AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಗುಸಿ ನೋಡಿತು ಕರಿನಾಗರವ, ಕಾಳಗ ನಡೆಯಿತು ರೋಷದಲಿ

Fight Between Cobra and Mongoose : ‘ರಾಮ ಲಕ್ಷ್ಮಣ’ ಸಿನೆಮಾದಲ್ಲಿ ಗಂಗೆ ತೊಟ್ಟಿಲಲ್ಲಿ ತನ್ನ ಮಗುವನ್ನು ಮಲಗಿಸಿ ನೀರು ತರಲು ಹೊಳೆಗೆ ಹೋದಾಗ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆ. ಆ ದೃಶ್ಯವನ್ನೇ ಈ ವಿಡಿಯೋ ನೆನಪಿಸುವಂತಿದೆ.

ಮುಂಗುಸಿ ನೋಡಿತು ಕರಿನಾಗರವ, ಕಾಳಗ ನಡೆಯಿತು ರೋಷದಲಿ
ಯಾರು ಗೆಲ್ಲುತ್ತಾರೆ?
TV9 Web
| Updated By: ಶ್ರೀದೇವಿ ಕಳಸದ|

Updated on:Nov 26, 2022 | 3:06 PM

Share

Viral Video : ನಾಗರಹಾವು ಪ್ರಾಣಿ, ಮನುಷ್ಯರ ಮೇಲೆ ತನ್ನ ಅಟ್ಟಹಾಸ ತೋರಿಸಿದರೂ ಅದು ಹೆದರುವುದು ಮುಂಗುಸಿಗೆ ಮಾತ್ರ. ಶತಮಾನಗಳ ವೈರತ್ವ ಎಂಬಂತೆ ಮುಂಗುಸಿ ಕೂಡ ಎಲ್ಲೇ ನಾಗರಹಾವನ್ನು ಕಂಡರೂ ಎಗರಿ ಕಾದಾಟಕ್ಕಿಳಿದುಬಿಡುತ್ತದೆ. ಕರಿನಾಗರ ಮತ್ತು ಮುಂಗುಸಿಯ ಕಾಳಗದ ಈ ಬಿರುಸನ್ನು ನೇರವಾಗಿ ನೋಡಿದಲ್ಲಿ ಎದೆನಡುಗುವುದೇ, ಅಷ್ಟು ಆವೇಶ! ಈಗ ಈ ವಿಡಿಯೋದಲ್ಲಿ ಮುಂಗುಸಿ ಮತ್ತು ಕರಿನಾಗರ ಕಾದಾಟಕ್ಕಿಳಿದಿವೆ. ಮೈಮುರಿಗೆ ಹೊಡೆದು ತಪ್ಪಿಸಿಕೊಳ್ಳಲು ಹಾವು ನೋಡುತ್ತಿದೆ. ನಿನ್ನ ಬಿಡೆನು ಎಂದು ರೋಷಾವೇಷದಲ್ಲಿ ಹಾರಿಹಾರಿ ಮುಂಗುಸಿ ಹಾವನ್ನು ಸೆದೆಬಡೆಯಲು ನೋಡುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತನ್ನ ಪುಟ್ಟದೇಹದೊಳಗೆ ಅಷ್ಟೊಂದು ದೈತ್ಯಶಕ್ತಿಯನ್ನು ಅದು ಹೇಗೆ ತಂದುಕೊಳ್ಳುತ್ತದೆಯೋ ಎಂಬ ಆಶ್ಚರ್ಯ ನೋಡಿದ ಯಾರಿಗೂ ಆಗುವುದು ಸಹಜ. ಮುಂಗುಸಿಗೆ ಹಾವು ಕಚ್ಚಿದರೂ ಅದು ಬದುಕುಳಿಯಬಲ್ಲುದು. ಇದೇ ಪ್ರಕೃತಿಯ ವೈಚಿತ್ರ್ಯ. ಸಾಮಾನ್ಯವಾಗಿ ಶೇ. 80 ರಷ್ಟು ಮುಂಗುಸಿ ಮತ್ತು ನಾಗರಹಾವಿನ ಕಾಳಗದಲ್ಲಿ ಮುಂಗುಸಿಯೇ ಗೆಲ್ಲುತ್ತವೆ. ಭಾರತದ ಮುಂಗುಸಿಗಳು ಸಾಮಾನ್ಯವಾಗಿ ಬೂದುಬಣ್ಣದಿಂದ ಕೂಡಿರುತ್ತವೆ. ಯೂಟ್ಯೂಬ್​ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ 2.7 ಲಕ್ಷ ಜನರನ್ನು ಸೆಳೆದಿದೆ.

ಮುಂಗುಸಿಗಳು ಸಾಮಾನ್ಯವಾಗಿ ನೆಲದಲ್ಲಿ ಬಿಲತೋಡಿ ವಾಸಿಸುತ್ತವೆ. ಅವುಗಳು ತೋಡುವ ಬಿಲದ ಪ್ರಮಾಣ ಎಷ್ಟಿರುತ್ತದೆ ಎಂದರೆ, ಕೆಲವೊಮ್ಮೆ ಚಕ್ಕಡಿಗಟ್ಟಲೆ ಮಣ್ಣನ್ನು ಎಳೆದು ಹಾಕಬಲ್ಲವು. ನೋಡಲು ಸಣ್ಣ ದೇಹವಾದರೂ ಅಗಾಧ ಶಕ್ತಿ ಅವುಗಳದ್ದು.

ಮತ್ತಷ್ಟೂ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:04 pm, Sat, 26 November 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!