Viral Video : ಪ್ಲಾಸ್ಟಿಕ್ ಬಳಕೆ, ಪ್ರವಾಸಿಗರ ಬೇಜವಾಬ್ದಾರಿತನದಿಂದಾಗಿ ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉಂಟಾಗಿ, ಕಾಡುಪ್ರಾಣಿಗಳು ಅರಿವಿಲ್ಲದೆ ಪ್ಲಾಸ್ಟಿಕ್ ತಿನ್ನತೊಡಗಿವೆ. ಇದೀಗ ನೀಲಗಿರಿ ಬೆಟ್ಟಗಳಲ್ಲಿರುವ ಬಂಡೀಪುರ ಮತ್ತು ಮದುಮಲೈ ಪ್ರದೇಶದಲ್ಲಿ ಆನೆಯೊಂದು ಪ್ಲಾಸ್ಟಿಕ್ ಚೀಲವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ಲಾಸ್ಟಿಕ್ ಆನೆಯ ಜೀವಕ್ಕೆ ಅಪಾಯಕಾರಿ ಎಂಬ ಕಳವಳಕ್ಕೆ ನೆಟ್ಟಿಗರು ಬಿದ್ದಿದ್ದಾರೆ. ಐಪಿಎಸ್ ಅಧಿಕಾರಿ ಸುಸಾಂತ ನಂದಾ ಟ್ವಿಟರ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
Only we humans create waste that nature can’t digest☹️
This video said to be from Nilgiri’s breaks my heart. Plastics can be dangerous for even such a gigantic animal. It can block the alimentary canal. Urging everyone to be responsible in safe disposal of single use plastics?? pic.twitter.com/fiOsCvRPYI ಇದನ್ನೂ ಓದಿ— Susanta Nanda IFS (@susantananda3) September 21, 2022
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಅನೇಕರು, ತ್ಯಾಜ್ಯ ನಿರ್ವಹಣೆ ಪ್ರವಾಸಿಗರ ಜವಾಬ್ದಾರಿಯೂ ಹೌದು. ಹಾಗಾಗಿ ಅರಣ್ಯ ಇಲಾಖೆಯು ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಎಂದಿದ್ದಾರೆ.
‘ರಾಷ್ಟ್ರೀಯ ಉದ್ಯಾನವನಗಳಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಅದು ನೀರು ಅಥವಾ ಹಾಗೂ ಇನ್ನಿತರೇ ನೆಪದಲ್ಲಿ ಪ್ಲಾಸ್ಟಿಕ್ ಕಾಡು ಸೇರದಂತೆ ನೋಡಿಕೊಳ್ಳಬೇಕು. ಈ ನಿಯಮ ಮುರಿದವರಿಗೆ ದಂಡ ವಿಧಿಸಬೇಕು ಆಗ ಮಾತ್ರ ಜನ ಎಚ್ಚೆತ್ತುಕೊಳ್ಳುತ್ತಾರೆ. ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಲಾರರು’ ಎಂದು ಟ್ವಿಟರ್ ಖಾತೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಇನ್ನೊಬ್ಬ ಖಾತೆದಾರರು, ‘ರೈಲಿನ ಸ್ವಚ್ಛತಾ ಸಿಬ್ಬಂದಿಯು ಪ್ಲಾಸ್ಟಿಕ್ ಬಾಟಲಿ, ತ್ಯಾಜ್ಯಗಳನ್ನು ಎರಡು ಬೋಗಿಗಳ ನಡುವೆ ಇರುವ ಜಾಗದಿಂದ ರೈಲ್ವೆ ಟ್ರ್ಯಾಕ್ ಮೇಲೆ ಎಸೆಯುವುದನ್ನು ನೋಡಿದ್ದೇನೆ. ಕಾಡಿನ ಮಧ್ಯೆ ಇರುವ ಕೆಲ ರೈಲ್ವೆ ಹಳಿಗಳ ಬಳಿ ಕಾಡುಪ್ರಾಣಿಗಳು ಓಡಾಡುವಾಗ ಈ ತ್ಯಾಜ್ಯವನ್ನು ತಿನ್ನುವ ಅಪಾಯ ಇದೆ’ ಎಂದಿದ್ದಾರೆ.
1.8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. 323 ಜನರು ರೀಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ