ಪ್ರಕೃತಿ ಹಲವು ವಿಸ್ಮಯಕಾರಿ ಸಂಗತಿಗಳ ಆಗರ. ಈ ಪ್ರಕೃತಿ ಸದಾ ಒಂದಲ್ಲ ಒಂದು ಮನುಷ್ಯರು ಊಹಿಸಲು ಸಾಧ್ಯವಾಗದ ವಿಸ್ಮಯಗಳನ್ನು ಆಗಾಗ್ಗೆ ಸೃಷ್ಟಿಸುತ್ತದೆ. ಇಂತಹ ಅಚ್ಚರಿಯ ಸಂಗತಿಗಳು ನಮ್ಮನ್ನು ಬಾಯಿ ಮೇಲೆ ಬೆರಳಿಡುವಂತೆ ಮಾಡತ್ತವೆ. ಇದೀಗ ಇಂತಹದ್ದೇ ವಿಸ್ಮಯಕಾರಿ ಘಟನೆಯೊಂದು ನಡೆದಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರ ಬಂಗಲೆಯಲ್ಲಿ ಬೇವಿನ ಮರದಲ್ಲಿ ಮಾವಿನ ಹಣ್ಣು ಬೆಳೆದಿದೆ. ಈ ಕುರಿತ ವಿಶೇಷ ವಿಡಿಯೋವೊಂದನ್ನು ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಅಚ್ಚರಿಯ ಸಂಗತಿಯನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರ ಬಂಗಲೆಯಲ್ಲಿನ ಗಾರ್ಡನ್‌ನಲ್ಲಿರುವ ಬೇವಿನ ಮರದಲ್ಲಿ ಮಾವಿನ ಹಣ್ಣು ಬೆಳೆದಿದೆ. ಈ ವಿಡಿಯೋವನ್ನು ಪ್ರಹ್ಲಾದ್ ಸಿಂಗ್ ಪಟೇಲ್ (@prahladspatel) ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
आज भोपाल निवास पर नीम के वृक्ष पर आम के फल देखकर नज़दीक जाकर देखा तो मन गदगद हो गया ।किसी हुनरमंद बागवान ने वर्षों पहले यह प्रयोग किया होगा जो अचंभे से कम नहीं है । pic.twitter.com/TmZ2I0rfjT
— Prahlad Singh Patel (मोदी का परिवार) (@prahladspatel) May 24, 2024
ಭೋಪಾಲ್‌ನಲ್ಲಿರುವ ಬಂಗಲೆಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶನಿವಾರದಂದು ಅದರ ಪರಿಶೀಲನೆಗೆಂದು ಸಚಿವ ಪ್ರಹ್ಲಾದ್ ಸಿಂಗ್ ಭೇಟಿ ನೀಡಿದ್ದರು, ಆ ಸಂದರ್ಭದಲ್ಲಿ ಬೇವಿನ ಮರದಲ್ಲಿ ಮಾವಿನ ಹಣ್ಣು ಬೆಳೆದಿರುವುದನ್ನು ಗಮನಿಸಿದ ಅವರು ಕೃಷಿ ವಿಜ್ಞಾನಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಪರಿಶೀಲನೆ ನಡೆಸಿದಾಗ ಬೇವಿನ ಮರವು ಸುಮಾರು 20 ರಿಂದ 25 ವರ್ಷಗಳಷ್ಟು ಹಳೆಯದು ಎಂದು ತಿಳಿದು ಬಂದಿದೆ. ಬೇವಿನ ಮರದಲ್ಲಿ ಮಾವಿನ ಕೊಂಬೆ ಪತ್ತೆಯಾಗಿದ್ದು, ಕೆಲವೊಮ್ಮೆ ಬೇರೆ ಮರದ ಮೇಲೆ ಬಿದ್ದ ಬೀಜಗಳು ಮೊಳಕೆಯೊಡೆದು ಅಲ್ಲೇ ಮರವಾಗಿ ಬೆಳೆಯುತ್ತದೆ ಎನ್ನುತ್ತಾರೆ ಸಸ್ಯಶಾಸ್ತ್ರಜ್ಞರು.
ವೈರಲ್ ವಿಡಿಯೋದಲ್ಲಿ ಬೇವಿನ ಮರವೊಂದರ ಕೊಂಬೆಗಳಲ್ಲಿ ಮಾವಿನ ಹಣ್ಣು ಬೆಳೆದಿರುವುದನ್ನು ಕಾಣಬಹುದು. ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಮಧ್ಯಪ್ರದೇಶದಲ್ಲಿರುವ ತಮ್ಮ ಬಂಗಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೇವಿನ ಮರದಲ್ಲಿ ಮಾವಿನ ಹಣ್ಣು ಬೆಳೆದಿರುವುದನ್ನು ಗಮನಿಸಿದ್ದಾರೆ. ಈ ಅಚ್ಚರಿಯ ಸಂಗತಿಯ ಕುರಿತ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: BMW ಕಾರು ಓಡಿಸಿದ ಅಪ್ರಾಪ್ತ ಮಗ, ಕಾರಿನ ಬಾನೆಟ್ ಮೇಲೆ ಮಲಗಿ ಅಪ್ಪನ ಸವಾರಿ
ಮೇ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 30 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವಿಸ್ಮಯ ಸಂಗತಿಯನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ