
ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದ ಪ್ರಧಾನಿ ಮೋದಿಯವರೊಂದಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದಲ್ಲದೇ ವಿಡಿಯೋವೊಂದನ್ನು ಮಾಡಿದ್ದು, ಸ್ವತಃ ಇಟಲಿ ಪ್ರಧಾನಿ ಮೆಲೋನಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. “ಹಾಯ್ ಫ್ರಮ್ ದಿ ಮೆಲೋಡಿ ಟೀಮ್” ಎಂದು ಮೋದಿ ಜತೆಗೆ ಖುಷಿ ಖುಷಿಯಾಗಿ ಮೆಲೋನಿ ವಿಡಿಯೋ ಮಾಡಿದ್ದಾರೆ.
ಕಳೆದ ವರ್ಷ ಯುಎಇಯಲ್ಲಿ ಶೃಂಗಸಭೆ ವೇಳೆ ಮೋದಿ ಜೊತೆಗೆ ಮೆಲೋನಿ ಸೆಲ್ಫಿ ತೆಗೆದುಕೊಂಡಿದ್ದರು. ಇದಲ್ಲದೇ ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು, #melodi ಎಂಬ ಹ್ಯಾಷ್ಟ್ಯಾಗ್ ಬಳಸಿಕೊಂಡಿದ್ದರು. ಈ ‘ಮೆಲೋಡಿ’ ಇಂಟರ್ನೆಟ್ನಲ್ಲಿ ಸಖತ್ ಟ್ರೆಂಡ್ ಆಗಿತ್ತು. ಇದಲ್ಲದೇ ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮೋದಿ ಹಾಗೂ ಮೆಲೋನಿ ಅವರ ಸ್ನೇಹ ಸಾಕಷ್ಟು ಗಮನ ಸೆಳೆದಿತ್ತು.
ಇದನ್ನೂ ಓದಿ: ವಿಶ್ವ ನಾಯಕರ ನಡುವೆ ಮಿಂಚಿದ ಪ್ರಧಾನಿ ಮೋದಿ
ಇದೀಗ ಮತ್ತೆ ಇಂದು (ಜೂನ್ 15) ಪ್ರಧಾನಿ ಮೆಲೋನಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಹಾಯ್ ಫ್ರೆಂಡ್ಸ್ ಮೆಲೋಡಿ ಟೀಮ್ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮೋದಿ ಹಾಗೂ ಮೆಲೋನಿ ಅವರ ಸ್ನೇಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: