Viral: ತರಕರಡಿಯ ಮೇಲೆ ಅಟ್ಯಾಕ್‌ ಮಾಡಿದ ಮೂರು ಚಿರತೆ; ಕೊನೆಯಲ್ಲಿ ಗೆದ್ದವರ್ಯಾರು?

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದ್ದು, ಚಿರತೆಗಳ ಗುಂಪೊಂದು ತರಕರಡಿಯ (ಹನಿ ಬ್ಯಾಡ್ಜರ್)‌ ಮೇಲೆ ಏಕಾಏಕಿ ದಾಳಿ ಮಾಡಿವೆ. ಹೀಗೆ ತಮ್ಮ ಮೇಲೆ ದಾಳಿ ಮಾಡಲು ಬಂದ ಚಿರತೆಗಳನ್ನು ತರಕರಡಿ ಧೈರ್ಯದಿಂದ ಹೋರಾಡಿ ಹಿಮ್ಮೆಟ್ಟಿಸಿದ್ದು, ಪುಟಾಣಿ ಜೀವಿಯ ಶಕ್ತಿ ಮತ್ತು ಯುಕ್ತಿಯನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

Viral: ತರಕರಡಿಯ ಮೇಲೆ ಅಟ್ಯಾಕ್‌ ಮಾಡಿದ ಮೂರು ಚಿರತೆ; ಕೊನೆಯಲ್ಲಿ ಗೆದ್ದವರ್ಯಾರು?
ವೈರಲ್​​ ವಿಡಿಯೋ
Edited By:

Updated on: Apr 02, 2025 | 5:40 PM

ಸಾಮಾನ್ಯವಾಗಿ ಸಿಂಹ (loin), ಹುಲಿ (tiger), ಚಿರತೆಗಳನ್ನು (Leopard) ಅತ್ಯಂತ ಶಕ್ತಿಶಾಲಿ ಪ್ರಾಣಿಗಳು (animals) ಎಂದು ಕರೆಯುತ್ತಾರೆ. ಅಚ್ಚರಿಯ ಸಂಗತಿಯೇನೆಂದರೆ ತರಕರಡಿ ಅಂದ್ರೆ ಹನಿಬ್ಯಾಡ್ಜರ್ (Honey Badger) ಎಂಬ ಸಣ್ಣ ಗಾತ್ರದ ಪ್ರಾಣಿಯು ಹುಲಿ, ಸಿಂಹಗಳನ್ನೇ ಭಯ ಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇವುಗಳು ಎಷ್ಟು ಬಲಶಾಲಿ ಜೀವಿಯೆಂದರೆ ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ (Gunness book of world record) ʼವಿಶ್ವದ ಅತ್ಯಂತ ನಿರ್ಭೀತ ಪ್ರಾಣಿʼ (fearless animal) ಎಂಬ ಬಿರುದನ್ನು ಪಡೆದಿದೆ. ಇದೀಗ ಈ ಪುಟ್ಟ ಪ್ರಾಣಿಯ ಧೈರ್ಯ, ಆಕ್ರಮಣಶೀಲತೆ ಮತ್ತು ಬುದ್ಧಿವಂತಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್‌ ಆಗಿದ್ದು, ತರಕರಡಿಯೊಂದು ತನ್ನ ಮೇಲೆ ಅಟ್ಯಾಕ್‌ ಮಾಡಲು ಬಂದ ಚಿರತೆಗಳನ್ನೇ ಹಿಮ್ಮೆಟ್ಟಿಸಿದೆ. ಈ ಪ್ರಾಣಿಯ ಧೈರ್ಯವನ್ನು ಕಂಡು ನೋಡುಗರು ಬೆರಗಾಗಿದ್ದಾರೆ.

ಜಗತ್ತಿನ ಅತ್ಯಂತ ನಿರ್ಭೀತ ಪ್ರಾಣಿಯೆಂದೇ ಹೆಸರು ಗಳಿಸಿರುವ ತರಕರಡಿ (ಹನಿ ಬ್ಯಾಡ್ಜರ್)‌ ತನ್ನ ಮೇಲೆ ಅಟ್ಯಾಕ್‌ ಮಾಡಲು ಬಂದ ಚಿರತೆಗಳಿಗೆ ಬೆವರಿಳಿಸಿದೆ. ಮೂರು ದೈತ್ಯ ಚಿರತೆಗಳು ತನ್ನ ಮೇಲೆ ದಾಳಿ ಮಾಡಲು ಬಂದರೂ ಧೈರ್ಯಗೆಡದ ತರಕರಡಿ ಯುಕ್ತಿಯಿಂದ ಹೋರಾಡಿ ಚಿರತೆಗಳನ್ನು ಹಿಮ್ಮೆಟ್ಟಿಸಿದೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

AMAZINGNATURE ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತರಕರಡಿಯ ಮೇಲೆ ಮೂರು ಚಿರತೆಗಳು ದಾಳಿ ಮಾಡುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ದಾಳಿ ನಡೆಸಲು ಬಂದ ಚಿರತೆಗಳ ಜೊತೆ ಒಬ್ಬಂಟಿಯಾಗಿ ಹೋರಾಡಿ ತರಕರಡಿ ಜಯಗಳಿಸಿದೆ.

ಇದನ್ನೂ ಓದಿ: ನಕಲಿ ಗಾಯ ತೋರಿಸಿ ರಜೆ ತೆಗೆದುಕೊಳ್ಳಿ; ಸಿಕ್ ಲೀವ್‌ ಪಡೆಯಲು ಹೊಸ ಟ್ರಿಕ್ಸ್‌ ಹೇಳಿಕೊಟ್ಟ ಮೆಕಪ್‌ ಆರ್ಟಿಸ್ಟ್

ಏಪ್ರಿಲ್‌ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಅಟ್ಯಾಕ್‌ ಅಲ್ಲ ಮೋಜಿನಿಂದ ಆಟವಾಡುವಂತೆ ಕಾಣುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಏನು ಧೈರ್ಯಶಾಲಿ ಪ್ರಾಣಿ ಅಲ್ವಾʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹನಿ ಬ್ಯಾಡ್ಜರ್‌ ಉತ್ಸಾಹವನ್ನು ನೋಡಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ರೋಮಾಂಚನಕಾರಿ ದೃಶ್ಯವನ್ನು ಕಂಡು ಬೆರಗಾಗಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ