
ವಿಶೇಷವಾಗಿ ಭಾರತ ಮತ್ತು ಪಾಕ್ ತಂಡದ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ ತಂಡ ಸೋತರೆ ಪ್ರತಿ ಬಾರಿಯೂ ಪಾಕ್ ಅಭಿಮಾನಿಗಳು ನಮ್ಮ ತಂಡ ಭಾರತದ ವಿರುದ್ಧ ಹೀನಾಯವಾಗಿ ಸೋಲುಂಡಿತು ಎಂದು ನಿರಾಸೆಯಿಂದ ಟಿವಿಯನ್ನು ಒಡೆದು ಹಾಕುತ್ತಾರೆ. ಪಾಕ್ ಅಭಿಮಾನಿಗಳು ಟಿವಿ ಒಡೆದು ಹಾಕಿ ಕೋಪ ತೀರಿಸಿಕೊಳ್ಳುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಈ ಬಾರಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ರ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕ್ ವಿರುದ್ಧ ಭರ್ಜರಿ ಜಯ ಗಳಿಸಿದ್ದು, ವಿಶೇಷವಾಗಿ ದೆಹಲಿ ಪೊಲೀಸ್ ಮತ್ತು ಬ್ಲಿಂಕಿಟ್ ಸೋಷಿಯಲ್ ಮೀಡಿಯಾದಲ್ಲಿ ಟಿವಿ ಮೀಮ್ಸ್ ಹರಿಬಿಡುವ ಮೂಲಕ ಪಾಕ್ ಅಭಿಮಾನಿಗಳ ಕಾಲೆಳೆದಿದ್ದಾರೆ. ಹೌದು 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೆ ನಮ್ಮಿಂದ ಸಾಧ್ಯವಿಲ್ಲ ಎಂದು ಬ್ಲಿಂಕಿಟ್ ತಮಾಷೆ ಮಾಡಿದ್ದು, ಈ ಮೀಮ್ಸ್ ಇದೀಗ ಸಖತ್ ವೈರಲ್ ಆಗುತ್ತಿದೆ.
ಆನ್‌ಲೈನ್ ಡೆಲಿವರಿ ಅಪ್ಲಿಕೇಷನ್‌ಗಳಲ್ಲಿ ಒಂದಾದ ಬ್ಲಿಂಕಿಟ್ (Blinkit) “ಪಾಕ್ ಅಭಿಮಾನಿಗಳೇ ಕ್ಷಮಿಸಿ; ನಾವು ನಿಮಗೆ 10 ನಿಮಿಷಗಳಲ್ಲಿ ಟಿವಿಯನ್ನು ಡೆಲಿವರಿ ಮಾಡಲು ಸಾಧ್ಯವಿಲ್ಲ” ಎಂಬ ವೀಮ್ಸ್ ಒಂದನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡುವ ಮೂಲಕ ಪಾಕ್ ಅಭಿಮಾನಿಗಳ ಕಾಲೆಳೆದು, ಭಾರತದ ಗೆಲುವನ್ನು ಸಂಭ್ರಮಿಸಿದೆ. ಬ್ಲಿಂಕಿಟ್‌ನ ಈ ಫನ್ನಿ ಮೀಮ್ಸ್ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
Sorry, not sorry 🤭 pic.twitter.com/79QlLTTHrU
— Blinkit (@letsblinkit) February 23, 2025
ಇನ್ನೂ ದೆಹಲಿ ಪೊಲೀಸ್ ಕೂಡಾ ನಮ್ದು ಒಂದು ಇರ್ಲಿ ಎನ್ನುತ್ತಾ ಪಾಕ್ ಅಭಿಮಾನಿಗಳ ಕಾಲೆಳೆದಿದ್ದಾರೆ. ಹೌದು “ಪಕ್ಕದ ದೇಶದಿಂದ ಕೆಲವು ವಿಚಿತ್ರವಾದ ಶಬ್ದಗಳು ಕೇಳಿ ಬರುತ್ತಿವೆ. ಅದು ಕೇವಲ ಟಿವಿಗಳು ಮಾತ್ರ ಒಡೆದು ಹೋಗಿದ್ದು ಎಂದು ನಾವು ಭಾವಿಸುತ್ತೇವೆ” ಎಂದು ಹೇಳುವ ಮೂಲಕ ಪಾಕ್ ಅಭಿಮಾನಿಗಳ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಇದು ಲೇಸ್ ಚಿಪ್ಸ್ ಆಮ್ಲೆಟ್ ಅಂತೆ, ನೀವೇನಾದ್ರೂ ಟ್ರೈ ಮಾಡ್ತೀರಾ
Delhi Police ಅಧೀಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದೆಹಲಿ ಪೊಲೀಸರ ಹಾಸ್ಯ ಪ್ರಜ್ಞೆ ತುಂಬಾ ಚೆನ್ನಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಈಗ ಮುಖ್ಯವೇ; ಈ ಅನುಪಯುಕ್ತ ಟ್ವೀಟ್ ಬದಲು ಕಾನೂನು ಹಾಗೂ ಸುವ್ಯವಸ್ಥೆಯನ್ನು ನೋಡಿಕೊಳ್ಳಿʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ