ಈಜು ಕಲಿಯುತ್ತಿರುವ ಮರಿಹಿಪ್ಪೋ ವಿಡಿಯೋ ವೈರಲ್
Hippopotamus : ಮರಿಗಳು ಮಕ್ಕಳು ಎಲ್ಲವೂ ಒಂದೇ. ಆ ಮುಗ್ಧತೆ, ಬೆರಗು, ಕುತೂಹಲ, ಸಣ್ಣ ಗಾಬರಿ, ದೊಡ್ಡ ಖುಷಿ, ಆಹಾ ಅಚ್ಚರಿ... ನೋಡಲೆಷ್ಟು ಚೆಂದ. ಇಲ್ಲಿ ನೋಡಿ ಈ ಮರಿಹಿಪ್ಪೋ ಈಜಲು ಕಲಿಯುತ್ತಿದೆ.
Viral Video : ನಿನ್ನೆಯಷ್ಟೇ ಘೇಂಡಾಮೃಗವೊಂದು ಮಲಗಿದ ನಾಯಿಯನ್ನು ಎಬ್ಬಿಸಿದ ವಿಡಿಯೋ ನೋಡಿದಿರಿ. ಕೆಲದಿನಗಳ ಹಿಂದೆ ಮೇಕೆಯೊಂದು ಶಿವನಿಗೆ ಮೊಣಕಾಲೂರಿ ನಮಸ್ಕರಿಸುವುದನ್ನು ನೋಡಿದಿರಿ. ನಾಯಿಯೊಂದು ದೇವಸ್ಥಾನದ ಘಂಟೆ ಬಾರಿಸುತ್ತಿತ್ತು. ಇದೀಗ ಹಿಪ್ಪೊಪೊಟೋಮಸ್ ಮರಿಯೊಂದು ಈಜು ಕಲಿಯುತ್ತಿರುವ ವಿಡಿಯೋ ನೋಡಿ.
Baby hippos learning to swim at the @CincinnatiZoopic.twitter.com/kTzs0YT3At
ಇದನ್ನೂ ಓದಿ— Fascinating (@fasc1nate) November 16, 2022
ಟ್ವಿಟರ್ನಲ್ಲಿ ಹಂಚಿಕೊಂಡ ಈ ವಿಡಿಯೋ ಚಿತ್ರೀಕರಣಗೊಂಡಿದ್ದು ಸಿನ್ಸಿನಾಟಿ ಮೃಗಾಲಯದಲ್ಲಿ. ಆಟಿಕೆ ಬಾತುಕೋಳಿಯೊಂದಿಗೆ ಆಟವಾಡುತ್ತಾ ಈಜಲು ಕಲಿಯುತ್ತಿದೆ ಹಿಪ್ಪೋ. ಈ ತನಕ 1.9 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಎಂಥಾ ಮುದ್ದು ಹುಡುಗ ಇವ ಎಂದಿದ್ದರೆ ಕೆಲವರು. ರಬ್ಬರ್ ಆಟಿಕೆ ಒಳ್ಳೆಯದು ಅಲ್ವೋ ಎಂದಿದ್ದಾರೆ ಇನ್ನೊಬ್ಬರು. ಕ್ರಿಸ್ಮಸ್ಗೆ ನಿನಗೇನು ಬೇಕು ಬೇಬಿ ಎಂದಿದ್ದಾರೆ ಮಗದೊಬ್ಬರು.
ಅದರ ಕಣ್ಣುಗಳಲ್ಲಿನ ಬೆರಗು, ಕುತೂಹಲ ಎಂಥ ಚೆಂದ ಇದೆಯಲ್ಲವಾ?
ಈ ವಿಡಿಯೋ ನಿಮಗೀಗ ಖುಷಿ ಆಗಿರಬೇಕಲ್ಲ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ