Viral Post: ಮಕ್ಳು ಮಾತ್ರೆ ಕುಡಿಯಲ್ಲ ಅಂತ ಹಠ ಮಾಡಿದ್ರೆ ಹೀಗೆ ಮಾಡಿ, ಇದು ಒಳ್ಳೆಯ ಐಡಿಯಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 28, 2023 | 4:39 PM

ಸಾಮಾನ್ಯವಾಗಿ ಎಲ್ಲಾ ಮಕ್ಳು ಕೂಡ ಮಾತ್ರೆ ಕುಡಿಯಲ್ಲ ಅಂತ ಹಠ ಮಾಡ್ತಾರೆ.  ಮಕ್ಳು ಹುಷಾರು ತಪ್ಪಿದ ಸಂದರ್ಭದಲ್ಲಿ ಅವರಿಗೆ ಮಾತ್ರೆ  ಕುಡಿಸುವುದೇ ಒಂದು ದೊಡ್ಡ ತಲೆನೋವಾಗಿರುತ್ತೆ. ನಿಮ್ಮ ಮನೆಯಲ್ಲೂ ಮಕ್ಕಳು ಇದೇ ರೀತಿ ಹಠ ಮಾಡ್ತಾರಾ? ಹಾಗಿದ್ರೆ  ಮಕ್ಳಿಗೆ ಮಾತ್ರೆ ನುಂಗಿಸಲು ನೀವು ಈ ಸರಳ ಟಿಪ್ಸ್ ಫಾಲೋ ಮಾಡಬಹುದು. ಈ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬನ್ನಿ ಆ ಟಿಪ್ಸ್ ಏನು ಎಂಬುದನ್ನು ನೋಡೋಣ.

Viral Post: ಮಕ್ಳು ಮಾತ್ರೆ ಕುಡಿಯಲ್ಲ ಅಂತ ಹಠ ಮಾಡಿದ್ರೆ ಹೀಗೆ ಮಾಡಿ, ಇದು ಒಳ್ಳೆಯ ಐಡಿಯಾ
ವೈರಲ್​​​ ಪೋಸ್ಟ್​​​​
Follow us on

ಮಕ್ಕಳಿಗೆ ಹೆಚ್ಚಾಗಿ  ಶೀತ, ಜ್ವರ ಇತ್ಯಾದಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ  ಮಕ್ಕಳಿಗೆ ಮಾತ್ರೆ ನುಂಗಿಸುವುದು ಹೆತ್ತವರಿಗೆ ಒಂದು ದೊಡ್ಡ ತಲೆಬಿಸಿಯಾಗಿರುತ್ತೆ, ಯಾಕಂದ್ರೆ ಬಹುತೇಕ ಎಲ್ಲಾ ಮಕ್ಳು ಸಹ  ನನ್ಗೆ ಮಾತ್ರೆ ಬೇಡ, ಅದು ಕಹಿ ಇದೆ ಅಂತೆಲ್ಲಾ ಹಠ ಮಾಡ್ತಾ  ಮಾತ್ರೆ ಕುಡಿಯಲ್ಲ ಅಂತಾರೆ. ಇನ್ನೂ ಕೈ ಕಾಲು ಕಟ್ಟಿ ಒತ್ತಾಯ ಪೂರ್ವವಾಗಿ  ಮಾತ್ರೆ ಕುಡಿಸಿದ್ರೂ  ಮಕ್ಕಳು ಆ ಮಾತ್ರೆನಾ  ಉಗುಳಿಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಈ ಒಂದು ಸರಳ ವಿಧಾನದ ಮೂಲಕ ಮಕ್ಕಳಿಗೆ ಮಾತ್ರೆ ನುಂಗಿಸಬಹುದು.  ಅದೇನಂದ್ರೆ, ಸ್ವಲ್ಪ ರಾಗಿ ಮುದ್ದೆಯನ್ನು ತೆಗೆದುಕೊಂಡು ಅದರ ಮಧ್ಯದಲ್ಲಿ ಮಾತ್ರೆಯನ್ನಿಟ್ಟು, ಆ ರಾಗಿ ಮುದ್ದೆಯನ್ನು ತಿನ್ನಿಸುವ ಮೂಲಕ ಸರಳವಾಗಿ ಮಾತ್ರೆಯನ್ನು ಗುಳುಂ ಅಂತ ನುಂಗಿಸಬಹುದು.  ಈ ಸರಳ ಟಿಪ್ಸ್ ಕುರಿತ  ಪೋಸ್ಟ್ ಒಂದು ಇದೀಗ ವೈರಲ್ ಆಗಿದೆ.

ಈ  ಪೋಸ್ಟ್​​​ನ್ನು ರೇಖಾ ತಿಪಟೂರು ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಜಗತ್ತಿನ ಯಾವುದೇ ಭಾಗದಲ್ಲೂ ಮಕ್ಕಳಿಗೆ ಮಾತ್ರೆ ನುಂಗಿಸಲು ಇಷ್ಟು ಸರಳ, ಸುಲಭ ಮತ್ತು ಸ್ವಾಭಾವಿಕವಾದ ವ್ಯವಸ್ಥೆ ಇಲ್ಲ. ಇದು ನಮ್ಮ ಕರ್ನಾಟಕದ ಹೆಮ್ಮೆ  ʼರಾಗಿ ಮುದ್ದೆʼ ಇದರಲ್ಲಿ ಮಾತ್ರೆನಾ ಗುಳುಂ ಅಂತ ನುಂಗಿಸಬಹುದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.  ಈ ಒಂದು ವೈರಲ್ ಪೋಸ್ಟ್ ಅಲ್ಲಿ  ಸ್ವಲ್ಪ ರಾಗಿ ಮುದ್ದೆಯ ಮಧ್ಯದಲ್ಲಿ ಮಾತ್ರೆಯನ್ನಿಟ್ಟು, ಮಕ್ಕಳಿಗೆ  ಮಾತ್ರೆ ನುಂಗಿಸಬಹುದಾದ ಸರಳ ವಿಧಾನದ ಬಗ್ಗೆ ನೋಡಬಹುದು.

ಇದನ್ನೂ ಓದಿ: ಈ ವ್ಯಕ್ತಿ 180ಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ್ದಾನೆ, ಆದ್ರೆ ಇನ್ನೂ ಮದುವೆಯಾಗಿಲ್ಲ

ವೈರಲ್​​​ ಪೋಸ್ಟ್​​​ ಇಲ್ಲಿದೆ ನೋಡಿ:

ಡಿಸೆಂಬರ್ 27 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 16 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಾತ್ರೆಗಳನ್ನು ಮುದ್ದೆಯೊಳಗೆ ಜಜ್ಜಿ ಹಾಕಿದರೆ ಉತ್ತಮʼ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಈಗಲೂ ಮಾತ್ರೆ ನುಂಗಲು ಈ ವಿಧಾನವನ್ನೇ ಪಾಲಿಸುತ್ತಿದ್ದೇನೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮಗೂ ಸಣ್ಣವರಿದ್ದಾಗ ಮಾತ್ರೆ ನುಂಗಿಸಲು ಇದೇ ವಿಧಾನವನ್ನು ಅನುಸರಿಸುತ್ತಾ ಇದ್ರೂʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಇದೊಂದು ಒಳ್ಳೆಯ ಉಪಾಯ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: