ಅಂಗನವಾಡಿ ಮಕ್ಕಳು ಮೊದಲ ಸಲ ಗ್ರಂಥಾಲಯಕ್ಕೆ ಹೋದಾಗ

| Updated By: ಶ್ರೀದೇವಿ ಕಳಸದ

Updated on: Nov 26, 2022 | 4:33 PM

Library : ಬಾಗಲಕೋಟೆ ಜಿಲ್ಲೆಯ ಗಿರಿಸಾಗರದ ಅಂಗನವಾಡಿ ಮಕ್ಕಳು ಮೊದಲ ಸಲ ಗ್ರಂಥಾಲಯಕ್ಕೆ ಹೋದಾಗಿನ ದೃಶ್ಯ ಇಲ್ಲಿದೆ. ಪುಟ್ಟಪುಟ್ಟ ಮಕ್ಕಳು ಸಮವಸ್ತ್ರ ಧರಿಸಿ ಮೆಟ್ಟಿಲುಗಳನ್ನೇರಿ, ಪುಸ್ತಕಗಳೊಳಗೆ ಕಳೆದುಹೋಗುವ ಈ ಸಮಯ ಅನನ್ಯ.

ಅಂಗನವಾಡಿ ಮಕ್ಕಳು ಮೊದಲ ಸಲ ಗ್ರಂಥಾಲಯಕ್ಕೆ ಹೋದಾಗ
ಮೊದಲ ಸಲ ಗ್ರಂಥಾಲಯಕ್ಕೆ ಭೇಟಿಕೊಟ್ಟ ಅಂಗನವಾಡಿ ಮಕ್ಕಳು
Follow us on

Viral Video : ಮಕ್ಕಳಿಗೆ ಎಳವೆಯಿಂದಲೇ ಪುಸ್ತಕಗಳ ಜಗತ್ತು ಪರಿಚಯವಾದರೆ ಬಹುಪಾಲು ಸುಖಿಯೇ. ಬದುಕಿನಲ್ಲಿ ಏನೇ ಸಮಸ್ಯೆ ಬಂದರೂ ಎದುರಿಸುವ ತಾಳ್ಮೆ, ಸಂಯಮ, ಧೈರ್ಯ, ತಿಳಿವಳಿಕೆ ತಾನಾಗಿಯೇ ಒದಗುತ್ತದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಗಿರಿಸಾಗರದ ಅಂಗನವಾಡಿಯ ಮಕ್ಕಳು ಇವು. ಮೊದಲ ಸಲ ಇವರ ಶಿಕ್ಷಕರು ಇವರನ್ನು ಸ್ಥಳೀಯ ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಟ್ವಿಟರ್​ ಖಾತೆದಾರರಾದ ಉಮಾ ಮಹದೇವನ್​ ದಾಸಗುಪ್ತಾ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ಮೂಲ ವಿಡಿಯೋ ಹಂಚಿಕೊಂಡವರು ಬಾಗಲಕೋಟೆ ಜಿಲ್ಲೆಯ ಗಿರಿಸಾಗರದ ಪಿಡಿಒ ವಿಮಲಾ ಎಂಬುವವರು.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪುಟ್ಟಪುಟ್ಟ ಕೈಗಳಿಂದ ಪುಸ್ತಕಗಳನ್ನು ತೆರೆಯುವ ಗಡಿಬಿಡಿಯಲ್ಲಿ ಹರಿದು ಹೋದರೆ? ಎಂದು ಶಿಕ್ಷಕರು ಮಕ್ಕಳಿಗೆ ತಿಳಿಹೇಳುತ್ತಿದ್ಧಾರೆ. ಮಕ್ಕಳೋ ತಮ್ಮದೇ ಲೋಕದಲ್ಲಿ ಬೆರಗಿನಿಂದ ಪುಸ್ತಕಗಳೊಳಗೆ ಮುಳುಗಿದ್ದಾರೆ. ಈ ತನಕ ಸುಮಾರು ಐದು ಸಾವಿರ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಮಧುರೈನಲ್ಲಿ ಕುಳಿತು ನಾನು ಈ ವಿಡಿಯೋ ನೋಡುತ್ತ, ಬಾಲ್ಯದಲ್ಲಿ ನಾನು ಮೊದಲ ಸಲ ಗ್ರಂಥಾಲಯಕ್ಕೆ ಭೇಟಿ ನೀಡಿದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಹಣವಿಲ್ಲದೆಯೂ ಚಿತ್ರಗಳನ್ನು ಹೊಂದಿದ ಚೆಂದದ ಪುಸ್ತಕಗಳನ್ನು ಓದಬಹುದು ಎಂದು ತಿಳಿದಿದ್ದು ಹೀಗೆ ನಾನು ಚಿಕ್ಕವನಿದ್ದಾಗ ಗ್ರಂಥಾಲಯಕ್ಕೆ ಹೋದಾಗಲೇ ಎಂದಿದ್ದಾರೆ ಇನ್ನೂ ಒಬ್ಬರು. ಎಂಥ ಹೃದಯಸ್ಪರ್ಶಿಯಾಗಿದೆ ಈ ವಿಡಿಯೋ, ಮಕ್ಕಳು ಗ್ರಂಥಾಲಯದ ಸಹವಾಸ ಬೆಳೆಸಿಕೊಳ್ಳಲು ಪ್ರೇರೇಪಿಸುವಂಥ ಇಂಥ ವಿಡಿಯೋಗಳು ಹೆಚ್ಚಲಿ ಎಂದಿದ್ದಾರೆ ಮಗದೊಬ್ಬರು.

ನಿಮ್ಮೂರಿನ ಮಕ್ಕಳಿಗೂ ಹೀಗೆ ಗ್ರಂಥಾಲಯದ ಸಖ್ಯ ಬೆಳೆಸುತ್ತೀರಲ್ಲ? ದಯವಿಟ್ಟು…

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 4:26 pm, Sat, 26 November 22