Viral Video : ಅಪಾರ್ಟ್ಮೆಂಟ್, ಹೋಟೆಲ್ನ ಲಿಫ್ಟ್ಗಳಲ್ಲಿ ಓಡಾಡುವ ಬೆಕ್ಕುಗಳಿಗೆ ಒಮ್ಮೆ ಮೆಟ್ಟಿಲು ಹತ್ತಲು ಹೇಳಿ ನೋಡೋಣ. ಬಹಳ ಒತ್ತಾಯಿಸಿದರೆ, ನಿಮ್ಮೆದುರು ನಾಲ್ಕು ಮೆಟ್ಟಿಲು ಏರಿದ ಹಾಗೆ ಮಾಡಬಹುದು ತಕ್ಷಣವೇ ಮತ್ತೆ ಲಿಫ್ಟ್ ಬಾಗಿಲಿನ ಮುಂದೆ ಕುಳಿತುಬಿಡುತ್ತವೆ. ಬೆಕ್ಕೆಂದರೆ ಹಾಗೇ! ಈಗಿಲ್ಲಿ ಬೆಕ್ಕಣ್ಣನೊಬ್ಬ ಮಾಲ್ಗೆ ಬಂದಿದಾನೆ. ಏನು ಶಾಪಿಂಗ್ ಮಾಡುವುದಿದೆಯೋ ಗೊತ್ತಿಲ್ಲ. ಎಸ್ಕಲೇಟರ್ ಏರಿ ಮೇಲಿನ ಮಹಡಿಗೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೀಗೆ ಒಂದಿಷ್ಟು ಬಾರಿ ಪುನರಾವರ್ತನೆಯಗುತ್ತದೆ. ನಂತರ? ಈ ವಿಡಿಯೋ ನೋಡಿ.
Good thing someone helped him out..???? pic.twitter.com/cnC82GVGY1
— ?o̴g̴ (@Yoda4ever) September 26, 2022
ಪಾಪ ಎಷ್ಟೊಂದು ಆತ್ಮವಿಶ್ವಾಸದಿಂದ ಎಸ್ಕಲೇಟರ್ ಏರಿದರೂ ಬೆಕ್ಕಣ್ಣನಿಗೆ ಮೇಲಿನ ಮಹಡಿ ತಲುಪಲಾಗುವುದೇ ಇಲ್ಲ. ಹೇಗೆ ಸಾಧ್ಯವಾದೀತು, ಇಳಿಯುತ್ತಿರುವ ಎಸ್ಕಲೇಟರ್ ಮೇಲೆ ಏರಿದರೆ? ನೋಡಲೇನೋ ಈ ವಿಡಿಯೋ ಮೋಜಿನಿಂದ ಮುದ್ದಿನಿಂದ ಕೂಡಿದೆ. ಪಾಪ ಬೆಕ್ಕಣ್ಣನ ಮನಸ್ಸಿನೊಳಗೆ… ಕೊನೆಗೆ ಇದರ ಪರದಾಟ ನೋಡದ ಯಾರೋ ಕರುಣಾಮಯಿಯೊಬ್ಬರು, ಮೇಲೇ ಹೋಗುತ್ತಿರುವ ಎಸ್ಕಲೇಟರ್ ಅನ್ನು ಹತ್ತಿಸುತ್ತಾರೆ.
Yoda4ever ಎಂಬ ಟ್ವಿಟರ್ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಒಂದು ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 10:20 am, Wed, 28 September 22