Trending: ಅರುಣಾಚಲ ಪ್ರದೇಶ ಮತ್ತು ಲಡಾಖ್​ಗೆ ಐಎಎಸ್ ದಂಪತಿ ವರ್ಗಾವಣೆ, ಶ್ವಾನದ ಪಯಣ ಯಾವ ಕಡೆ? ಇಲ್ಲಿದೆ ಟ್ರೋಲ್ಸ್

| Updated By: Rakesh Nayak Manchi

Updated on: May 27, 2022 | 11:35 AM

ಕ್ರೀಡಾಂಗಣವನ್ನು ಮುಚ್ಚಿಸಿ ಅದರೊಳಗೆ ಸಾಕು ನಾಯಿಯೊಂದಿಗೆ ವಾಕಿಂಗ್ ಮಾಡಿದ ಐಎಎಸ್ ದಂಪತಿಗಳು ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ಇದೀಗ ಅವರ ಸಾಕು ನಾಯಿಯ ಭವಿಷ್ಯದ ಬಗ್ಗೆ ಸಖತ್ ಟ್ರೋಲ್ ಆಗುತ್ತಿದೆ.

Trending: ಅರುಣಾಚಲ ಪ್ರದೇಶ ಮತ್ತು ಲಡಾಖ್​ಗೆ ಐಎಎಸ್ ದಂಪತಿ ವರ್ಗಾವಣೆ, ಶ್ವಾನದ ಪಯಣ ಯಾವ ಕಡೆ? ಇಲ್ಲಿದೆ ಟ್ರೋಲ್ಸ್
ನಾಯಿ ಜೊತೆ ಐಎಎಸ್ ದಂಪತಿಗಲ ವಾಕಿಂಕ್
Follow us on

ಹಿರಿಯ ಐಎಎಸ್​ ಅಧಿಕಾರಿ (IAS Officer) ಸಂಜೀವ್ ಖಿರ್ವಾರ್ ಮತ್ತು ಇವರ ಪತ್ನಿಯೂ ಆಗಿರುವ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಅವರನ್ನು ಕ್ರಮವಾಗಿ ಲಡಾಖ್ (Ladakh)​ಗೆ ಹಾಗೂ ಅರುಣಾಚಲ ಪ್ರದೇಶ (Arunachal Pradesh)ಕ್ಕೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಕಾರಣವೆಂದರೆ, ದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿರುವುದು. ಸಾಮಾನ್ಯ ಸಮಯಕ್ಕಿಂತ ಮುಂಚಿತವಾಗಿ ರಾತ್ರಿ 7 ಗಂಟೆಗೆ ಕ್ರೀಡಾಂಗಣವನ್ನು ಮುಚ್ಚಿಸಿ ದಂಪತಿಗಳು ಅದರೊಳಗೆ ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಇದರಿಂದ ಕ್ರೀಡಾಪಟುಗಳಿಗೆ ಅಡಚಣೆಯಾಗುತ್ತಿತ್ತು. ಅಧಿಕಾರಿಗಳ ನಡೆ ಪ್ರಶ್ನೆಗೆ ಗ್ರಾಸವಾಗಿ ಸುದ್ದಿಗಳು ಪ್ರಸಾರವಾದವು.

ಇದನ್ನೂ ಓದಿ: Trending: ಚೆಂಡು ಕಳೆದುಕೊಂಡು ದುಃಖಿತವಾಗಿರುವ ಮುದ್ದಿನ ಶ್ವಾನವನ್ನು ಸಮಾಧಾನ ಮಾಡುತ್ತಿರುವ ವಿಡಿಯೋ ವೈರಲ್

1994ರ ಐಎಎಸ್ ಬ್ಯಾಚ್​ನವರಾಗಿರುವ ಇವರು ಸದ್ಯ ಲಡಾಖ್​ ಹಾಗೂ ಅರುಣಾಚಲ ಪ್ರದೇಶಕ್ಕೆ ವರ್ಗಾವಣೆಯಾಗಿದ್ದು, ಈಗ ನೆಟ್ಟಿಗರನ್ನು ಕಾಡಿದ ಕಟ್ಟಕಡೇಯ ಪ್ರಶ್ನೆ ನಾಯಿಯ ಪಯಣ ಯಾವ ಕಡೆ? ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಟ್ರೋಲ್ ಕೂಡ ಆಗುತ್ತಿವೆ. ಅವುಗಳು ಈ ಕೆಳಗಿನಂತಿವೆ.

ಇದನ್ನೂ ಓದಿ: Trending: ಕಾಫಿ ಬೀಜಗಳ ಮೇಲೆ ಎಚ್ಚರಿಕೆಯಿಂದ ಕಣ್ಣಾಡಿಸಿ, ಈಗ ನೀವು ಏನನ್ನು ಗುರುತಿಸಿದ್ದೀರಾ?

ಇದನ್ನೂ ಓದಿ: Viral Video: ಸೆಲ್ಫಿ ವಿಡಿಯೋ ಮಾಡುವಾಗ ಬಂದು ಸ್ಕರ್ಟ್​ ಎತ್ತಿ ನೋಡುವುದೇ? ಛಿ! ನಾಟಿ ಮಂಕಿ

ಕ್ರೀಡಾಂಗಣದ ಸಮಯದ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯ ಸರ್ಕಾರಿ ಕ್ರೀಡಾಂಗಣಗಳನ್ನು ಸಂಜೆ 7 ಗಂಟಗೆ ಮುಚ್ಚಲಾಗುತ್ತದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಲ್ಲಾ ಕ್ರೀಡಾಂಗಣಗಳು ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಕ್ರೀಡಾಪಟುಗಳು ಕ್ರೀಡಾಭ್ಯಾಸ ಮಾಡಬಹುದು ಎಂದು ಸೂಚಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:35 am, Fri, 27 May 22