Viral Video : ನೆಟ್ಟಿಗರು ನನ್ನನ್ನು ಕಳ್ಳಕರಡಿ ಎನ್ನುತ್ತಿರುವುದು ಸರಿಯೇ?

Bear Shoplifts Candies : ಕರಡಿಯೊಂದು ರಾತ್ರಿ ಅಂಗಡಿಗೆ ನುಗ್ಗಿ ತನಗೆ ಬೇಕಾದ ಕ್ಯಾಂಡಿ, ತಿಂಡಿಗಳನ್ನೆಲ್ಲ ತಿನ್ನುವಾಗ ಕ್ಯಾಶಿಯರ್​ ಸುಮ್ಮನೆ ವಿಡಿಯೋ ಮಾಡುತ್ತ ನಿಲ್ಲುವ ಪರಿಸ್ಥಿತಿ ಉಂಟಾಗಿತ್ತು!

Viral Video : ನೆಟ್ಟಿಗರು ನನ್ನನ್ನು ಕಳ್ಳಕರಡಿ ಎನ್ನುತ್ತಿರುವುದು ಸರಿಯೇ?
ಏನು ತಿನ್ನಲಿ ಏನು ಬಿಡಲಿ ಎನ್ನುತ್ತಿರುವ ಕರಡಿ
Updated By: ಶ್ರೀದೇವಿ ಕಳಸದ

Updated on: Sep 21, 2022 | 1:47 PM

Viral Video : ಕ್ಯಾಲಿಫೋರ್ನಿಯಾದ ಈ ಕರಡಿಗೆ ತುಂಬಾ ಹಸಿವಾಗಿದೆ. ಆಹಾರ ಹುಡುಕುತ್ತ ರಾತ್ರೋರಾತ್ರಿ  ಅಲೆದುಕೊಂಡು ಹೋಗಿದೆ. ಹೀಗೆ ಹೋಗುತ್ತಿರುವಾಗ ಒಂದು ಅಂಗಡಿ ಸಿಕ್ಕಿದೆ. ಅಂಗಡಿ ಎಂದು ಗೊತ್ತಾದ ಮೇಲೆ ಸುಮ್ಮನಿರುವುದು ಅಪರಾಧ ತಾನೆ? ಮೆಲ್ಲ ಒಳಹೋಗಿ ತನಗೆ ಬೇಕಾದ ಕ್ಯಾಂಡಿ, ಸಿಹಿತಿಂಡಿಗಳನ್ನು ತಿನ್ನಲು ಶುರುಮಾಡಿದೆ! ಕರಡಿ ಹೀಗೆ ತಿನ್ನುವ ವಿಡಿಯೋ ಅನ್ನು ನೈಟ್​ ಶಿಫ್ಟ್​ನಲ್ಲಿದ್ದ ಕ್ಯಾಶಿಯರ್ ಕ್ರಿಸ್ಟೋಫರ್​ ಕಿನ್ಸನ್ ವಿಡಿಯೋ ಮಾಡಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ​

ಈ ಘಟನೆ ಸೆ. 6ರಂದು ನಡೆದಿದೆ. ‘ನಾನು ಬಾಗಿಲು ಹಾಕಿಹೋಗಿದ್ದೆ, ಆದರೆ ವಾಪಾಸ್​ ಬಂದಾಗ ಬಾಗಿಲು ತೆರೆದುಕೊಂಡಿದ್ದನ್ನು ನೋಡಿ ಅಚ್ಚರಿಯಾಯಿತು. ಯಾರೋ ಒಳಗಿದ್ದಾರೆ ಎನ್ನಿಸಿ ನೋಡಿದರೆ ತಲೆ ಕಂಡ ಹಾಗಾಯಿತು. ನೋಡಿದರೆ ಕರಡಿ. ಎಂಥಾ ದೊಡ್ಡ ಕರಡಿ!’ ಕ್ರಿಸ್ಟೋಫರ್ ಈ ವಿಷಯವನ್ನು ಡೈಲಿ ಮೇಲ್​ನೊಂದಿಗೆ ಹಂಚಿಕೊಂಡಿದ್ದಾರೆ. .

ಅಂಗಡಿಯೊಳಗೆ ತನಗೆ ಬೇಕಾದ ತಿಂಡಿ ತಿನಿಸುಗಳನ್ನು ಕರಡಿ ತೆಗೆದುಕೊಳ್ಳುತ್ತಿರುವಾಗ ಕ್ರಿಸ್ಟೋಫರ್ ಅಸಾಯಕರಾಗಿ ನಿಲ್ಲಬೇಕಾಯಿತು.

‘ನಾನಂತೂ ಕರಡಿಯಿಂದ ದೂರವೇ ನಿಂತಿದ್ದೆ. ಅಕಸ್ಮಾತ್ ಕರಡಿ ದಾಳಿ ಮಾಡಿದರೆ ತಪ್ಪಿಸಿಕೊಳ್ಳಲು ಸುಲಭ ಎಂಬ ಕಾರಣಕ್ಕೆ ಬಾಗಿಲಿನ ಬಳಿಯೇ ನಿಂತುಕೊಂಡಿದ್ದೆ. ಆರಂಭದಲ್ಲಿ ಭಯವಾಯಿತು. ತನಗೆ ಬೇಕಾದ್ದನ್ನು ಎಳೆದುಕೊಂಡು ತಿನ್ನುತ್ತಲೇ ಇತ್ತು. ಅದು ನನಗೇನೂ ಹಾನಿ ಮಾಡಲಾರದು ಎಂದೆನ್ನಿಸಿದಾಗ ಸ್ವಲ್ಪ ನಿರಾಳವಾದೆ’ ಎಂದಿದ್ದಾರೆ ಕ್ರಿಸ್ಟೋಫರ್.

ಅಂಗಡಿಯೊಳಗೆ ಬಂದು ಬೇಕಾದ್ದನ್ನೆಲ್ಲ ತಿನ್ನುವುದು ಮತ್ತೆ ಹೊರಹೋಗುವುದು. ಹೀಗೆಲ್ಲ ಮೂರು ನಾಲ್ಕು ಸಲ ಮಾಡಿದೆ ಕರಡಿ. ಕೊನೆಗೆ ಅರ್ಧಗಂಟೆಯಾದರೂ ಹೊರಗೆ ಹೋದದ್ದು ವಾಪಾಸು ಬಾರದೇ ಇದ್ದಾಗ ಕ್ರಿಸ್ಟೋಫರ್ ಅಂಗಡಿಯ ಬಾಗಿಲನ್ನು ಹಾಕಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 1:47 pm, Wed, 21 September 22