ಭಾಗಿಯಾದ ಮೊದಲ ಭಾರತೀಯ ಸಲಿಂಗ ವಿವಾಹ; ಸ್ನೇಹಿತರಷ್ಟೇ ಅಲ್ಲ, ಈ ಮದುವೆಯಲ್ಲಿ ಇವರ ಕುಟುಂಬಸ್ಥರ ಖುಷಿಯನ್ನು ನೋಡಿ ಹೃದಯ ತುಂಬಿ ಬಂತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವರರಿಬ್ಬರು ಅದ್ದೂರಿ ಮೆರವಣಿಗೆಯ ಮೂಲಕ ಮದುವೆ ಮನೆಗೆ ಆಗಮಿಸುತ್ತಿರುವ ದೃಶ್ಯವನ್ನು ಕಾಣಬಹುದು. ಸ್ನೇಹಿತರಷ್ಟೇ ಅಲ್ಲ ಈ ಮದುವೆಯಲ್ಲಿ ಕುಟುಂಬಸ್ಥರು ಕೂಡಾ ನವ ವರರರೊಂದಿಗೆ ಸೇರಿ ಸಖತ್‌ ಆಗಿ ಡ್ಯಾನ್ಸ್‌ ಮಾಡುತ್ತಾ ಮದುವೆಯನ್ನು ಎಂಜಾಯ್‌ ಮಾಡಿದ್ದಾರೆ.

ಇದನ್ನೂ ಓದಿ: ವರ್ಷಕ್ಕೆ ಕೊಡೋದು 3.8 ಲಕ್ಷ ರೂ ಸಂಬಳವಾದ್ರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ಲೇಬೇಕಂತೆ, ಇದು ಬಾಸ್ ಆದೇಶ

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 8.3 ಮಿಲಿಯನ್‌ ವೀಕ್ಷಣೆಗಳನ್ನು ಹಾಗು ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರಿಬ್ಬರು ಸಂತೋಷವಾಗಿ ಮದುವೆಯಾಗಿದ್ದಾರೆ ಅಂದ್ರೆ ಕಾಮೆಂಟ್‌ ಮಾಡುವವರು ಏಕೆ ಇಷ್ಟು ದುಃಖಿತರಾಗಿದ್ದಾರೆʼ ಎಂದು ಸಲಿಂಗ ಜೋಡಿಯ ಪರ ಬ್ಯಾಟ್‌ ಬೀಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಸುಂದರವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಮ್ಮ ಜೀವನ ಚೆನ್ನಾಗಿರಲಿʼ ಎಂದು ಹರಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Sun, 2 March 25