
Egg : ‘ನಾನು ಸುಂದರವಾದ ಮೊಟ್ಟೆಯನ್ನು ಇಟ್ಟಿದ್ದೇನೆ. ಇದನ್ನು ಯಾವಾಗ ತಿನ್ನಬೇಕೆಂಬುದನ್ನೂ ನಾನು ಟೈಪ್ ಮಾಡುತ್ತೇನೆ’ ಮುಕುಂದ ಸೆಟ್ಲೂರ್ ಎನ್ನುವವರು ಕೆಲ ದಿನಗಳ ಹಿಂದೆ ಫೇಸ್ಬುಕ್ನಲ್ಲಿ (Facebook) ಹೀಗೊಂದು ಕ್ಯಾಪ್ಷನ್ನೊಂದಿಗೆ ದಿನಾಂಕ ಹೊತ್ತ ಮೊಟ್ಟೆಯ ಫೋಟೋ ಪೋಸ್ಟ್ ಮಾಡಿದ್ದರು. ಇದರಡಿ ಕೆಲವು ಪ್ರತಿಕ್ರಿಯೆಗಳೂ ಇದ್ದವು; ಮೊಟ್ಟೆಯನ್ನು ಮೂರು ತಿಂಗಳುಗಳ ತನಕ ಇಟ್ಟು ತಿನ್ನಬಹುದೆ! ಅರೆ, ಇದು ಚೀನಾದ ಕೋಳಿಮೊಟ್ಟೇನೇ ಇರಬೇಕು, ಇಷ್ಟುದಿನಗಳವರೆಗೂ ಇದು ಹಾಳಾಗುವುದಿಲ್ಲವೆಂದರೆ…
ಹಾಗಿದ್ದರೆ ಮೊಟ್ಟೆಯ ತಾಜಾತನವನ್ನು ಕಂಡುಕೊಳ್ಳುವುದು ಹೇಗೆ? ಲೇಖಕ, ಅಂಕಣಕಾರ ವಾಲಾ ಆಫ್ಷರ್ ಎಂಬುವವರು ಈ ಕುರಿತು ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಅನ್ನು ಈತನಕ 1.3 ಮಿಲಿಯನ್ ಜನರು ನೋಡಿದ್ದಾರೆ. 7,200ಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. 1,700 ಜನರು ರೀಟ್ವೀಟ್ ಮಾಡಿದ್ದಾರೆ. ಪ್ರತಿಕ್ರಿಯೆಗಳೂ ರಾಶಿಯಾಗಿ ಹರಿದುಬಂದಿವೆ.
‘ತಾಜಾ ಮೊಟ್ಟೆಗಳ ಬಿಳಿಭಾಗವು ಕಡಿಮೆ pH ಪ್ರಮಾಣ ಹೊಂದಿದ್ದು ಆಮ್ಲದಾಂಶವನ್ನು ಹೊಂದಿರುತ್ತವೆ. ಬೇಯಿಸಿದಾಗ ಬಿಳಿಭಾಗವು ಚಿಪ್ಪಿಗೆ ಅಂಟಿಕೊಳ್ಳುತ್ತದೆ ಆಗ ಚಿಪ್ಪನ್ನು ತೆಗೆಯುವುದು ಕಷ್ಟ. ಮೊಟ್ಟೆಗಳು ಹಳೆಯವಾಗುತ್ತಿದ್ದಂತೆ pH ಪ್ರಮಾಣ ಹೆಚ್ಚಾಗುತ್ತದೆ, ಆಗ ಚಿಪ್ಪನ್ನು ಸುಲಭವಾಗಿ ತೆಗೆಯಬಹುದು. 7-10 ದಿನಗಳಷ್ಟು ಹಳೆಯ ಮೊಟ್ಟೆಗಳು ಬೇಯಿಸಲು ಮತ್ತು ತಿನ್ನಲು ಅನುಕೂಲಕರವಾಗಿರುತ್ತವೆ. ಹಾಗಾಗಿ ಯಾವಾಗಲೂ ತಾಜಾ ಮೊಟ್ಟೆ ಒಳ್ಳೆಯದು ಅಂತಲ್ಲ’ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಥಟ್ ಅಂತ ಹೇಳಿ! ಇವರನ್ನು ಹೀಗೆ ಬೇಸರಗೊಳಿಸಿದ್ದು ಯಾರು?
ನಾನಿರುವ ಪ್ರದೇಶ ಉಷ್ಣವಲಯವಾದ್ದರಿಂದ ತಾಜಾಮೊಟ್ಟೆಗಳು ಸಿಗುವುದೇ ಇಲ್ಲವೇನೋ ಎಂದುಕೊಂಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ವಾಲಾ ಅವರು ತಿಳಿಸಿದ ಪ್ರಯೋಗವನ್ನು ಮಾಡಿ ನೋಡಿದೆ. ಆದರೆ ಫಲಿತಾಂಶದಲ್ಲಿ ಸ್ಪಷ್ಟತೆ ಇಲ್ಲ ಎಂದಿದ್ದಾರೆ ಇನ್ನೊಬ್ಬರು. ಒಂದು ತಿಂಗಳ ನಂತರವೂ ಮೊಟ್ಟೆಗಳನ್ನು ತಿನ್ನಬಹುದೇ? ಎಂದು ಕೆಲವರು ಕೇಳಿದ್ದಾರೆ. ಕೆಲ ಹೆಂಡತಿಯರು, ತಮ್ಮ ಗಂಡಂದಿರು ಮೋಸ ಮಾಡುತ್ತಿದ್ದಾರೆಯೇ? ಎಂದು ಕಂಡು ಹಿಡಿಯಲು ಈ ತಂತ್ರ ಬಳಸುತ್ತಾರೆ ಎಂದಿದ್ದಾರೆ ಮತ್ತೊಬ್ಬರು! ಇದೆಲ್ಲ ನಮ್ಮ ಅಜ್ಜಿಯರಿಗೂ ಗೊತ್ತಿತ್ತು ಎಂದಿದ್ದಾರೆ ಮಗದೊಬ್ಬರು.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:39 pm, Mon, 17 July 23