Viral Video: ‘ನಾನು ದೂರದ ಕಡಲತೀರದಲ್ಲಿ ಬದುಕುತ್ತಿರುವುದು ಈ ಕಾರಣಕ್ಕೆ’ ಸಮೃದ್ಧಿ ಮಲ್ಹೋತ್ರಾ

|

Updated on: Sep 11, 2023 | 4:42 PM

Life: ಒಂದು ಸ್ಟಾರ್ಟಪ್​ ಮತ್ತು ದೌರ್ಜನ್ಯದಿಂದ ಕೂಡಿದ ಮದುವೆಯ ಸಂಬಂಧ ಎರಡೂ ವೈಫಲ್ಯಗೊಂಡಾಗ ಬದುಕನ್ನು ಹೊಸದಾಗಿ ಪ್ರಾರಂಭಿಸಲು ಸಮೃದ್ಧಿ ಮಲ್ಹೋತ್ರಾ ಗೋವಾಕ್ಕೆ ತೆರಳಿದರು. ಐದು ವರ್ಷಗಳಲ್ಲಿ ಆಕೆ ಅನೇಕ ಅಧ್ಯಾತ್ಮ ಸಾಧಕರನ್ನು ಭೇಟಿಮಾಡಿ ಅಧ್ಯಯನ ಮಾಡಿದರು. ಸದ್ಯ ಬ್ರೀದ್​ವರ್ಕ್​ ಫೆಸಿಲಿಟೇಟರ್​ ಎಂಬ ಸಂಸ್ಥೆಯಲ್ಲಿ ಯೋಗ ಶಿಕ್ಷಕಿ ಮತ್ತು ಸ್ಟಾರ್ಟ್​ಅಪ್​ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ಧಾರೆ.

Viral Video: ನಾನು ದೂರದ ಕಡಲತೀರದಲ್ಲಿ ಬದುಕುತ್ತಿರುವುದು ಈ ಕಾರಣಕ್ಕೆ ಸಮೃದ್ಧಿ ಮಲ್ಹೋತ್ರಾ
ಸಮೃದ್ಧಿ ಮಲ್ಹೋತ್ರಾ
Follow us on

Life: ‘ನಾನು ಸಮೃದ್ಧಿ ಮಲ್ಹೋತ್ರಾ. ನನ್ನದು ಪರ್ಯಾಯ ಜೀವನಶೈಲಿ. ಮೂರು ನಾಯಿಗಳು ಮತ್ತು ಒಂದು ಬೆಕ್ಕಿನೊಂದಿಗೆ ಗೋವಾದ (Goa) ದೂರದ ಕಡಲತೀರದಲ್ಲಿ ವಾಸಿಸುತ್ತಿದ್ದೇನೆ. ನಾನು ಶಾಲೆಯಲ್ಲಿ ಯಾವಾಗಲೂ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿನಿಯಾಗಿದ್ದೆ, ಒಂದರ್ಥದಲ್ಲಿ ಗೋಲ್ಡನ್​ ಗರ್ಲ್​! ಆದರೆ ನನ್ನ ವೈಯಕ್ತಿಕ ಬದುಕು ದುರಂತದಿಂದ ಕೂಡಿತ್ತು. 25ನೇ ವಯಸ್ಸಿಗೆ ಒಂದು ಸ್ಟಾರ್ಟಅಪ್ ಶುರುಮಾಡಿದೆ ಮತ್ತು ಮದುವೆಯನ್ನೂ ಆದೆ. ಆದರೆ ಸಂಗಾತಿಯಿಂದ ದೌರ್ಜನ್ಯಕ್ಕೆ ಒಳಗಾದೆ. ಆಗ ಇನ್ನು ಬದುಕುವುದೇ ಇಲ್ಲವೇನೋ ಅಂದುಕೊಂಡೆ. ಆಗಲೇ ಎಲ್ಲವನ್ನೂ ಬಿಟ್ಟು ಗೋವಾಕ್ಕೆ ಹೋದೆ. ಅಲ್ಲಿ ಯೋಗ ಕಲಿಯತೊಡಗಿದೆ. ದಿನವೂ ಸಮುದ್ರದಲ್ಲಿ ಎರಡು ತಾಸು ಈಜಾಡುತ್ತಿದ್ದೆ. ಅನಾಥ ನಾಯಿಗಳನ್ನು ರಕ್ಷಿಸುತ್ತಿದ್ದೆ. ಬದುಕನ್ನು ಮರಳಿ ಪ್ರೀತಿಸತೊಡಗಿದೆ, ಎಲ್ಲವೂ ಶಾಂತವೆನ್ನಿಸತೊಡಗಿತು.’

ಇದನ್ನೂ ಓದಿ : Viral: ಅಕಸ್ಮಾತ್ ಆಕೆ ಅಪರಿಚಿತರಿಗೆ ಆನ್​ಲೈನ್​ನಲ್ಲಿ ಹಣ ಕಳಿಸಿದಳು, ಮುಂದೇನಾಯಿತು?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಾನು ಗೋವಾಕ್ಕೆ ಹೋದಾಗ ನನ್ನ ಅಕೌಂಟಿನಲ್ಲಿ ರೂ. 45,000 ಇತ್ತು. 6 ವಾರಗಳಿಗೆ ಅದು ಖಾಲಿಯಾಯಿತು. ಆನಂತರ ಜೀವನೋಪಾಯಕ್ಕೆ ಏನು ಮಾಡುವುದು ಎಂಬ ಚಿಂತೆ ಕಾಡತೊಡಗಿತು. ಆಗ ಆನ್​ಲೈನ್​ನಲ್ಲಿ ಬರೆವಣಿಗೆಯ ಮೂಲಕ ತಕ್ಕಮಟ್ಟಿಗೆ ಕೆಲಸ ಮಾಡತೊಡಗಿದೆ. ಆದರೂ ಪೈಸೆಗೆ ಪೈಸೆ ಕೂಡಿಸಿ ಬದುಕಬೇಕಾದ ಪರಿಸ್ಥಿತಿ ಒದಗಿತು. ಏಕೆಂದರೆ ನನ್ನ ಶಿಕ್ಷಣ ಮುಗಿದ ನಂತರದಲ್ಲಿ ಮತ್ತು ಈತನಕ ನಾನು ಪೋಷಕರ ಬಳಿ ಹಣ ಕೇಳಿ ಪಡೆದವಳಲ್ಲ. ಗೋವಾಗೆ ಬಂದಾಗ ಯಾರದೋ ಒಬ್ಬರ ಸಣ್ಣಮನೆಯಲ್ಲಿ ದಿನಕ್ಕೆ ರೂ. 250 ಕೊಟ್ಟು ವಾಸಿಸುತ್ತಿದ್ದೆ. ಅದಕ್ಕೆ ಪ್ರತ್ಯೇಕ ಶೌಚಾಲಯವೂ ಇರಲಿಲ್ಲ. ಬೆಳಗ್ಗೆ ತಿಂಡಿ ಬಾಳೆಹಣ್ಣು ಮತ್ತು ಬ್ರೆಡ್​. ದಿನಕ್ಕೆ ರೂ. 100 ಕೊಟ್ಟು ಸೈಕಲ್​ ಬಾಡಿಗೆಗೆ ಪಡೆದು ತಿರುಗಾಡುತ್ತಿದ್ದೆ.’

ಗೋವಾದ ಕಡಲತೀರದಲ್ಲಿ ಸಮೃದ್ಧಿಯ  ಬದುಕು ಹೀಗಿದೆ

ಸಮೃದ್ಧಿಯ ಇನ್​ಸ್ಟಾಗ್ರಾಂನಲ್ಲಿ ಇನ್ನೊಂದು ವಿಡಿಯೋ ಕಣ್ಣಿಗೆ ಬಿದ್ದಿತು. ಆಕೆ ತಾನು ಆಟಿಸ್ಟಿಕ್​ (Autistic) ಎಂದು ಹೇಳಿಕೊಂಡಿದ್ದನ್ನು ಈ ಪೋಸ್ಟ್ ಸೂಚಿಸುತ್ತದೆ. ‘ಆ ದಿನ ನ್ಯೂರೋಸೈಕಾಲಜಿಸ್ಟ್​ ನನಗೆ ಆಟಿಸಂ ಇದೆ ಎಂದರು. ಇಷ್ಟುದಿನ ಬದುಕಿನ ಪ್ರತೀ ಹೆಜ್ಜೆಯೂ ನನಗೆ ಯಾಕೆ ಕಷ್ಟಕರವೆನ್ನಿಸುತ್ತಿದೆ ಎಂದು ತಿಳಿಯಿತು. ನನಗೆ ಆಟಿಸಂ ಇದ್ದಿದ್ದನ್ನು ನಾನು ಕೆಲವರ ಬಳಿ ಹೇಳಿಕೊಂಡೆ. ಆಗ ಅವರು ಹೀಗೆ ಎಲ್ಲರೆದುರು ಹೇಳಿಕೊಳ್ಳಲೇಬೇಕೆ? ಎಂದು ಕೇಳಿದರು. ಅಂಥವರಿಗೆ ಅರ್ಥ ಮಾಡಿಸುವುದು ವ್ಯರ್ಥವೆನ್ನಿಸುತ್ತಿತ್ತು.’

ನಾನು ಆಟಿಸ್ಟಿಕ್​ ಎನ್ನುತ್ತಾರೆ ಸಮೃದ್ಧಿ

‘ಕ್ರಮೇಣ ಇತರರೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದನ್ನು ನಿಲ್ಲಿಸಿದೆ. ಕುಟುಂಬ ಸದಸ್ಯರು, ಬ್ಯಾಚ್​​ಮೇಟ್​, ಸ್ನೇಹಿತರು ಎಲ್ಲರನ್ನೂ ದೂರವಿಟ್ಟೆ. ಪ್ರತೀ ವಾರ ಥೆರಪಿಗೆ ಹೋಗುತ್ತಿದ್ದೆ. ಅಷ್ಟು ದಿನ ನನ್ನನ್ನು ನಾನು ದ್ವೇಷಿಸಿಕೊಳ್ಳುತ್ತಿದ್ದವಳು ಪ್ರೀತಿಸಿಕೊಳ್ಳತೊಡಗಿದೆ. ದೋಷ ಇರುವುದು ಸಮಾಜಕ್ಕೆ. ಪ್ರತಿಯೊಬ್ಬರನ್ನೂ ಸಮಾಜ ಕುತೂಹಲದಿಂದ ಗಮನಿಸಿ ತೀರ್ಮಾನಿಸಲು ಹವಣಿಸುತ್ತಿರುತ್ತದೆ, ಯಾರು ಮೇಲು ಯಾರು ಕೀಳು ಅಂತೆಲ್ಲ. ಆದರೆ ಕ್ರಮೇಣ ನನಗೆ ಭಯವಿಲ್ಲದೇ ಬದುಕಬಲ್ಲೆ ಎಂಬ ಆತ್ಮವಿಶ್ವಾಸ ಚಿಗಿಯತೊಡಗಿತು. ಹೌದು ನಾನು ಆಟಿಸ್ಟಿಕ್​.’

ತನ್ನ ತಾನು ಅರಿತುಕೊಂಡು ತನಗೆ ಬೇಕಾದಂಥ ಬದುಕನ್ನು ಬದುಕುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಸಮಾಜವೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅವಕಾಶ ಕಲ್ಪಿಸಬೇಕು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:22 pm, Mon, 11 September 23