ವಿದ್ಯಾರ್ಥಿಗಳಿಗೆ ಗಣಿತ ಕಲಿಸಲು MNC ಕೆಲಸ ಬಿಟ್ಟ IIT ಗ್ರಾಜುವೇಟ್‌!

| Updated By: ನಯನಾ ಎಸ್​ಪಿ

Updated on: Feb 22, 2023 | 6:49 PM

ಐಐಟಿ ಪದವೀಧರ ಶ್ರವಣ್ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಹಲವು ವಿಷಯಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ. ಶ್ರವಣ್ ಗಣಿತದ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಗಣಿತ ಕಲಿಸಲು MNC ಕೆಲಸ ಬಿಟ್ಟ IIT ಗ್ರಾಜುವೇಟ್‌!
ಶ್ರವಣ್, ಐಐಟಿ ಪದವೀಧರ
Image Credit source: Twitter
Follow us on

ಭಾರತದ ಐಐಟಿಗಳು ಮತ್ತು ಇತರ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಿಗೆ ಸೇರಲು ಜಂಟಿ ಪ್ರವೇಶ ಪರೀಕ್ಷೆಯನ್ನು (ಜೆಇಇ) ಭೇದಿಸುವುದು ಬಹಳ ಕಷ್ಟ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಮುಂದಾದವರು ಸಾಮಾನ್ಯವಾಗಿ ಕೋಚಿಂಗ್ ಸೇರುತ್ತಾರೆ. ಕೆಲವು ವರ್ಷಗಳಿಂದ ಕೋಚಿಂಗ್ ಸೆಂಟರ್​ಗಳು ಸಾಕಷ್ಟು ಹಣವನ್ನು ಗಳಿಸುತ್ತಿವೆ. ಆದರೆ ಇಂತಹ ಕೋಚಿಂಗ್ ಪಡೆದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪಠ್ಯದ ವಿಷಯಗಳ ಬಗ್ಗೆ ಕಡಿಮೆ ತಿಳುವಳಿಕೆಯನ್ನು ಹೊಂದಿರುತ್ತಾರೆ. ಆದರೆ ಐಐಟಿ ಗುವಾಹಟಿಯ ಪದವೀಧರರೊಬ್ಬರು ಬದಲಾವಣೆಯನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ.

ಐಐಟಿ ಪದವೀಧರ ಶ್ರವಣ್ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಹಲವು ವಿಷಯಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ. ಶ್ರವಣ್ ಗಣಿತದ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಟ್ವಿಟರ್ ಬಳಕೆದಾರರು ಮತ್ತು ಅವರ ಶಾಲಾ ಸ್ನೇಹಿತ ರಾಹುಲ್ ರಾಜ್ ಅವರು ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಶ್ರವಣ ಕೋಚಿಂಗ್ ಸಂಸ್ಥೆಗಳಲ್ಲಿ ಕೆಲಸ ಮಾಡಲು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

“ಶಾಲಾ ಗೆಳೆಯ ಶ್ರವಣ್ ಗಣಿತದ ಮೇಧಾವಿ. ಅವರು ಜೆಇಇ ಪರೀಕ್ಷ್ಯೆಯಲ್ಲಿ ಉತೀರ್ಣರಾಗಿ ಐಐಟಿ ಗುವಾಹಟಿ ಸೇರಿದರು. ಅವರು ಓಟದ MNC ಉದ್ಯೋಗಗಳನ್ನು ತೊರೆದು ಗಣಿತವನ್ನು ಕಲಿಸಲು ಮಾರ್ಗಗಳನ್ನು ಹುಡುಕುತ್ತಿದ್ದರು. ಕೋಚಿಂಗ್ ಸೆಂಟರ್​ಗಳು ಕಳಿಸಲಾಗದ ಗಣಿತದ ಜ್ಞಾನವನ್ನು ವಿದ್ಯಾರ್ಥಿಗರೊಂದಿಗೆ ಹಂಚಿಕೊಳ್ಳಲು ಶ್ರವಣ್ ಋಷಿಗಳಂತೆ, ಪ್ರಯಾಣಿಕರಂತೆ, ಅಲೆಮಾರಿಗಳಂತೆ, ಹುಚ್ಚರಂತೆ ಬದುಕುತ್ತಾರೆ, ”ಎಂದು ರಾಜ್ ಟ್ವೀಟ್ ಮಾಡಿದ್ದಾರೆ.

ರಾಜ್ ಅವರು ಕಾಮೆಂಟ್‌ಗಳ ವಿಭಾಗದಲ್ಲಿ, “ಶ್ರವಣ ಅವರು ಭಾರತದಲ್ಲಿನ ಯಾವುದೇ IIT JEE ಕೋಚಿಂಗ್ ತರಗತಿಯಲ್ಲಿ ಅಧ್ಯಾಪಕ ಸ್ಥಾನವನ್ನು ಪಡೆಯಬಹುದು ಮತ್ತು ಕೋಟಿಗಟ್ಟಲೆ ಸಂಪಾದನೆ ಮಾಡಬಹುದು, ಆದರೆ ಅವರು ಇಂತಹ ಸಂಸ್ಥೆಗಳನ್ನು ಖಂಡಿಸುತ್ತಾರೆ. ಈ ಕ್ವಿಕ್ ಫಿಕ್ಸ್ ತರಗತಿಗಳು ವಿದ್ಯಾರ್ಥಿಗಳಲ್ಲಿ ಗಣಿತವನ್ನು ಕಲಿಯುವ ಉತ್ಸಾಹವನ್ನು ನಾಶಪಡಿಸುತ್ತವೆ ಎಂಬುದು ಅವರ ತಲ್ಲಣ.” ಎಂದು ಬರೆದಿದ್ದಾರೆ

ಇದನ್ನೂ ಓದಿ: ಈ ಅಂಗಡಿಯಲ್ಲಿ ಯಾವುದೇ ವ್ಯಾಪಾರಿ, ಕ್ಯಾಮರಾ, ಸೆಕ್ಯುರಿಟಿಗಳಿಲ್ಲ.. ಆದರೆ ನಂಬಿಕೆ ಮಾತ್ರ ಇದೆ!

ನೆಟ್ಟಿಗರು ಈ ಮನುಷ್ಯನ ನಿಸ್ವಾರ್ಥ ಪ್ರಯತ್ನಗಳಿಂದ ಆಶ್ಚರ್ಯಗೊಂಡು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, “ಇದೊಂದು ಅದ್ಭುತ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, “ಅವರು ಹೇಳಿದಂತೆ ನಿಮಗೆ ಸಂತೋಷವನ್ನುಂಟುಮಾಡುವದನ್ನು ಮಾಡಿ.” ಮೂರನೇ ಬಳಕೆದಾರರು, “ಇವರ ಬಗ್ಗೆ ತಿಳಿದುಕೊಳ್ಳಲು ಅದ್ಭುತ ಎನಿಸುತ್ತಿದೆ. ಇವರು ನನ್ನಂತಹ ಅನೇಕರಿಗೆ ಮಾದರಿಯಾಗಿದ್ದಾರೆ.” ಎಂದು ಟ್ವೀಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Wed, 22 February 23