ಭಲೇ ಬಾಹುಬಲಿ: ತಲೆಯ ಮೇಲೆ ಬೈಕ್ ಹೊತ್ತು ಸಾಗಿಸುತ್ತಿರುವ ಈ ವ್ಯಕ್ತಿಯ ವಿಡಿಯೋ ವೈರಲ್
Superman : ಈ ಮನುಷ್ಯನನ್ನು ನೆಟ್ಟಿಗರು ಇವನೇ ನಿಜವಾದ ಬಾಹುಬಲಿ, ಸೂಪರ್ಮ್ಯಾನ್ ಎಂದು ಹೇಳುತ್ತಿದ್ಧಾರೆ. ಎಲ್ಲರೂ ಸ್ಟಂಟ್ಗಾಗಿ, ರೀಲ್ಗಾಗಿ ಸಾಹಸ ಮಾಡುತ್ತಾರೆ. ಆದರೆ ಈತ ಮಾಡುವುದು ಗೇಣುಹೊಟ್ಟೆಗಾಗಿ, ಮನೆಯವರಿಗಾಗಿ.
Viral Video : ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಹೊಂದಲು ಏನೆಲ್ಲ ಸ್ಟಂಟ್ಗಳನ್ನು ಮಾಡುತ್ತಿದ್ದಾರೆ ಜನರು. ಸ್ಟಂಟ್ ಮಾಡಲು ಹೋಗಿ ಅವಘಡಕ್ಕೂ ಈಡಾಗುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಹೊಟ್ಟೆಪಾಡಿಗಾಗಿ ಹೀಗೆ ಬದುಕುವವರು ಕಣ್ಣಿಗೆ ಬೀಳುವುದು ಅಪರೂಪ. ಗುಲ್ಜಾರ್ ಸಹಾಬ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದೆ. 88,800 ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೆಟ್ಟಿಗರಂತೂ ಇವನೇ ನಿಜವಾದ ಬಾಹುಬಲಿ ಎಂದು ಕೊಂಡಾಡುತ್ತಿದ್ದಾರೆ.
They are really super human ??❤️ pic.twitter.com/kNruhcRzE1
ಇದನ್ನೂ ಓದಿ— ज़िन्दगी गुलज़ार है ! (@Gulzar_sahab) November 25, 2022
ಬೈಕ್ ಓಡಿಸುವುದನ್ನ ಕಲಿಯುವುದು ಒಂದು ಸಾಹಸವಾದರೆ ಹೀಗೆ ಇಷ್ಟು ಭಾರದ ಬೈಕ್ ಅನ್ನು ತಲೆಯಮೇಲೆ ಹೊತ್ತು ಏಣಿ ಏರುವ ಸಾಹಸ ಇದೆಯಲ್ಲ ಇದು ಸಾಮಾನ್ಯರಿಗೆ ಒದಗುವಂಥದ್ದಲ್ಲ. ಏಣಿಗೆ ಕೈಮುಗಿದು ಒಂದೊಂದು ಮೆಟ್ಟಿಲುಗಳನ್ನು ಅವ ಏರುವ ಕ್ರಮ ಅಪರೂಪದಲ್ಲಿ ಅಪರೂಪ.
ನೆಟ್ಟಿಗರನ್ನಂತೂ ಈ ವಿಡಿಯೋ ಕಣ್ಣುಕಣ್ಣು ಬಿಟ್ಟು ನೋಡುವಂತೆ ಮಾಡುತ್ತಿದೆ. ಅವನ ಕುತ್ತಿಗೆಯಲ್ಲಿರುವ ತ್ರಾಣ ನನಗೆ ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ನಿಜವಾದ ಬಾಹುಬಲಿಯಪ್ಪಾ ನೀನು ಎನ್ನುತ್ತಿದ್ದಾರೆ ಹಲವರು. ಇವನು ಯಾವ ಸಾಹಸ ಪ್ರದರ್ಶನಕ್ಕಾಗಿ ಮಾಡುತ್ತಿಲ್ಲ. ತನ್ನ ಕುಟುಂಬದ ಹೊಟ್ಟೆಬಟ್ಟೆನೆತ್ತಿ ಕಾಯಲು ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾರೆ ಮತ್ತೂ ಕೆಲವರು. ಆದರೆ ಈ ವಿಡಿಯೋ ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿಲ್ಲ.
ಇವನ ಆತ್ಮವಿಶ್ವಾಸವನ್ನು ಯಾರೂ ಮೆಚ್ಚತಕ್ಕಂಥದ್ದು. ಅಪಾಯಕ್ಕೆ ತೆರೆದುಕೊಂಡು ನಿತ್ಯವೂ ಹೀಗೆ ಹೊಟ್ಟೆ ಹೊರೆಯುವವರ ಬಗ್ಗೆ ಸಹಾನುಭೂತಿ ಇರಲಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:03 pm, Sat, 26 November 22