Viral Video: ಶಭಾಷ್​ ಉಡುಪಿಯ ‘ಆಭರಣ’ ಬಾಲೆಯರೇ, ಕುಣಿಯಿರೈ ಮನದಣಿಯೇ!

Udupi : ಮಳಿಗೆಯೊಳಗೆ ದಿನವೂ ಗಂಟೆಗಟ್ಟಲೆ ನಿಂತಲ್ಲೇ ನಿಂತು ಸೌಜನ್ಯದಿಂದ ಗ್ರಾಹಕರೊಂದಿಗೆ ಒಡನಾಡಿ ವಹಿವಾಟು ನಡೆಸುವ ಈ ಮಹಿಳೆಯರು ಇದ್ದಕ್ಕಿದ್ದ ಹಾಗೆ ಬೀದಿಯಲ್ಲಿ ಬಂದು ಕುಣಿದರೆ ಹೇಗಿರಬೇಡ! ಅಂದಹಾಗೆ ಯಾರಪ್ಪಣೆ ಬೇಕು ಕುಣಿಯೋದಕ್ಕೆ?

Viral Video: ಶಭಾಷ್​ ಉಡುಪಿಯ ‘ಆಭರಣ’ ಬಾಲೆಯರೇ, ಕುಣಿಯಿರೈ ಮನದಣಿಯೇ!
ಉಡುಪಿಯ ಬೀದಿಯಲ್ಲಿ ಆಭರಣ ಮಳಿಗೆಯ ಮಹಿಳಾ ಉದ್ಯೋಗಿಗಳ ನೃತ್ಯ
Updated By: ಶ್ರೀದೇವಿ ಕಳಸದ

Updated on: Aug 22, 2022 | 3:35 PM

Woman And Dance : ಲಯ ನಾದದ ಗತಿಗೆ ಮನಸೋಲದವರು ಯಾರಿಲ್ಲ? ಬಾಲ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಉಲ್ಲಾಸ ಪಡುವುದು ಉಲ್ಲಾಸ ನೀಡುವುದು ಎನ್ನುವುದು ಎಲ್ಲಿಂದ ಪ್ರಾರಂಭವಾಯಿತು? ಸಂಗೀತ, ನೃತ್ಯ ಎನ್ನುವುದು ನರನಾಡಿಗಳಲ್ಲೇ ಬೆಸೆದುಕೊಂಡಿರುವಂಥದ್ದು. ಅದು ನೀಡುವ ಚೈತನ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ. ಅಂತೆಯೇ ಅದು ತನ್ನ ತೆಕ್ಕೆಗೆ ಎಳೆದುಕೊಳ್ಳುವಾಗಲೂ ಅದಕ್ಕೆ ಲಿಂಗಬೇಧವಿರುವುದಿಲ್ಲ. ನೃತ್ಯ ಮತ್ತು ನಾದದ ಮಹಿಮೆಯದು. ಉಡುಪಿಯಲ್ಲಿ ಇತ್ತೀಚೆಗೆ ಇಂಥ ಉತ್ಸಾಹಪೂರ್ಣ ಗಳಿಗೆಗಳಿಗೆ ಸಾರ್ವಜನಿಕರು ಸಾಕ್ಷಿಯಾದರು. ಈ ಗಳಿಗೆಗಳನ್ನು ರಸವತ್ತಾಗಿಸಿದವರು ಉಡುಪಿ ಆಭರಣ ಮಹಿಳಾ ಉದ್ಯೋಗಿಗಳು. ಹುಲಿವೇಷದ ತಾಸೆವಾದನದ ಗತಿಗೆ ಶರಣಾದ ಈ ಮಹಿಳೆಯರು ಮೈಮನದಣಿಯೆ ಕುಣಿದದ್ದು ನೋಡಿದಾಗ ರೋಮಾಂಚನ ಉಂಟಾಗುವುದಿಲ್ಲವೆ?

ಕಳಲೆ ಪುರುಷೋತ್ತಮ ಎನ್ನುವವರು ಫೇಸ್​ಬುಕ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನರ್ತಿಸಿರುವ ಹೆಣ್ಣುಮಕ್ಕಳ ಜೀವನೋತ್ಸಾಹ ಕಂಡು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎಲ್ಲರೊಳಗೂ ಹೀಗೆ ಮೈಮರೆತು ನರ್ತಿಸುವ ಮಗುವೊಂದು ಸುಪ್ತವಾಗಿದ್ದೇ ಇರುತ್ತದೆ. ಅದರದೇ ಆದ ಲಯದೊಂದಿಗೆ ಮನಸ್ಸು ಮಿಳಿತಗೊಂಡಿರುತ್ತದೆ. ಅದು ಹೀಗೆ ಕುಣಿಯಲು ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಯಾವಾಗ ಅದು ಮೈಚಳಿಬಿಟ್ಟು ಹೀಗೆ ಜೀವನೋತ್ಸಾಹ ಮೆರೆಯುತ್ತದೆಯೋ, ಯಾರು ಬಲ್ಲರು? ಇಂಥ ಅಪೂರ್ವ ಗಳಿಗೆಗಳು ನಿಮ್ಮ ಬದುಕಿನಲ್ಲಿಯೂ ಆಗಾಗ ಬರುತ್ತಿರಲಿ.

 

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:14 pm, Mon, 22 August 22