Viral Photo: ಈ ಫೋಟೋದಲ್ಲಿ ಎಷ್ಟು ಸಿಂಹಗಳಿವೆ ಎಂದು ಗುರುತಿಸಬಲ್ಲಿರಾ? ನಿಮ್ಮ ಕಣ್ಣಿಗೆ ಸವಾಲೊಡ್ಡುವ ಪ್ರಶ್ನೆಯಿದು

| Updated By: shruti hegde

Updated on: Aug 29, 2021 | 1:06 PM

ಆಗಾಗ ನೆಟ್ಟಿಗರ ಕಣ್ಣು ಚುರುಕಾಗಿಸುವ ಫೋಟೋಗಳೂ ಸಹ ವೈರಲ್ ಆಗುತ್ತವೆ. ಅಂತಹುದೇ ಒಂದು ಫೋಟೊ ಇದೀಗ ಹರಿದಾಡುತ್ತಿದ್ದು, ಚಿತ್ರದಲ್ಲಿ ಎಮ್ಮೆಗಳು ನಿಂತಿರುವುದನ್ನು ನೋಡಬಹುದು. ಆದರೆ ಅಲ್ಲಿ ಸಿಂಹಗಳೂ ಸಹ ಇವೆ. ಆದರೆ ಎಲ್ಲಿವೆ? ಎಷ್ಟಿವೆ? ಎಂಬುದು ಕುತೂಹಲ ಕೆರಳಿಸಿದೆ.

Viral Photo: ಈ ಫೋಟೋದಲ್ಲಿ ಎಷ್ಟು ಸಿಂಹಗಳಿವೆ ಎಂದು ಗುರುತಿಸಬಲ್ಲಿರಾ? ನಿಮ್ಮ ಕಣ್ಣಿಗೆ ಸವಾಲೊಡ್ಡುವ ಪ್ರಶ್ನೆಯಿದು
ಈ ಫೋಟೋದಲ್ಲಿ ಎಷ್ಟು ಸಿಂಹಗಳಿವೆ ಎಂದು ಗುರುತಿಸಬಲ್ಲಿರಾ? ನಿಮ್ಮ ಕಣ್ಣಿಗೆ ಸವಾಲೊಡ್ಡುವ ಪ್ರಶ್ನೆಯಿದು
Follow us on

ಸಾಮಾನ್ಯವಾಗಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಅವುಗಳಲ್ಲಿ ಕೆಲವೊಂದಿಷ್ಟು ಮನಸ್ಸಿಗೆ ಇಷ್ವಾಗುತ್ತವೆ. ಇನ್ನು ಕೆಲವು ವಿಡಿಯೋಗಳು ತಮಾಷೆಯಾಗಿರುತ್ತವೆ. ಆಗಾಗ ನೆಟ್ಟಿಗರ ಕಣ್ಣು ಚುರುಕಾಗಿಸುವ ಫೋಟೋಗಳೂ ಸಹ ವೈರಲ್ ಆಗುತ್ತವೆ. ಅಂತಹುದೇ ಒಂದು ಫೋಟೊ ಇದೀಗ ಹರಿದಾಡುತ್ತಿದ್ದು, ಚಿತ್ರದಲ್ಲಿ ಎಮ್ಮೆಗಳು ನಿಂತಿರುವುದನ್ನು ನೋಡಬಹುದು. ಆದರೆ ಅಲ್ಲಿ ಸಿಂಹಗಳೂ ಸಹ ಇವೆ. ಆದರೆ ಎಲ್ಲಿವೆ? ಎಷ್ಟಿವೆ? ಎಂಬುದು ಕುತೂಹಲ ಕೆರಳಿಸಿದೆ. ಈ ಚಿತ್ರದಲ್ಲಿ ಎಷ್ಟು ಸಿಂಹಗಳಿವೆ? ಎಂದು ಗುರುತಿಸಬಲ್ಲಿರಾ? ಎಂಬ ಪ್ರಶ್ನೆ ಹರಿದಾಡುತ್ತಿದ್ದು ಕೆಲವರು ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡು ಹಿಡಿದಿದ್ದಾರೆ. ಇನ್ನು ಕೆಲವರು ಇನ್ನೂ ಸಹ ಕಣ್ಮಿಟುಕಿಸದೇ ಸಿಂಹಗಳನ್ನು ಹುಡುಕುತ್ತಿದ್ದಾರೆ.

ಎಮ್ಮೆಗಳ ಮೇಲೆ ದಾಳಿ ಮಾಡಲು ಸಿಂಹಗಳು ಪೊದೆಗಳಲ್ಲಿ ಅಡಗಿ ಮುಖವನ್ನಷ್ಟೇ ಹೊರಹಾಕಿ ನೋಡುತ್ತಿವೆ. ತಾವು ಸೆರೆಹಿಡಿದ ಚಿತ್ರವನ್ನು ಛಾಯಾಚಿತ್ರಗಾರ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ರೂಜರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಛಾಯಾಚಿತ್ರಗಾರ ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆಂದು ತಿಳಿಸಿದ್ದಾರೆ. ಅವರು ತಮ್ಮ ಕ್ಯಾಮರಾ ಹಿಡಿದು ಫೋಟೋ ಕ್ಲಿಕ್ ಮಾಡಲು ಬಯಸಿದಾಗ ಎಮ್ಮೆಗಳ ದಿಂಡು ಓಡಲು ಪ್ರಾರಂಭಿಸಿದೆ. ಆದರೆ ಏಕೆ ಎಮ್ಮೆಗಳು ಓಡುತ್ತಿವೆ ಎಂದು ಅವರಿಗೆ ಅರ್ಥವಾಗಲಿಲ್ಲ. ತಕ್ಷಣ ಕಂಡಿದ್ದು ಸಿಂಹಗಳು. ಎದುರಿರುವ ಪೊದೆಯಲ್ಲಿ ಸಿಂಹಗಳು ಅಡಗಿ ಕುಳಿತಿದ್ದವು. ಎಮ್ಮೆಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದವು. ಈ ದೃಶ್ಯವನ್ನು ಛಾಯಾಚಿತ್ರಗಾರ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪೊದೆಯಲ್ಲಿ ಅಡಗಿರುವ ಸಿಂಹಗಳು

ಇದನ್ನೂ ಓದಿ:
Viral Photo: ಈ ಚಿತ್ರದಲ್ಲಿ ಎಷ್ಟು ಚಿರತೆಗಳಿವೆ? ಅವು ಎಲ್ಲಿವೆ? ಎಂದು ಗುರುತಿಸುವುದೇ ನಿಮ್ಮ ಸವಾಲು

Viral Photo: ನಿಮ್ಮ ಫೇವರೇಟ್​ ಆಟಗಾರ ಮಹೇಂದ್ರ ಸಿಂಗ್​ ಧೋನಿ ಈ ಚಿತ್ರದಲ್ಲಿ ಎಲ್ಲಿ ನಿಂತಿದ್ದಾರೆಂದು ಗುರುತಿಸಬಲ್ಲಿರಾ?