ಒಂದೆಡೆ ವಕ್ಫ್ ಜಮೀನಿನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಲೋಕಸಭೆಯಲ್ಲಿ ಮಂಡಿಸಿರುವುದು ಗೊತ್ತೇ ಇದೆ. ಪ್ರತಿಪಕ್ಷಗಳ ತೀವ್ರ ವಿರೋಧದಿಂದಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪರಿಗಣನೆಗೆ ಕಳುಹಿಸಲಾಗಿದೆ. ವಕ್ಫ್ ಬೋರ್ಡ್ ಕುರಿತ ಕೇಂದ್ರದ ನಿರ್ಧಾರದ ವಿರುದ್ಧ ಕೆಲವು ರಾಜ್ಯಗಳು ಪ್ರತಿಭಟನೆಯನ್ನೂ ನಡೆಸುತ್ತಿವೆ.
ಈ ಬೆಳವಣಿಗೆಗಳ ನಡುವೆ, ಹಿಂದೂ ದೇವಸ್ಥಾನದ ಸ್ಥಳಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಹಲವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. “ಸ್ಲೀಪ್ ಸ್ಟಿಲ್ ಹಿಂದೂಗಳು ತಮಿಳುನಾಡಿನ ತೆಂಕಶಿಯಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಇತ್ತೀಚೆಗೆ ಸರ್ಕಾರದ ಸಹಾಯದಿಂದ ಮಸೀದಿಯಾಗಿ ಪರಿವರ್ತಿಸಿದ್ದಾರೆ.” ಎಕ್ಸ್ನಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ.
*An ancient Hindu temple in Tenkasi, Tamil Nadu was recently converted into a mosque తమిళనాడు తెన్కాశిలో ఒక పురాతన హిందూ దేవాలయం ఇటీవల ప్రభుత్వ సహాయంతో మసీదుగా మార్చబడింది.* pic.twitter.com/etkvtK0d4S
— Sanatani Black Widow(हिंसक हिंदू ) (@BlackSanatani) November 6, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇಲ್ಲಿ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಿಲ್ಲ. ಈ ದರ್ಗಾ ಆಗಿದ್ದು, 17ನೇ ಶತಮಾನದಿಂದಲೂ ಇದೆ. ನಾವು ಇದಕ್ಕೆ ಸಂಬಂಧಿಸಿದ ಕೀವರ್ಡ್ ಹುಡುಕಾಟವನ್ನು ಮಾಡಿದ್ದೇವೆ. ಆಗ ಮೇ 3, 2024 ರಂದು ಇದೇ ಹೇಳಿಕೆಯೊಂದಿಗೆ ಎಕ್ಸ್ ಖಾತೆಯಲ್ಲಿ ಒಬ್ಬರು ಮಾಡಿದ ಪೋಸ್ಟ್ಗೆ ತಮಿಳುನಾಡು ಸರ್ಕಾರದ ಫ್ಯಾಕ್ಟ್ ಚೆಕ್ ತಂಡ ಈ ಸುದ್ದಿ ನಕಲಿ ಎಂದು ಉತ್ತರಿಸಿರುವುದು ಸಿಕ್ಕಿದೆ.
Circulating rumor!, “Ancient temple captured and converted into a mosque in Tenkasi” @tnpoliceoffl https://t.co/X4jSIiJ5nP pic.twitter.com/wHMvEbOHpO
— TN Fact Check (@tn_factcheck) May 3, 2024
ತಮಿಳುನಾಡು ಸರ್ಕಾರವು ನೀಡಿದ ವಿವರಣೆಯಲ್ಲಿ, “ವಿಡಿಯೋವು ವಾಸ್ತವವಾಗಿ ತಿರುನಲ್ವೇಲಿಯ ತೆಂಕಶಿಯಲ್ಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಪೊಟ್ಟಲ್ಪುದೂರಿನ ‘ಮೊಹೈದೀನ್ ಅಂಡವರ್’ ದರ್ಗಾವನ್ನು ತೋರಿಸುತ್ತದೆ. ದರ್ಗಾವು ಇಲ್ಲಿನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ, ಇದು ದ್ರಾವಿಡ ವಾಸ್ತುಶಿಲ್ಪ ಪರಂಪರೆಯಿಂದ ಪ್ರೇರಿತವಾಗಿದೆ. ದರ್ಗಾವನ್ನು 17 ನೇ ಶತಮಾನದಲ್ಲಿ (ಕ್ರಿ.ಶ. 1674) ‘ಮೊಹಿದೀನ್ ಅಬ್ದುಲ್ ಖಾದಿರ್ ಜಿಲಾನಿ’ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು’’ ಎಂಬ ಮಾಹಿತಿ ಇದೆ.
ತಮಿಳುನಾಡು ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಕೂಡ ನಾವು ಈ ದರ್ಗಾದ ಬಗ್ಗೆ ವಿವರಗಳನ್ನು ಪಡೆದುಕೊಂಡಿದ್ದೇವೆ. (https://www.tamilnadutourism. com/attractions/dargas/ pottalpudur-dargah.php) ಪೊಟ್ಟಲ್ಪುದೂರ್ ದರ್ಗಾವು ಹಜರತ್ ಸೈಯದ್ ಮುಹಮ್ಮದ್ ಶಾಗೆ ಸಮರ್ಪಿತವಾದ ತಮಿಳುನಾಡಿನ ಪ್ರಸಿದ್ಧ ಇಸ್ಲಾಮಿಕ್ ದೇವಾಲಯವಾಗಿದೆ. ಹಜರತ್ ಸೈಯದ್ ಮುಹಮ್ಮದ್ ಷಾ ಒಬ್ಬ ಶ್ರೇಷ್ಠ ಸೂಫಿ ಸನ್ಯಾಸಿ ಎಂದು ಜನರು ನಂಬುತ್ತಾರೆ. ದರ್ಗಾವನ್ನು ಯಾವಾಗ ನಿರ್ಮಿಸಲಾಯಿತು ಎಂಬುದನ್ನೂ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂಓದಿ: ವಿಮಾನಗಳು ಡಿಕ್ಕಿಯಾಗುವುದರಿಂದ ಪಾರಾದ ಈ ಭಯಾನಕ ವಿಡಿಯೋದ ನಿಜಾಂಶ ಏನು?
ಸೂಫಿ ಸಂತ ಹಜರತ್ ಸೈಯದ್ ಮೊಹಮ್ಮದ್ ಷಾ ಇರಾನ್‌ನಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ ಪೊಟ್ಟಲ್‌ಪುದೂರು ಗ್ರಾಮವನ್ನು ತಲುಪಿ ಜನರಿಗೆ ಇಸ್ಲಾಂ ಧರ್ಮವನ್ನು ಬೋಧಿಸಲು ನಿರ್ಧರಿಸಿದರು ಎಂದು ನಂಬಲಾಗಿದೆ. ಅವನ ಮರಣದ ನಂತರ, ಜನರು 1674 ರಲ್ಲಿ ಸಮಾಧಿಯನ್ನು ಸ್ಥಾಪಿಸಿದರು. ಮಸೀದಿಯಲ್ಲಿರುವ ಸಮಾಧಿಗೆ ಇಂದಿಗೂ ಪೂಜೆ ಸಲ್ಲಿಸಲಾಗುತ್ತಿದೆ. ದಕ್ಷಿಣದಲ್ಲಿ ಅನೇಕ ದರ್ಗಾಗಳನ್ನು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಅದರಂತೆ ಈ ದರ್ಗಾ ಕೂಡ ನಿರ್ಮಾಣವಾಗಿದೆ ಎಂದು ವಾಸ್ತು ತಜ್ಞರು ಹೇಳಿದ್ದಾರೆ.
ನಾವು Pottalpudur Dargah – Tamilnadu ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಹುಡುಕಿದ್ದೇವೆ. ಆಗ ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋ ಸಿಕ್ಕಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ತಮಿಳುನಾಡಿನ ತೆಂಕಶಿಯಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ದರ್ಗಾ ಆಗಿದ್ದು, 17ನೇ ಶತಮಾನದಿಂದಲೂ ಇದೇ ಜಾಗದಲ್ಲಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ