ಬಹಳ ಒಳ್ಳೇವ್ಳ್ ನಮ್ಮಮ್ಮ, ಕೊಡಿಸ್ತಾಳೆ ಗೋಲ್ಗಪ್ಪ, ಯಾಕೆ ಬೇಡ ಅಂತೀದಿರಿ ನೀವೆಲ್ಲ

| Updated By: ಶ್ರೀದೇವಿ ಕಳಸದ

Updated on: Nov 17, 2022 | 12:22 PM

Golgappa : ಪ್ರಾಣಿಗಳು ಮೊದಲೇ ಸೂಕ್ಷ್ಮ, ರೀಲ್ಸ್ ಮಾಡಲೆಂದೋ ನಿಮ್ಮ ಖುಷಿಗೆಂದೂ ಅವುಗಳನ್ನು ಹೀಗೆಲ್ಲ ಹಿಂಸಿಸಬೇಡಿ ಎಂದು ಬುದ್ಧಿ ಹೇಳುತ್ತಿದ್ದಾರೆ ನೆಟ್ಟಿಗರು. 8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ.

ಬಹಳ ಒಳ್ಳೇವ್ಳ್ ನಮ್ಮಮ್ಮ, ಕೊಡಿಸ್ತಾಳೆ ಗೋಲ್ಗಪ್ಪ, ಯಾಕೆ ಬೇಡ ಅಂತೀದಿರಿ ನೀವೆಲ್ಲ
Hooman treats pet dog to golgappa in viral video But not everyone is happy
Follow us on

Viral Video : ಮನುಷ್ಯ ತಾನಲ್ಲದೇ ಪ್ರಾಣಿಗಳನ್ನೆಲ್ಲ ಹೀಗೆ ಭಯಂಕರವಾಗಿ ‘ರುಚಿ’ಗೆ ಕೆಡವುತ್ತಿದ್ದಾನೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ನಾಯಿಯ ಪೋಷಕಿ ಗೋಲ್​ಗಪ್ಪಾ ತಿನ್ನಿಸುತ್ತಿದ್ದಾಳೆ. ಆಕೆಯೂ ಖುಷಿ, ಅಂಗಡಿಯವನೂ ಖುಷಿ, ಇನ್ನು ನಾಯಿಯಂತೂ ಭಲೇ ಖುಷಿ! ಆದರೆ ನೆಟ್ಟಿಗರು? ಸಿಕ್ಕಾಪಟ್ಟೆ ಬಯ್ಯುತ್ತಿದ್ಧಾರೆ. ಇಂಥ ತಿಂಡಿತಿನಿಸುವಳೆಲ್ಲ ನಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಿದ್ದಾರೆ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈಗಾಗಲೇ ಈ ವಿಡಿಯೋ 8 ಲಕ್ಷಕ್ಕೂ ಹೆಚ್ಚು ಜನರನ್ನು ಸೆಳೆಇದೆ. ಧೀರಜ್​ ಛಬ್ರಾ ಎಂಬುವವರು ಇದನ್ನು ಹಂಚಿಕೊಂಡಿದ್ದಾರೆ. ಸಿಹಿ, ಹುಳಿ, ಉಪ್ಪು, ಖಾರವಿರುವ ಯಾವ ಖಾದ್ಯವೂ ಯಾರನ್ನೂ ಮರಳು ಮಾಡದೆ ಬಿಡದು. ಹಾಗೆಯೇ ಈ ನಾಯಿಯನ್ನೂ, ಅದಕ್ಕೇ ಅದು ತನ್ನ ರುಚಿಗೆ ಇದನ್ನು ಕೆಡವಿಕೊಂಡುಬಿಟ್ಟಿದೆ.

ನೆಟ್ಟಿಗರೋ ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ. ಮಕ್ಕಳಂತೆ ನಾಯಿಗಳೆಂದರೆ. ಇಷ್ಟು ಪುಟ್ಟನಾಯಿಗೆ ಇಂಥದೆಲ್ಲ ತಿನ್ನಿಸಬೇಡಿ ಎನ್ನುತ್ತಿದ್ದಾರೆ. ನಿಮ್ಮ ಖುಷಿಗೆ ಈ ಪ್ರಾಣಿಗಳಿಗೆ ಹಿಂಸೆ ಕೊಡಬೇಡಿ ಎಂದಿದ್ದಾರೆ ಮತ್ತೊಬ್ಬರು. ರೀಲ್ಸ್ ಮಾಡಲು ನೀವು ಏನನ್ನೂ ಮಾಡಬಲ್ಲಿರಿ ಎಂದಿದ್ದಾರೆ ಮಗದೊಬ್ಬರು. ಈ ನಾಯಿ ಮೊದಲೇ ಸೂಕ್ಷ್ಮ ಸ್ವಲ್ಪ ಹುಷಾರು ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:21 pm, Thu, 17 November 22