Viral : ಚಿನ್ನ ಎಷ್ಟು ಹಳೆಯದಾದರೂ ಚಿನ್ನವೇ. ವ್ಯಾಮೋಹ ಅಷ್ಟು ಸುಲಭವಾಗಿ ಬಿಡದು. ಅದರಲ್ಲಿಯೂ ಹಳೆಯ ಆಭರಣಗಳ ಸೊಗಸೇ ಬೇರೆ. ಒಂದೊಂದು ಆಭರಣದ ಹಿಂದೆಯೂ ಅದರದೇ ಆದ ಇತಿಹಾಸ ಇದ್ದೇ ಇರುತ್ತದೆ. ಆ ಕಾಲದ ವಿನ್ಯಾಸ, ಸೊಬಗು, ಅಭಿರುಚಿಯೂ ಅದರದೇ ಆದ ಮಹತ್ವವನ್ನು ಹೊಂದಿರುತ್ತದೆ. ಇದೀಗ ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಜಿಯು ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ಪತ್ತೆಯಾದ ಬಂಗಾರದ ಹಳೆಯ ನೆಕ್ಲೇಸ್ ಬಗ್ಗೆ ಮಾಹಿತಿ ನೀಡಿದೆ.
ಇಂಗ್ಲೆಂಡಿನಲ್ಲಿ 1,300 ಹಳೆಯದಾದ ಬಂಗಾರದ ನೆಕ್ಲೆಸ್ ಪತ್ತೆಯಾಗಿದೆ. ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಜಿ (MOLA) ವೆಬ್‌ಸೈಟ್ ಈ ಬಗ್ಗೆ ಮಾಹಿತಿ ನೀಡಿದೆ. ಆ್ಯಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ, ಈ ಹಳೆಯ ಚಿನ್ನ ಮತ್ತು ಹರಳುಗಳಿಂದ ಕೂಡಿದ ನೆಕ್ಲೇಸ್ ಇದಾಗಿದೆ. ಕ್ರಿ.ಪೂ 630 ಮತ್ತು 670 ನಡುವೆ ಇದನ್ನು ತಯಾರಿಸಲಾಗಿದ್ದು ಈತನಕ ಬ್ರಿಟನ್ನಲ್ಲಿ ದೊರೆತ ಪುರಾತನ ಚಿನ್ನದ ಸರಗಳಲ್ಲೇ ಇದು ಅತ್ಯಂತ ಬೆಲೆಯುಳ್ಳದ್ದಾಗಿದೆ.
ಇದನ್ನೂ ಓದಿ : ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್ ತಿನ್ನುತ್ತಿರುವ ವಿಡಿಯೋ ವೈರಲ್
ಈ ಸರಕ್ಕೆ ಜೋಡಿಸಿರುವ ಪದಕಗಳು ಅತ್ಯಾಕರ್ಷಕವಾಗಿವೆ. ಬಂಗಾರದ ರೋಮನ್ ನಾಣ್ಯಗಳು ಮತ್ತು ಚಿನ್ನದ ಚೌಕಟ್ಟಿನಲ್ಲಿ ಕೂರಿಸಲಾದ ಹರಳುಗಳಿಂದ ಪದಕಗಳನ್ನು ತಯಾರಿಸಲಾಗಿದೆ. ಜೊತೆಗೆ ಚಿನ್ನದ ಮಣಿಗಳಿಂದ ನೆಕ್ಲೇಸ್ ಅಲಂಕರಿಸಲಾಗಿದೆ. ಮಧ್ಯದಲ್ಲಿರುವ ದೊಡ್ಡ ಪದಕವು ಆಯರಾಕಾರದಿಂದ ಮಾಡಿದ ಚಿನ್ನದ ಕಟ್ಟನ್ನು ಹೊಂದಿದ್ದು, ಕೆಂಪು ಗಾರ್ನೆಟ್ನಿಂದ ಅಲಂಕೃತಗೊಂಡಿದೆ. ಗಾರ್ನೆಟ್ ಅನ್ನು ಶಿಲುಬೆಯಾಕಾರದಲ್ಲಿ ಜೋಡಿಸಲಾಗಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ