Tea: ಏಲಕ್ಕಿ ಚಹಾ, ಮಸಾಲಾ ಚಹಾ, ನಿಂಬೆಹುಲ್ಲಿನ ಚಹಾ, ವೀಳ್ಯದೆಲೆ ಚಹಾ, ಪುದೀನಾ ಚಹಾ, ನಿಂಬೆ ಚಹಾ, ತುಳಸೀ ಚಹಾ, ದಾಸವಾಳದ ಚಹಾ, ಗುಲಾಬಿ ಚಹಾ… ಹೀಗೆ ಮಸಾಲೆ, ಎಲೆ, ಹೂಪಕಳೆಗಳನ್ನು ಹಾಕಿ ಮಾಡಿದ ಚಹಾ ಕೇಳಿಯೂ ಮತ್ತು ಕುಡಿದೂ ಗೊತ್ತು. ಆದರೆ ಹಣ್ಣಿನ ಚಹಾ!? ಹಿಂದೊಮ್ಮೆ ಬೀದಿಬದಿ ವ್ಯಾಪಾರಿ ಇಂಥದೇ ಒಂದು ಪ್ರಯೋಗ ಮಾಡಿದ್ದ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಚಹಾವಾಲಾ ಮಾತ್ರ ಹೈಟೆಕ್. ಯಾಕೆ ಹೈಟೆಕ್ ಎಂದು ಗುಂಗಿಗೆ ಬಿದ್ದಿರಾ? ನೋಡಿ ಈ ಕೆಳಗಿನ ವಿಡಿಯೋ.
Isko zinda pakadna hai guys.. pic.twitter.com/g2f9aXiVrR
ಇದನ್ನೂ ಓದಿ— Alka Singh (@_singhalka) June 25, 2023
ಇಡೀ ದೇಶ ಅಲ್ಲ ಜಗತ್ತಿನಲ್ಲಿಯೇ ಇಂಥ ಅದ್ಭುತವಾದ ಫ್ರೂಟ್ಸ್ ಚಹಾ ನಿಮಗೆ ದೊರಕದು. ಈತನಕ ಯಾರೂ ಇಂಥ ಪ್ರಯೋಗ ಮಾಡಿಲ್ಲ ಎನ್ನುತ್ತ ಬಾಳೆಹಣ್ಣು, ಸಪೋಟ ಹಣ್ಣನ್ನು ಕುದಿಯುವ ಚಹಾದಲ್ಲಿ ಹಾಕಿ ಕಿವುಚುತ್ತಾನೆ ಮತ್ತದನ್ನು ಕುದಿಸುತ್ತಾನೆ. ಒಂದು ಸಣ್ಣಕಪ್ಪಿನಲ್ಲಿ ಅದನ್ನು ಸೋಸಿ ಬಾಳೆಹಣ್ಣಿನ ಸಿಪ್ಪೆಯೊಳಗಿಟ್ಟು ಕೊಡುತ್ತಾನೆ. ಗೊತ್ತಾಯಿತಲ್ಲ ಅದರ ಬೆಲೆ? ಕೇವಲ ರೂ. 200. ಇದು ಎಕ್ಸ್ಕ್ಲ್ಯೂಸಿವ್, ಫೈವ್ ಸ್ಟಾರ್ ಹೋಟೆಲ್ನಲ್ಲಿಯೂ ಇದು ಲಭ್ಯವಿಲ್ಲ ಎಂದು ಹೇಳುತ್ತಾನೆ. ಗ್ರಾಹಕನೊಬ್ಬ, ಈ ತನಕ ನನ್ನ ಜೀವನದಲ್ಲಿ ಇಷ್ಟು ತುಟ್ಟಿ ಚಹಾ ಕುಡಿದೇ ಇಲ್ಲ ಎನ್ನುತ್ತಾ ಹಣ ಕೊಡುತ್ತಾನೆ.
ಇದನ್ನೂ ಓದಿ : Viral Video: ಬನಾನಾ ಪಾನೀಪುರಿ; ಆಗಲೇ ಕಿವುಚಿದ ಬಾಳೆಹಣ್ಣಿನಂತಾಗೋಯ್ತಾ ನಿಮ್ಮ ಮುಖ?
ಇದನ್ನು ಕುಡಿದ ಮೇಲೆ ಜೀವಂತ ಉಳಿಯುತ್ತಾರಾ? ಆ ಬಾಳೆಹಣ್ಣನ್ನು ಅವನ ಮೂಗಿನಲ್ಲಿ ತುರುಕಬೇಕು. ಇವನು ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಬಹುದು. ನಾನು ಒಂದು ರಜೆ ಹಾಕಿಯಾದರೂ ಇವನನ್ನು ಹುಡುಕೇ ಹುಕುತ್ತೇನೆ. ಐಎಎಸ್ವಾಲಾಗೆ ಬುದ್ಧಿಯೇ ಇಲ್ಲ, ಬಾಳೆಹಣ್ಣನ್ನು ಕತ್ತರಿಸಬಹುದಿತ್ತು. ಈ ಚಹಾ ಅನ್ನು ನನ್ನ ಕಣ್ಣಲ್ಲಿ ಸುರಿಯಿರಿ… ಅಂತೆಲ್ಲ ನೆಟ್ಟಿಗರು ಸಹನೆ ಕಳೆದುಕೊಂಡು ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral: ಲುಂಗೀಧಾರಿ ಬೇರ್ ಗ್ರಿಲ್ಸ್; ‘ಜಂಗಲ್ ಸರ್ವೈವರ್‘ನ ಮುಂದಿನ ಅತಿಥಿ ಯಾರು?
ಚಹಾಪ್ರಿಯ ದೋಸ್ತರನ್ನು ಅನೇಕರು ಈ ವಿಡಿಯೋಗೆ ಟ್ಯಾಗ್ ಮಾಡಿ ಕಾಲೆಳೆಯುತ್ತಿದ್ದಾರೆ. 200 ಅಲ್ಲ 2 ರೂಪಾಯಿ ಕೂಡ ಇವನಿಗೆ ಕೊಡಬಾರದು. ಇಡೀ ಜಗತ್ತಿನ ಮಂದಿಯೆಲ್ಲ ಇವನಿಗೆ ಪಾಠ ಕಲಿಸಬೇಕು, ಹುಚ್ಚು ಹಿಡಿದಿದೆ ಇವನಿಗೆ ಎಂದು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ ಕೆಲಜನ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:33 am, Tue, 27 June 23