AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಗಂಡನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್​​​​ನಲ್ಲಿ ಫ್ಲಶ್ ಮಾಡಿದ ಪತ್ನಿ;ಅಷ್ಟಕ್ಕೂ ಆತ ಮಾಡಿದ ತಪ್ಪೇನು?

ಗಂಡ ಮಾಡಿದ ಹೀನಾಯ ಕೃತ್ಯಕ್ಕೆ ಹೆಂಡತಿಯೊಬ್ಬಳು ಯಾರೂ ಕೊಡದ ದೊಡ್ಡ ಶಿಕ್ಷೆ ಕೊಟ್ಟಿದ್ದಾಳೆ. ಗಂಡನನ್ನು ಮಂಚಕ್ಕೆ ಕಟ್ಟಿಹಾಕಿ ಆತನ ಗುಪ್ತಾಂಗವನ್ನು ಕತ್ತರಿಸಿ, ಅದನ್ನು ಟಾಯ್ಲೆಟ್​​​​ನಲ್ಲಿ ಫ್ಲಶ್ ಮಾಡಿದ್ದಾಳೆ. ಅಷ್ಟಕ್ಕೂ ಆಕೆಯ ಗಂಡ ಮಾಡಿರುವ ತಪ್ಪೇನು ಗೊತ್ತಾ? ಇಲ್ಲಿದೆ ವಿವರ.

Viral News: ಗಂಡನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್​​​​ನಲ್ಲಿ ಫ್ಲಶ್ ಮಾಡಿದ ಪತ್ನಿ;ಅಷ್ಟಕ್ಕೂ ಆತ ಮಾಡಿದ ತಪ್ಪೇನು?
ಸಾಂದರ್ಭಿಕ ಚಿತ್ರImage Credit source: Pinterest
ಅಕ್ಷತಾ ವರ್ಕಾಡಿ
|

Updated on:Dec 28, 2023 | 6:21 PM

Share

ಗಂಡ ಮಾಡಿದ  ತಪ್ಪಿಗೆ ಪತ್ನಿ ಆತನ ಗುಪ್ತಾಂಗವನ್ನೇ ಕತ್ತರಿಸಿದ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ. ಬಳಿಕ ತಾನು ಈ ರೀತಿ ಮಾಡಿರುವುದಕ್ಕೆ ಕಾರಣಗಳನ್ನು ತಿಳಿಸಿ ಪೊಲೀಸರ ಮುಂದೆ ಶರಣಾಗಿದ್ದಾಳೆ. 15 ವರ್ಷ ಹದಿಹರೆಯದ ತನ್ನ ಸಂಬಂಧಿ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂಬ ಸತ್ಯ ತಿಳಿದ ನಂತರ ಪತ್ನಿ ಆತನ ಗುಪ್ತಾಂಗವನ್ನು ಕತ್ತರಿಸಿ ಶೌಚಾಲಯಕ್ಕೆ ಹಾಕಿದ್ದಾಳೆ. ಇದಲ್ಲದೇ ಗಂಡನ ಖಾಸಗಿ ಅಂಗಗಳನ್ನು ಫ್ಲಶ್ ಮಾಡುವ ಮುನ್ನ ಫೋಟೋ ಕೂಡ ತೆಗೆದುಕೊಂಡಿದ್ದಾಳೆ.

ಮಂಚಕ್ಕೆ ಪತಿಯ ಕೈ ಕಾಲುಗಳನ್ನು ಕಟ್ಟಿ ಕೃತ್ಯ:

ತನ್ನ ರಕ್ತಸಂಬಂಧಿಯಾಗಿರುವ ಹದಿಹರೆಯದ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಕೋಪಗೊಂಡಿದ್ದ ಪತ್ನಿ ತನ್ನ ಪತಿಯನ್ನು ಪ್ರೀತಿಯಿಂದ ಲೈಂಗಿಕ ಕ್ರಿಯೆಗೆ ಕರೆದಿದ್ದಾಳೆ. ಬಳಿಕ ಆತನ ಕೈ ಕಾಲುಗಳನ್ನು ಬಲವಾಗಿ ಹಾಸಿಗೆಗೆ ಕಟ್ಟಿದ್ದಾಳೆ. ಬಳಿಕ ಚಾಕುವಿನ ಸಹಾಯದಿಂದ ಆತನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಬಳಿಕ ಕತ್ತರಿಸಿದ ಅಂಗದ ಪೋಟೋ ತೆಗೆದು ಅದನ್ನು ಶೌಚಾಲಯದಲ್ಲಿ ಹಾಕಿ ಫ್ಲಶ್​​ ಮಾಡಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ, ತಾನು ಮಾಡಿದ ಕೃತ್ಯವನ್ನು ಪೊಲೀಸರಿಗೆ ತಿಳಿಸಿ ಶರಣಾಗಿದ್ದಾಳೆ.

ಇದನ್ನೂ ಓದಿ: ಈ ವ್ಯಕ್ತಿ 180ಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ್ದಾನೆ, ಆದ್ರೆ ಇನ್ನೂ ಮದುವೆಯಾಗಿಲ್ಲ

ಗುಪ್ತಾಂಗವನ್ನು ಟಾಯ್ಲೆಟ್​​​​ಗೆ ಎಸೆದಿದ್ದು ಏಕೆ?

ಅಂಗಾಂಗವನ್ನು ಶೌಚಾಲಯದಲ್ಲಿ ಏಕೆ ಎಸೆದಿದ್ದೀರಿ ಎಂದು ಪೊಲೀಸರು ಆಕೆಯನ್ನು ಪ್ರಶ್ನಿಸಿದಾಗ, ಅದನ್ನು ಮತ್ತೆ ಜೋಡಿಸಬಹುದು ಎಂದು ಎಲ್ಲೋ ನೋಡಿದ್ದೆ, ಅದಕ್ಕಾಗಿ ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:20 pm, Thu, 28 December 23