Viral Video: ಆಪ್ತ ಸ್ನೇಹಿತರಾಗಿ ವಾಕಿಂಗ್ ಹೊರಟ ನಾಯಿ ಮರಿ ಮತ್ತು ಕುದುರೆ; ಹೃದಯಸ್ಪರ್ಶಿ ವಿಡಿಯೋ ವೈರಲ್

ಚಿಂತಿಸಬೇಡ ಸ್ನೇಹಿತ, ನಿನಗೆ ನಾನು ಮಾರ್ಗ ತೋರಿಸುತ್ತೇನೆ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ. ಕುದುರೆ ಮತ್ತು ನಾಯಿ ಮರಿಯ ಗೆಳೆತನದ ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

Viral Video: ಆಪ್ತ ಸ್ನೇಹಿತರಾಗಿ ವಾಕಿಂಗ್ ಹೊರಟ ನಾಯಿ ಮರಿ ಮತ್ತು ಕುದುರೆ; ಹೃದಯಸ್ಪರ್ಶಿ ವಿಡಿಯೋ ವೈರಲ್
ಆಪ್ತ ಸ್ನೇಹಿತರಾಗಿ ವಾಕಿಂಗ್ ಹೊರಟ ನಾಯಿ ಮರಿ ಮತ್ತು ಕುದುರೆ
Edited By:

Updated on: Sep 13, 2021 | 9:03 AM

ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಅದು ಬೆಕ್ಕು, ನಾಯಿ ಮರಿ, ಪಾಂಡಾ, ಕುದುರೆ ಹೀಗೆ ಯಾವುದೇ ಪ್ರಾಣಿಯದ್ದಿರಬಹುದು. ಅವರ ತುಂಟಾಟ, ಆಟದ ವಿಡಿಯೋ ಹೆಚ್ಚು ಮನ ಗೆಲ್ಲುವುದಂತೂ ಸತ್ಯ. ಹಾಗೆಯೇ ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಕುದುರೆ ಮತ್ತು ನಾಯಿ ಮರಿಯ ಗೆಳೆತನ ಎಲ್ಲರ ಮನ ಗೆದ್ದಿದೆ. ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಫುಲ್ ವೈರಲ್ ಆಗಿದೆ.

ವೈರಲ್ ಹಾಗ್ ಎಂಬ ಟ್ವಿಟರ್ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಚಿಂತಿಸಬೇಡ ಸ್ನೇಹಿತ, ನಿನಗೆ ನಾನು ಮಾರ್ಗ ತೋರಿಸುತ್ತೇನೆ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ. ಕುದುರೆ ಮತ್ತು ನಾಯಿ ಮರಿಯ ಗೆಳೆತನದ ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

28 ಸೆಕೆಂಡುಗಳ ಶಾರ್ಟ್ ವಿಡಿಯೋ ಕ್ಲಿಪ್ ಗಮನಿಸುವಂತೆ ನಾಯಿ ಮರಿ ಮತ್ತು ಕುದುರೆ ವಾಕಿಂಗ್ ಹೊರಟಿದ್ದಾರೆ. ಇಬ್ಬರು ಸ್ನೇಹಿತರು ಒಟ್ಟಿಗೆ ನಡೆದಾಡುತ್ತಾ ಸಂತೋಷದಿಂದ ಸಮಯ ಕಳೆಯುತ್ತಿದ್ದಾರೆ. ಆಪ್ತ ಗೆಳೆತನದ ಈ ದೃಶ್ಯ ಮೆಚ್ಚುವಂತಿದೆ.

ಇದನ್ನೂ ಓದಿ:

Viral Video: ಮನೆ ಬಳಿ ಕಾಣಿಸಿಕೊಂಡ ನಾಗರಹಾವಿಗೆ ಮಾತಿನಲ್ಲೇ ಸಮಾಧಾನ ಹೇಳಿ ವಾಪಾಸು ಕಳುಹಿಸಿದ ಮಹಿಳೆ

Viral Video: ಈ ವೃದ್ಧ ಮಹಿಳೆಗೆ ದೈತ್ಯ ಆನೆಯೇ ಮೊಮ್ಮಗ; ಕೈ ತುತ್ತು ತಿನ್ನಿಸುವ ಹೃದಯಸ್ಪರ್ಶಿ ವಿಡಿಯೋ ಸಿಕ್ಕಾಪಟ್ಟೆ ವೈರಲ್

(Horse and Dog close friendship heartwarming video goes viral)