Viral Post: ಇದು ‘ಭಾರತದ ರಾಷ್ಟ್ರೀಯ ಚಮಚ’ವಾಗಲಿ!

National Spoon of India : ಈ ಚಮಚ ನಮ್ಮನೇಲೂ ಇದೆ ಅವರ ಮನೇಲೂ ಇದೆ. ಅದಕ್ಕೆ ಇದು ‘ಭಾರತದ ರಾಷ್ಟ್ರೀಯ ಚಮಚ’ ಆಗಲೇಬೇಕು ಎನ್ನುತ್ತಿರುವ ನೆಟ್ಟಿಗಮಹಾಶಯರು!

Viral Post: ಇದು ‘ಭಾರತದ ರಾಷ್ಟ್ರೀಯ ಚಮಚ’ವಾಗಲಿ!
ಇದೇ ಆ ಚಮಚ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 22, 2022 | 5:19 PM

National Spoon of India : ನಮ್ಮ ರಾಷ್ಟ್ರೀಯ ಪಕ್ಷಿ, ನಮ್ಮ ರಾಷ್ಟ್ರೀಯ ಪ್ರಾಣಿ, ನಮ್ಮ ರಾಷ್ಟ್ರೀಯ ಹೂವು, ಇದೀಗ ನಮ್ಮ ರಾಷ್ಟ್ರೀಯ ಚಮಚದ ಸಮಯ! ತಮಾಷೆಯಲ್ಲ. ನೆಟ್ಟಿಗರೊಬ್ಬರು ‘ರೆಡ್ಡಿಟ್​’ನಲ್ಲಿ ತಮ್ಮ ಮನೆಯಲ್ಲಿರುವ ಚಮಚವೊಂದನ್ನು ಪೋಸ್ಟ್​ ಮಾಡಿ, ಇದು ಎಲ್ಲರ ಮನೆಯಲ್ಲಿಯೂ ಇರುವಂಥ ಚಮಚ. ಇದನ್ನು ‘ಭಾರತದ ರಾಷ್ಟ್ರೀಯ ಚಮಚ’ ಎಂಬ ಘೋಷಿಸಲು ಅರ್ಜಿ ಗುಜರಾಯಿಸಬೇಕೆಂದು ಒತ್ತಾಯಿಸಿದ್ದಾರೆ. ಮನೆಮನೆಯಲ್ಲಿಯೂ ಇರುವ ಈ ಚಮಚ ಸಹಜವಾಗಿಯೇ ಅತಿವೇಗದಲ್ಲಿ ಅನೇಕ ನೆಟ್ಟಿಗರನ್ನು ಸೆಳೆದಿದೆ.  ‘ಕತ್ತಿನಿಂದ ಕೆಳಗೆ ಇರುವ ಇಂಥ ವಿನ್ಯಾಸದ ಚಮಚ ಯಾರ ಮನೆಯಲ್ಲಿಲ್ಲ ಹೇಳಿ? ನಿಮ್ಮ ಮನೆಯಲ್ಲಿಯೂ ಇದೆಯೆಂದರೆ ಇದಕ್ಕೆ ಇದರದೇ ಆದ ದೇಸೀಯ ಮಾನ್ಯತೆ ಇದೆ ಎಂದರ್ಥ’ ಎಂದು ನಾಲ್ಕು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದರು. ಇದೀಗ ಈ ಪೋಸ್ಟ್​ 4,200ಕ್ಕೂ ಹೆಚ್ಚು ವೋಟ್​, 260ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಗಳಿಸಿದೆ.

ಅನೇಕರು, ನಮ್ಮ ಮನೆಯಲ್ಲಿಯೂ ಇಂಥದೇ ವಿನ್ಯಾಸವುಳ್ಳ ಚಮಚ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಅಮೆರಿಕಾಗೆ ಹೋದ ನಂತರವೂ ಇಂಥ ಚಮಚವನ್ನೇ ಉಪಯೋಗಿಸುತ್ತೇನೆ ಎಂದಿದ್ದಾರೆ ಹಲವರು. ಎಲ್ಲರ ಬಳಿಯೂ ಇಂಥದೇ ಚಮಚ ಇದೆ ಎಂದಾದಲ್ಲಿ ಇದಕ್ಕೊಂದು ಇತಿಹಾಸವಿರಬೇಕಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನೀವೀಗ ನಿಮ್ಮ ಮನೆಯ ಬಟ್ಟಲು, ತಟ್ಟೆಯನ್ನೆಲ್ಲ ಪರೀಕ್ಷಿಸಲು ಹೊರಟಿರೋ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:19 pm, Mon, 22 August 22