Reel : ಎಲ್ಲರೂ ಒಬ್ಬರಿಗೊಬ್ಬರು ಬಹಳ ಪ್ರೀತಿಸುತ್ತಾರೆ ಈ ಕುಟುಂಬದಲ್ಲಿ. ಮಾಡಿದ್ದುಣ್ಣೋ ಮಾರಾಯಾ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ಇಂಥ ಜನರಿಗೆ ಹೀಗೇಯೇ ಆಗಬೇಕು. ಪಾಪ ತಾನೇ ಆ ಬಾಳೆಹಣ್ಣು (Banana) ತಿನ್ನುವಂತಾಯಿತು. ಅವರ ಕರ್ಮ ಅವರನ್ನು ಸುತ್ತುಕೊಂಡು ಬರುತ್ತದೆ ಎನ್ನುವುದು ಇಂಥದಕ್ಕೇ. ಸುತ್ತೀ ಬಳಸಿ ಬಾಳೆಹಣ್ಣು ಆಕೆಯ ಬಳಿಯೇ ಬಂದಿತು. ಕರ್ಮ ವಾಪಾಸಾಗುತ್ತದೆ ಎಂದು ಸುಮ್ಮನೇ ಹೇಳಿದ್ದಲ್ಲ. ಕಲಿಯುಗದಲ್ಲಿ ಕರ್ಮವನ್ನು ಅನುಭವಿಸುವುದು ಎಂದರೆ ಇದೇ… ಈ ವಿಡಿಯೋ ನೋಡಿದ ನೆಟ್ಟಿಗರು ಹೀಗೆ ಸಾಲಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಮನುಷ್ಯನ ಪೊಳ್ಳುತನವನ್ನು, ಹುಳುಕುತನವನ್ನು ಈ ವಿಡಿಯೋ ಸಾಣೆ ಹಿಡಿದಿದೆ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ವಾಟ್ ಝುಮ್ಕಾ ತಮಿಳು ವರ್ಷನ್; ‘ಸದ್ಯದಲ್ಲೇ ಜಾಕ್ಪಾಟ್ ಹೊಡೆಯುತ್ತೀರಿ ಮೇಡಮ್!’
ಈ ವಿಡಿಯೋ ಅನ್ನು ಜು. 24ರಂದು ಹಂಚಿಕೊಳ್ಳಲಾಗಿದೆ. ಈತನಕ 1 ಮಿಲಿಯನ್ಗಿಂತಲೂ ಹೆಚ್ಚು ಜನ ಇದಕ್ಕೆ ಲೈಕ್ ಹಾಕಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಈ ಪರಿಕಲ್ಪನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಭೂಮಿ ದುಂಡಗಿದೆ. ಎಲ್ಲಿಂದ ಶುರುವಾಗಿರುತ್ತದೆಯೋ ಮರಳಿ ಅಲ್ಲಿಗೇ ಬರುತ್ತದೆ ಎಂದು ಬಿದ್ದುಬಿದ್ದು ನಗುತ್ತಿದ್ದಾರೆ ನೆಟ್ಟಿಗರು.
ನೋಡಿದಿರಲ್ಲ ವಿಡಿಯೋ? ನಿಜಕ್ಕೂ ಈ ಕುಟುಂಬದಲ್ಲಿ ಪರಸ್ಪರರು ಎಷ್ಟೊಂದು ಪ್ರೀತಿಸುತ್ತಾರೆ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಹೆಂಡತಿ ಗಂಡನನ್ನು ತುಸು ಜಾಸ್ತಿಯೇ ಪ್ರೀತಿಸುತ್ತಾಳೆ ಎನ್ನಿಸುವುದಿಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಅಹಮದಾಬಾದ್ ಮೂಲದ ದೀಪು ಸೀತು ಎಂಬ ವಿಡಿಯೋ ಕ್ರಿಯೇಟರುಗಳು ಇವರು. ಇನ್ಕ್ರೀಸಿಂಗ್ ಹ್ಯಾಪಿನೆಸ್ ಇಂಡೆಕ್ಸ್ ಆಫ್ ಇಂಡಿಯಾ ಎಂಬ ಟ್ಯಾಗ್ಲೈನ್ ಇವರ ಇನ್ಸ್ಟಾ ಅಕೌಂಟಿನದು. ಬಾಳೆಹಣ್ಣನ್ನಿಟ್ಟುಕೊಂಡೇ ಇವರು ಮತ್ತೊಂದು ವಿಡಿಯೋ ಸೃಷ್ಟಿಸಿದ್ದಾರೆ.
ಹೆಚ್ಚು ಖರ್ಚು ಮಾಡದೆ, ಪರಿಕರಗಳ ಬಗ್ಗೆ ಯೋಚಿಸದೆ, ಸಂಭಾಷಣೆಯ ಗೋಜಿಗೂ ಹೋಗದೆ, ಮನೆಯಲ್ಲಿಯೇ ಕುಳಿತು ಮೌನವಾಗಿ ಜನರನ್ನು ನಗಿಸಿದೆ ಈ ಜೋಡಿ. ಬಾಳೆಹಣ್ಣು ತಿನ್ನುತ್ತ ಅದನ್ನೇ ಪ್ರತಿಮೆಯನ್ನಾಗಿಸಿಕೊಂಡು ನೆಕ್ಲೇಸ್ ಯಾವಾಗ ಎಂದು ಕೇಳುತ್ತಾಳೆ. ಆತ, ಹರಿದ ಕಾಲುಚೀಲವನ್ನು ಗುರುತು ಮಾಡಿ ತನ್ನ ಪರಿಸ್ಥಿತಿ ಹೇಳಿಕೊಳ್ಳುತ್ತಾನೆ. ಇವರ ಸೃಜನಶೀಲ ರೀತಿಗೆ ನೆಟ್ಟಿಗರು ಶಭಾಷ್ ಎಂದಿದ್ದಾರೆ.
ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:25 pm, Fri, 18 August 23