Viral: ಚೀನಾ vs ಭಾರತ ಸೇನೆ ನಡುವೆ ಹಗ್ಗ ಜಗ್ಗಾಟ; ರೋಚಕ ಪಂದ್ಯದಲ್ಲಿ ಚೀನಾ ಯೋಧರನ್ನು  ಸೋಲಿಸಿದ ಭಾರತೀಯ ಸೇನೆ

ವಿಶ್ವ ಸಂಸ್ಥೆಯ ಶಾಂತಿಪಾಲನಾ ಕಾರ್ಯಾಕ್ರಮದ ಭಾಗವಾಗಿ ಸುಡಾನ್‌ನಲ್ಲಿ ಆಯೋಜಿಸಲಾಗಿದ್ದ ʼಟಗ್‌-ಆಫ್-ವಾರ್‌ʼ ಸ್ಪರ್ಧೆಯಲ್ಲಿ ಚೀನಾ ಸೈನಿಕರನ್ನು ಭಾರತೀಯ ಸೇನೆಯ ಸೈನಿಕರು ಸೋಲಿಸಿದ್ದಾರೆ. ಉಭಯ ದೇಶಗಳ ಸೈನಿಕರ ಸೌಹಾರ್ದಯುತವಾದ ಈ ಸ್ಪರ್ಧೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

Viral: ಚೀನಾ vs ಭಾರತ ಸೇನೆ ನಡುವೆ ಹಗ್ಗ ಜಗ್ಗಾಟ; ರೋಚಕ ಪಂದ್ಯದಲ್ಲಿ ಚೀನಾ ಯೋಧರನ್ನು  ಸೋಲಿಸಿದ ಭಾರತೀಯ ಸೇನೆ
Edited By:

Updated on: May 31, 2024 | 5:18 PM

ಏಷ್ಯಾ ಖಂಡದಲ್ಲಿ ಬಲಿಷ್ಠ ರಾಷ್ಟ್ರಗಳು ಎಂಬ ಹೆಸರು ಪಡೆದಿರುವ ಭಾರತ ಮತ್ತು ಚೀನಾ ಬದ್ಧ ವೈರಿಗಳು ಅಂತಾನೇ ಹೇಳಬಹುದು. 1962 ರಿಂದಲೂ  ಚೀನಾ-ಭಾರತ ಬಾರ್ಡರ್‌ ಫೈಟ್‌ ನಡೆಯುತ್ತಲೇ ಇವೆ. ಇದೀಗ ಈ ಎರಡು ರಾಷ್ಟ್ರಗಳಿಗೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್‌ ಆಗಿದ್ದು, ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸೌಹಾರ್ದಯುತ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ನಮ್ಮ ಹೆಮ್ಮೆಯ ಭಾರತೀಯ ಸೇನೆ  ಚೀನಾ ಯೋಧರನ್ನು ಸೋಲಿಸಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಆಫ್ರಿಕಾದ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಕ್ರಮದ ಭಾಗವಾಗಿ  ಆಯೋಜಿಸಲಾಗಿದ್ದ ಸೌಹಾರ್ದಯುತ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ  ಭಾರತೀಯ ಸೇನೆಯ ಯೋಧರು ಚೀನಾದ ಸೈನಿಕರನ್ನು ಸೋಲಿಸಿದ್ದಾರೆ.
ಈ ಕುರಿತ ವಿಡಿಯೋವೊಂದನ್ನು  ಸುದ್ದಿ ಸಂಸ್ಥೆ ANI ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಯುಎನ್‌ ಶಾಂತಿಪಾಲನಾ ಕಾರ್ಯಕ್ರಮದ ಅಡಿಯಲ್ಲಿ ಸುಡಾನ್‌ನಲ್ಲಿ ಆಯೋಜಿಸಲಾದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚೀನಾ ಸೈನಿಕರ ವಿರುದ್ಧದ ಪಂದ್ಯದಲ್ಲಿ ಭಾರತೀಯ ಯೋಧರು ರೋಚಕ ಜಯ ಸಾಧಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

49 ಸೆಕೆಂಡುಗಳ ಈ ವೈರಲ್‌ ವಿಡಿಯೋದಲ್ಲಿ ಭಾರತೀಯ ಸೈನ್ಯ ಮತ್ತು ಚೀನಾ ಸೈನ್ಯದ ನಡುವೆ ನಡೆದ ಸೌಹಾರ್ದಯುತ, ಮೋಜಿನ ಹಗ್ಗಜಗ್ಗಾಟ ಸ್ಪರ್ಧೆಯನ್ನು ಕಾಣಬಹುದು. ಈ ಪಂದ್ಯದಲ್ಲಿ ಭಾರತೀಯ ಯೋಧರು ರೋಚಕ ಜಯವನ್ನು ಸಾಧಿಸಿದ್ದಾರೆ.

ಇದನ್ನೂ ಓದಿ: ಬಾಡಿಗೆ ಗರ್ಲ್ ಫ್ರೆಂಡ್; ಈ ಹುಡುಗಿಯ ಕಡೆಯಿಂದ ಸಿಂಗಲ್ಸ್​​​​ ಹುಡುಗರಿಗೆ ಬಿಗ್​​ ಆಫರ್​

ಮೇ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡುತ್ತಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ