ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ವೈರಸ್, ಬ್ಯಾಕ್ಟೀರಿಯಾಗಳು ಮತ್ತು ಇತರ ಸೂಕ್ಷ್ಮ ಜೀವಿಗಳಿಂದ ಉಂಟಾಗುವ ಸೋಂಕುಗಳನ್ನು ತಪ್ಪಿಸಲು ಪ್ರತಿನಿತ್ಯ ಕೈಗಳನ್ನು ಆಗಾಗ್ಗೆ ತೊಳೆಯುವುದು ಬಹಳ ಮುಖ್ಯ. ಕೈಗಳನ್ನು ತೊಳೆದುಕೊಳ್ಳುವುದು ಎಷ್ಟು ಮುಖ್ಯವೆಂದು ಇಡೀ ಪ್ರಪಂಚ , ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅರಿತುಕೊಂಡಿದೆ. ಸೋಪ್ ಅಥವಾ ಹ್ಯಾಂಡ್ ವಾಶ್ ಬಳಸಿಕೊಂಡು ಕೈಗಳನ್ನು ತೊಳೆದುಕೊಳ್ಳಬೇಕು ಎಂದು ಹೇಳುತ್ತಾ ಆದರೆ ತರಾತುರಿಯಲ್ಲಿ ಕೈಗಳನ್ನು ತೊಳೆದುಕೊಳ್ಳುವುದರಿಂದ ಅಥವಾ ಕೈಗಳನ್ನು ಸರಿಯಾದ ರೀತಿಯಲ್ಲಿ ತೊಳೆದುಕೊಳ್ಳದಿದ್ದರೆ ಸೂಕ್ಷ್ಮ ಜೀವಿಗಳು ಕೈಗಳಲ್ಲಿ ಹಾಗೇನೆ ಉಳಿದುಕೊಳ್ಳುತ್ತವೆ. ಇದರಿಂದ ಸೂಕ್ಷ್ಮಾಣು ಜೀವಿಗಳು ನಿಮ್ಮ ದೇಹದೊಳಗೆ ಪ್ರವೇಶಿಸಿ ಅನೇಕ ರೋಗಗಳು ಉಂಟಾಗಲು ಕಾರಣವಾಗಬಹುದು. ಹಾಗದರೆ ಸೋಪ್ ಅಥವಾ ಹ್ಯಾಂಡ್ವಾಶ್ ಬಳಸಿ ಕೈಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ತೊಳೆಯುವುದು ಎಂದು ನೀವು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ. ಈ ವೀಡಿಯೋದಲ್ಲಿ ಕೈಗಳನ್ನು ತೊಳೆಯುವ ವಿಧಾನದ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳ ತಂಡವೊಂದು ಬಹಳ ಸುಂದರವಾಗಿ ವಿವರಿಸಿದ್ದಾರೆ.
ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಆದರೆ ಕೈಗಳನ್ನು ತೊಳೆಯುವ ಸರಿಯಾದ ಹಂತಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಈ ಕಾರಣಕ್ಕಾಗಿಯೇ ಜನರ ಆರೋಗ್ಯದ ದೃಷ್ಟಿಯಿಂದ ಭವಿಷ್ಯದ ವೈದ್ಯರ ತಂಡವೊಂದು ನೃತ್ಯ ಪ್ರದರ್ಶನದ ಮೂಲಕ ಕೈಗಳನ್ನು ಸರಿಯಾದ ರೀತಿಯಲ್ಲಿ ತೊಳೆದುಕೊಳ್ಳುದು ಹೇಗೆ ಎಂಬುದನ್ನು ಹಂತಹಂತವಾಗಿ ವಿವರಿಸಿದ್ದಾರೆ.
ಈ ವೈರಲ್ ವಿಡಿಯೋವನ್ನು @_adida_boys_ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳ ತಂಡವೊಂದು ನೃತ್ಯದ ಮೂಲಕ ಕೈಗಳನ್ನು ತೊಳೆಯುವ ಏಳು ಹಂತಗಳ ಬಗ್ಗೆ ವಿವರಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ವಿಡಿಯೋದಲ್ಲಿ ಮೊದಲ ವಿದ್ಯಾರ್ಥಿ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಲು ಏಳು ಹಂತಗಳು ಇವೆ ಎಂದು ಹೇಳುತ್ತಾನೆ. ಆ ಏಳು ಹಂತಗಳನ್ನು ನೃತ್ಯದ ಮೂಲಕ ಉಳಿದ ವಿದ್ಯಾರ್ಥಿಗಳು ತೋರಿಸುತ್ತಾರೆ. ಮೊದಲನೆಯದಾಗಿ ಹ್ಯಾಂಡ್ ವಾಶ್ ಅಥವಾ ಸೋಪನ್ನು ಕೈಗೆ ಹಾಕಿ, ಎರಡೂ ಕೈಗಳ ಅಂಗೈಗಳನ್ನು ಸರಿಯಾಗಿ ಉಜ್ಜಿಕೊಂಡು ಸ್ವಚ್ಛಗೊಳಿಸಬೇಕು. ಎರಡನೇ ಹಂತದಲ್ಲಿ ಕೈಯ ಹಿಂಭಾಗವನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಮೂರನೇ ಹಂತದಲ್ಲಿ ಉಗುರುಗಳನ್ನು ಸ್ವಚ್ಛಗೊಳಿಸಬೇಕು. ನಾಲ್ಕನೇ ಹಂತದಲ್ಲಿ ಎರಡೂ ಕೈಗಳ ಬೆರಳುಗಳನ್ನು ಸ್ವಚ್ಛಗೊಳಿಸಬೇಕು. ಐದನೇ ಹಂತದಲ್ಲಿ ಹೆಬ್ಬೆರಳುಗಳನ್ನು ಸರಿಯಾಗಿ ಉಜ್ಜಿಕೊಂಡು ಸ್ವಚ್ಛಗೊಳಿಸಬೇಕು. ಆರನೇ ಹಂತದಲ್ಲಿ ಎರಡೂ ಕೈಗಳ ಬೆರಳುಗಳನ್ನು ಇಂಟರ್ಲಾಕಿಂಗ್ ಮಾಡುತ್ತಾ ಸ್ವಚ್ಛಗೊಳಿಸಬೇಕು. ಏಳನೇ ಹಂತದಲ್ಲಿ ಕೈಯ ಮಣಿಕಟ್ಟನ್ನು ಸ್ವಚ್ಛಗೊಳಿಸಿ, ಕೈಗಳನ್ನು ತೊಳೆಯಬೇಕು ಎಂಬುದನ್ನು ಹಂತಹಂತವಾಗಿ ಬಹಳ ಸೊಗಸಾಗಿ ವಿವರಿಸಿದ್ದಾರೆ.
ಇದನ್ನೂ ಓದಿ: ಬರಿಗೈಯಲ್ಲಿ ದೈತ್ಯ ಅನಕೊಂಡ ಹಿಡಿದು, ಒಲವಿನ ಮುತ್ತಿಟ್ಟ ಎಂಟೆದೆ ಭಂಟ
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 8.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 410K ಲೈಕ್ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್ಗಳು ಬಂದಿವೆ. ಒಬ್ಬ ಬಳಕೆದಾರರು ಇವರು ತುಂಬಾ ಬುದ್ಧಿವಂತಿಕೆಯ ವೈದ್ಯರು” ಎಂದು ಹೊಗಳಿದ್ದಾರೆ. ಇನ್ನೊಬ್ಬ ಬಳಕೆದಾರರು ವೈದ್ಯರಿಂದ ಇದೊಂದು ಒಳ್ಳೆಯ ಪ್ರಯತ್ನ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಕೈಗಳನ್ನು ತೊಳೆಯುವ ವಿಧಾನದ ಬಗ್ಗೆ ಬಹಳ ಸುಂದರವಾಗಿ ವಿವರಿಸಿದ್ದೀರಿ ಎಂದು ಕಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ